Asianet Suvarna News Asianet Suvarna News

ಸಂಗಾತಿ ಮೃತದೇಹ ತುಂಡು ತುಂಡು ಮಾಡಿ ಬೀದಿ ನಾಯಿಗೆ ಹಾಕ್ದ: ಶ್ರದ್ಧಾ ವಾಕರ್‌ ಹಂತಕನೇ ಇವನಿಗೆ ಸ್ಪೂರ್ತಿ!

ಸಾಕ್ಷ್ಯ ನಾಶಪಡಿಸಲು ಆರೋಪಿ ಆಕೆಯ ದೇಹದ ಕೆಲ ಭಾಗಗಳನ್ನು ಕುಕ್ಕರ್‌ನಲ್ಲಿ ಬೇಯಿಸಿ ನಾಯಿಗೆ ತಿನ್ನಿಸಿದ್ದಾರೆ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

mumbai live in partner cooks pieces of dead body and feeds dog to destroy evidence shraddha walkar case inspiration ash
Author
First Published Jun 8, 2023, 4:38 PM IST

ಮುಂಬೈ (ಜೂನ್ 8, 2023): ಮಹಾರಾಷ್ಟ್ರ ರಾಜಧಾನಿ ಹಾಗೂ ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಭೀಕರ ಹತ್ಯೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮುಂಬೈನ ಮೀರಾ ರಸ್ತೆಯಲ್ಲಿ 56 ವರ್ಷದ ಆರೋಪಿ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ತನ್ನ 32 ವರ್ಷದ ಗೆಳತಿಯನ್ನು ಕೊಂದು ಸಣ್ಣ ತುಂಡುಗಳನ್ನಾಗಿ ಕತ್ತರಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಅಲ್ಲದೆ, ಸಾಕ್ಷ್ಯ ನಾಶಪಡಿಸಲು ಆರೋಪಿ ಆಕೆಯ ದೇಹದ ಕೆಲ ಭಾಗಗಳನ್ನು ಕುಕ್ಕರ್‌ನಲ್ಲಿ ಬೇಯಿಸಿ ನಾಯಿಗೆ ತಿನ್ನಿಸಿದ್ದಾರೆ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ. ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ಆತನನ್ನು ಪೊಲೀಸರು ಬಂಧಿಸಿದ್ದಾರೆ ಎಂದೂ ತಿಳಿದುಬಂದಿದೆ. ಮನೋಜ್ ಸಾಹ್ನಿ (56) ಮತ್ತು ಸರಸ್ವತಿ ವೈದ್ಯ (32) ಇಲ್ಲಿನ ಗೀತಾ ಆಕಾಶ್ ದೀಪ್ ಕಟ್ಟಡದ ಫ್ಲಾಟ್ ಸಂಖ್ಯೆ 704 ರಲ್ಲಿ ಮೂರು ವರ್ಷಗಳಿಂದ ಬಾಡಿಗೆಗೆ ವಾಸಿಸುತ್ತಿದ್ದರು ಎಂದೂ ವರದಿಯಾಗಿದೆ.

ಇದನ್ನು ಓದಿ: ಸಂಗಾತಿಯನ್ನು ಬರ್ಬರ ಹತ್ಯೆ ಮಾಡಿ 20ಕ್ಕೂ ಹೆಚ್ಚು ತುಂಡು ತುಂಡಾಗಿ ಕತ್ತರಿಸಿದ ಪಾಪಿ: ಬೆಚ್ಚಿಬಿದ್ದ ಮುಂಬೈ

ಬುಧವಾರ ರಾತ್ರಿ ಈ ಫ್ಲಾಟ್‌ನಿಂದ ದುರ್ವಾಸನೆ ಬರುತ್ತಿದ್ದು, ಅನುಮಾನಾಸ್ಪದ ಚಟುವಟಿಕೆಗಳಿಂದಾಗಿ ನಿವಾಸಿಗಳು ನಯಾನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ, ಹಿರಿಯ ನಿರೀಕ್ಷಕ ಜಿತೇಂದ್ರ ವನಕೋಟಿ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿದೆ. ಅದೇ ಸಮಯಕ್ಕೆ ಲಿಫ್ಟ್‌ನಿಂದ ಓಡಿ ಬಂದ ಮನೋಜ್ ಸಾಹ್ನಿ ಅವರನ್ನು ಹಿಡಿದರು.

ಬಳಿಕ, ಫ್ಲಾಟ್‌ನ ಬಾಗಿಲು ತೆರೆದಾಗ ಮಾನವ ದೇಹದ ಹಲವಾರು ತುಂಡುಗಳು ಕಾಣಿಸಿದವು. ಘಟನಾ ಸ್ಥಳದಲ್ಲಿ ಉಪ ಪೊಲೀಸ್ ಆಯುಕ್ತ ಜಯಂತ್ ಬಜಬಲೆ ಉಪಸ್ಥಿತರಿದ್ದರು. ತಡರಾತ್ರಿಯವರೆಗೂ ಮನೋಜ್ ಸಾಹ್ನಿ ವಿರುದ್ಧ ಕೊಲೆ ಪ್ರಕರಣ ದಾಖಲಿಸುವ ಪ್ರಕ್ರಿಯೆ ನಡೆದಿದೆ. 

ಇದನ್ನೂ ಓದಿ: Bengaluru Crime: ಯುವತಿಯನ್ನು ಉಸಿರುಗಟ್ಟಿಸಿ ಕೊಲೆ: ಬಾಯ್‌ಫ್ರೆಂಡ್‌ಗಾಗಿ ಪೊಲೀಸರ ಹುಡುಕಾಟ

ಮೂಲಗಳ ಪ್ರಕಾರ, ಜೂನ್ 4 ರಂದು ಮನೋಜ್‌ ಸಾಹ್ನಿ ಸರಸ್ವತಿಯನ್ನು ಕೊಂದು ಕಟರ್‌ನಿಂದ ತುಂಡರಿಸಿದ್ದಾನೆ. ಆಕೆಯ ದೇಹವನ್ನು ವಿಲೇವಾರಿ ಮಾಡಲು ಅವರು ಕೆಲವು ತುಂಡುಗಳನ್ನು ಬೇಯಿಸಿ ಬೀದಿ ನಾಯಿಗಳಿಗೆ ತಿನ್ನಿಸುತ್ತಿದ್ದರು ಎಂದು ಹೇಳಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯಾವ ಕಾರಣಕ್ಕಾಗಿ ಮತ್ತು ಹೇಗೆ ಕೊಂದರು ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಉಪ ಪೊಲೀಸ್ ಆಯುಕ್ತ ಜಯಂತ್ ಬಜಬಲೆ ತಿಳಿಸಿದ್ದಾರೆ.

ಹತ್ತು ವರ್ಷಗಳಿಂದ ಇವರಿಬ್ಬರ ನಡುವೆ ಸಂಬಂಧ
ಮನೋಜ್‌ ಸಾಹ್ನಿ ಪಡಿತರ ಅಂಗಡಿ ಹೊಂದಿದ್ದು, ಆತನಿಗೂ ಸರಸ್ವತಿ ವೈದ್ಯಳಿಗೂ 10 ವರ್ಷಗಳಿಂದ ಅನೈತಿಕ ಸಂಬಂಧವಿತ್ತು. ಇಬ್ಬರೂ ಗಂಡ ಹೆಂಡತಿಯಂತೆ ಬದುಕುತ್ತಿದ್ದರು. ಕಳೆದ ಕೆಲ ದಿನಗಳಿಂದ ಜಗಳ ನಡೆಯುತ್ತಿತ್ತು ಎಂದೂ ತಿಳಿದುಬಂದಿದೆ.

ಇದನ್ನೂ ಓದಿ: ಶ್ರದ್ಧಾ ವಾಕರ್ ಹತ್ಯೆ ಕೇಸ್‌: ತಾನು ನಿರಪರಾಧಿ, ವಿಚಾರಣೆ ಎದುರಿಸಲು ಸಿದ್ಧ ಎಂದ ಅಫ್ತಾಬ್‌ ಪೂನಾವಾಲ

ಶ್ರದ್ಧಾ ವಾಕರ್ ಹತ್ಯಾಕಾಂಡದಿಂದ ಸ್ಪೂರ್ತಿ
ಮನೋಜ್‌ ಸಾಹ್ನಿ ಸರಸ್ವತಿಯ ದೇಹವನ್ನು ಕಟರ್‌ನಿಂದ ಹಲವಾರು ತುಂಡುಗಳಾಗಿ ಕತ್ತರಿಸಿದ್ದು, ಏಕೆಂದರೆ ಅವನು ಅವಳನ್ನು ಕೊಲ್ಲಲು ಮತ್ತು ಸಾಕ್ಷ್ಯವನ್ನು ನಾಶಮಾಡಲು ಬಯಸಿದನು ಎಂದು ಹೇಳಲಾಗಿದೆ. ಅಲ್ಲದೆ, ಪ್ರಮುಖವಾಗಿ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದಿಂದ ಸರಸ್ವತಿಯ ದೇಹವನ್ನು ತುಂಡರಿಸುವ ಆಲೋಚನೆ ಆರೋಪಿಗೆ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಗರ್ಲ್‌ಫ್ರೆಂಡ್‌ ಕೊಲೆ ಮಾಡಿ ಪೀಸ್‌ ಪೀಸ್‌ ಮಾಡ್ದ: ಕೈಕಾಲು ಫ್ರಿಡ್ಜ್‌ನಲ್ಲಿ, ಡೆಡ್‌ಬಾಡಿ ಸೂಟ್‌ಕೇಸ್‌ನಲ್ಲಿಟ್ಟ ಪಾಪಿ!

Follow Us:
Download App:
  • android
  • ios