Asianet Suvarna News Asianet Suvarna News

Bengaluru ಹುಟ್ಟುಹಬ್ಬದಂದೇ ಕೊಲೆ ಕೇಸ್‌ಗೆ ಬಿಗ್ ಟ್ವಿಸ್ಟ್: ಪೊಲೀಸ್ ತನಿಖೆಯಲ್ಲಿ ಆಘಾತಕಾರಿ ಸಂಗತಿ ಬೆಳಕಿಗೆ

ಹುಟ್ಟುಹಬ್ಬದಂದೇ ಬರ್ಬರವಾಗಿ ಕೊಲೆಯಾಗಿದ್ದ ಯುವಕ ಹೇಮಂತ್​ ಪ್ರಕರಣಕ್ಕೆ ಆರೋಪಿಯನ್ನು ಬಂಧಿಸಿದ್ದು, ಇದರ ಹಿಂದೆ ಕುಖ್ಯಾತ ಪಾತಕಿಯ ಕೈವಾಡ ಶಂಕೆ ವ್ಯಕ್ತವಾಗಿದೆ,

kengeri Police Arrests Accused In  Youth murdered Case July 16 at Bengaluru rbj
Author
Bengaluru, First Published Jul 23, 2022, 10:54 PM IST | Last Updated Jul 23, 2022, 10:54 PM IST

ವರದಿ: ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್.ಬೆಂಗಳೂರು

ಬೆಂಗಳೂರು, (ಜುಲೈ.23):
ಹುಟ್ಟುಹಬ್ಬದಂದೇ ಬರ್ಬರವಾಗಿ ಕೊಲೆಯಾಗಿದ್ದ ಯುವಕ ಹೇಮಂತ್​ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಹೇಮಂತ್​ ಕೊಲೆ ಹಿಂದೆ ಕುಖ್ಯಾತ ಪಾತಕಿಯ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. 

20ಕ್ಕೂ ಹೆಚ್ಚು ಪ್ರರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ರೌಡಿ ಕುಳ್ಳು ರಿಜ್ವಾನ್​ ಬಗ್ಗೆ ಗೊತ್ತಿಲ್ಲ ಅಂದಿದ್ದಕ್ಕೇ ಹೇಮಂತ್​ ಬರ್ಬರವಾಗಿ ಕೊಲೆಯಾಗಿ ಹೋಗಿದ್ದ. ನಗರದಲ್ಲಿ ಜುಲೈ 16 ರಂದು ಕೆಂಗೇರಿಯ ಕೋನಸಂದ್ರ ಮುಖ್ಯರಸ್ತೆಯಲ್ಲಿರುವ ಅಂಡರ್​ ಪಾಸ್​ ಬಳಿ  ರುಂಡವಿಲ್ಲದ ದೇಹವೊಂದು ಸಿಕ್ಕಿದ್ದು ಸುದ್ದಿಯಾಗಿತ್ತು. ಅದು ಟಿ.ಗೊಲ್ಲಹಳ್ಳಿ ನಿವಾಸಿ ಹೇಂಮತ್ ಎಂಬ ಯುವಕ ದೇಹ ಅನ್ನೋದು ತಿಳಿದಿತ್ತು. ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳಲು ಹಿಂದಿನ ರಾತ್ರಿ ಸ್ನೇಹಿತರ ಜತೆಗೆ ಹೋಗಿದ್ದ ಹೇಮಂತ್​ ರಾತ್ರಿ ಕಳೆಯುವಷ್ಟರಲ್ಲಿ ಭೀಕರವಾಗಿ ಕೊಲೆಯಾಗಿದ್ದ. 

Bengaluru Crime News: ಹುಟ್ಟು ಹಬ್ಬದಂದೇ ಯುವಕನ ಭೀಕರ ಹತ್ಯೆ

ಹೇಮಂತ್​ ಕೊಲೆಗೆ ಮುನ್ನ ಮಸ್ಸಿಗೆ ಬಂದಂತೆ ಚಾಕುವಿನಿಂದ ಇರಿದು, ನಂತ್ರ ಆತನ ತಲೆಯನ್ನು ಜಚ್ಚಿ ಹಾಕಲಾಗಿತ್ತು. ಮೃತ ದೇಹ ಸಿಕ್ಕಾಗ ಅಲ್ಲಿ ತಲೆ ಇತ್ತು ಅನ್ನೋದು ಗೊತ್ತಾಗದಂತ ಸ್ಥಿತಿಯಲ್ಲಿ ದೇಹ ಪತ್ತೆಯಾಗಿತ್ತು. ಈ ಕೊಲೆಯನ್ನ ಕಂಡ ಪೊಲೀಸ್ರು ಹಂತಕರಿಗೆ ಅದ್ಯಾವ ಪರಿ ಕೋಪ ಇರಬಹುದೆಂದು ಯೋಚಿಸಿದ್ರು.‌ 

ಬಳಿಕ ಇಷ್ಟೊಂದ್ ಕ್ರೂರವಾಗಿ ಹತ್ಯೆಗೈದ ಹಂತಕರ ಪತ್ತೆಗೆ ವಿಶೇಷ ತಂಡಗಳನ್ನ ರಚಿಸಿ ಶೋಧ ಕಾರ್ಯ ಮುಂದುವರೆಸಿದ್ರು. ಆದ್ರೆ, ಸದ್ಯ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಹೇಮಂತ್ ಹತ್ಯೆಯಾಗಿದ್ದು, ರೌಡಿಶೀಟರ್ ಯಾರೆಂದು ಗೊತ್ತಿಲ್ಲ ಎಂದು ಹೇಳಿದ ಒಂದೇ ಒಂದು ಕ್ಷುಲ್ಲಕ ಕಾರಣಕ್ಕೆ ಅನ್ನೋದು ಪೊಲೀಸ್ರ ತನಿಖೆಯಿಂದ ಬೆಳಕಿಗೆ ಬಂದಿದೆ. ಹೌದು, ಹೇಮಂತ್ ಹತ್ಯೆ ಹಿಂದೆ ಪೊಲೀಸ್ರು ಊಹಿಸಿದಂತೆ ಆತನ‌ ಯಾವ ಸ್ನೇಹಿತರ ಕೈವಾಡ ಇಲ್ಲ. ಬದಲಿಗೆ ಬೆಂಗಳೂರಿನ ಕೆ.ಜಿ. ನಗರ ಪೊಲೀಸ್ರ ಅತಿಥಿಯಾಗಿರೋ ಕುಖ್ಯಾತ ರೌಡಿಶೀಟರ್ ಕುಳ್ಳು ರಿಜ್ವಾನ್ ಸಹಚರರ ಕೈವಾಡವಿದೆಯಂತೆ. ಹೌದು, ಈ ಕುಳ್ಳು ರಿಜ್ವಾನ್​ ಸಹಚರರೇ ಹೇಮಂತ್​ನನ್ನ ಇಷ್ಟು ಭೀಕರವಾಗಿ ಕೊಲೆ ಮಾಡಿದ್ದಾರಂತೆ.  

ಅಂದು ಹೇಮಂತ್ ತನ್ನ ಸ್ನೇಹಿತರೊಂದಿಗೆ ಬರ್ತಡೇ ಸೆಲೆಬ್ರೇಷನ್​ಗೆ‌ ಅಂತ ಸಮೀಪದ ಡಾಬಾ ವೊಂದಕ್ಕೆ ಹೋಗಿದ್ದರು. ಆ ವೇಳೆ ಹೇಮಂತ್ ಹಾಗೂ ಆತನ‌ ಸ್ನೇಹಿತ್ರ ಮಧ್ಯೆ ಬೆಂಗಳೂರಿನ‌ ರೌಡಿಸಂ ಬಗ್ಗೆ ಚರ್ಚೆ ಶುರುವಾಗಿತ್ತು, ಮಚ್ಚಾ ಬೆಂಗಳೂರಲ್ಲಿ ಯಾರು ಹೇಳಿಕೊಳ್ಳುವಂತ ರೌಡಿಗಳಿಲ್ಲ. ಎಲ್ಲ ಪುಡಿರೌಡಿಗಳೇ ಅಂತ ಮಾತನಾಡಿಕೊಂಡಿದ್ದಾರೆ. ಈ ಮಾತುಗಳು ಪಕ್ಕದಲ್ಲೇ ಇದ್ದ ನಟೋರಿಯಸ್ ರೌಡಿ ಕುಳ್ಳು ರಿಜ್ವಾನ್‌ ಶಿಷ್ಯರ ಕಿವಿಗೆ ಬಿದ್ದಿದೆ. ಆದ್ರೂ ಸುಮ್ಮನಿದ್ದ ರಿಜ್ವಾನ್ ಸಹಚರರು ಪಾರ್ಟಿ ಮುಗಿಸಿ ಹೇಮಂತ್ ಸ್ನೇಹಿತರು ತಮ್ಮ ತಮ್ಮ ಮನೆಗಳಿಗೆ ಹೋಗ್ತಿದ್ದಂತೆ, ಹೇಮಂತ್ ತನಗರಿವಿಲ್ಲದಂತೆ ಆ ರೌಡಿಗಳ ಬಳಿಯೇ ಮನೆ ಹತ್ತಿರ ಎಲ್ಲಾದ್ರೂ ಡ್ರಾಪ್​ ಮಾಡುವಂತೆ ಕೇಳಿದ್ದಾನೆ. 

ಅವರಿಗೂ ಅದೇ ಬೇಕಿತ್ತು. ನೈಸಾಗಿ ಹೇಮಂತ್​ನನ್ನ ಬೈಕ್​ನಲ್ಲಿ ಕರೆದುಕೊಂಡು ಬಂದ ಆರೋಪಿಗಳು ಹೇಮಂತ್​ ಜೊತೆ ಕಿರಿಕ್ ಶುರು ಮಾಡಿದ್ದಾರೆ. ನಮ್‌ ಬಾಸ್ ಕುಳ್ಳು ರಿಜ್ವಾನ್  ಗೊತ್ತಿಲ್ವೇನೋ ಅಂತ ಮದಿರೆ ನಿಶೆಯಲ್ಲಿ ಜಗಳ ತೆಗೆದಿದ್ದಾರೆ. ನಮ್ ಬಾಸ್ ಗೊತ್ತಿಲ್ಲ ಅಂತೀಯ. ನಿನಗೆ ಒಂದ್ ಗತಿ ಕಾಣಿಸ್ತೀವಿ ಅಂತೇಳಿ ಮಾರಕಾಸ್ತ್ರಗಳಿಂದ ಹೇಮಂತ್ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಆತನ ಮುಖ ಗುರುತು ಸಿಗದಂತೆ ಮಚ್ಚಿನಿಂದ ಜಜ್ಜಿ ಬರ್ಬರವಾಗಿ ಹತ್ಯೆಗೈದಿದ್ದಾರೆ. ಕೊಲೆ ಮಾಡುವ ದೃಶ್ಯಗಳನ್ನು ಹಂತಕರೇ ಮೊಬೈಲ್​ನಲ್ಲಿ ಸೆರೆ ಹಿಡಿದು, ಅದನ್ನು  ಕುಳ್ಳು ರಿಜ್ವಾನ್ ಮೊಬೈಲ್​ಗೆ ಕಳುಹಿಸಿದ್ದಾರೆ. ಬಾಸ್ ನೀವ್ ಗೊತ್ತಿಲ್ಲ ಅಂದಿದಕ್ಕೆ ಅವ್ನ ಕಥೆಯೇ ಮುಗಿಸ್ಬಿಟ್ವಿ ಅಂತ ಮೇಸೇಜ್ ಹಾಕಿದ್ರಂತೆ. ಕೆ.ಜಿ.ನಗರ ಪೊಲೀಸ್ರು ಕುಳ್ಳು‌‌ ರಿಜ್ವಾನ್ ನನ್ನ ಬಂಧಿಸಿ, ವಿಚಾರಣೆ ನಡೆಸಿದಾಗ ರಿಜ್ವಾನ್​ ಮೊಬೈಲ್​ನಲ್ಲಿ ವಿಡಿಯೋ ಸಿಕ್ಕಾಗ ಈ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.

ರೌಡಿ ಕುಳ್ಳು ರಿಜ್ವಾನ್, ಅಪಹರಣ, ಕೊಲೆ ಯತ್ನ, ರಾಬರಿ, ಬೆದರಿಕೆ, ಗಾಂಜಾ, ಕೊಲೆ, ಆರ್ಮ್ಸ್​ ಆ್ಯಕ್ಟ್​ ಸೇರಿದಂತೆ 20 ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಅಲ್ಲದೆ ಸಾಕಷ್ಟು ಪ್ರಕರಣಗಳಲ್ಲಿ ಪೊಲೀಸ್ರಿಗೆ ಬೇಕಾಗಿದ್ದ. ಹೀಗಾಗಿ ಕೆಜಿ ನಗರ ಪೊಲೀಸ್ರು ಇನ್ನೇನು ಶಿವಮೊಗ್ಗದಲ್ಲಿ 2ನೇ ಮದುವೆಗೆ ಸಜ್ಜಾಗಿದ್ದ ರೌಡಿಯನ್ನು ಮದುವೆಯಾಗದೆಯೇ ಅತ್ತೆ ಮನೆಗೆ ಕರೆತಂದಿದ್ದಾರೆ. ಹೇಮಂತ್​ ಕೊಲೆಗೆ ಸಂಬಂಧಿಸಿದಂತೆ  ಕೆಂಗೇರಿ ಪೊಲೀಸ್ರು ಇಬ್ಬರನ್ನು ವಶಕ್ಕೆ ಪಡೆದು ಉಳಿದ ಆರೋಪಿಗಳನ್ನ ಬಂಧಿಸೋದಕ್ಕೆ ಬಲೆ ಬೀಸಿದ್ದಾರೆ. ಒಟ್ನಲ್ಲಿ ರೌಡಿ ಬಗ್ಗೆ ಗೊತ್ತಿಲ್ಲ ಅನ್ನೋ ಸಿಲ್ಲಿ ರೀಸನ್​ಗೆ ಅಮಾಯಕ ಜೀವ ಬಲಿಯಾಗಿದ್ದು ಮಾತ್ರ ದುರಂತವೇ ಸರಿ.

Latest Videos
Follow Us:
Download App:
  • android
  • ios