ಪೊಲೀಸರಿಂದ ಕಿರುಕುಳ ಆರೋಪ: ಸೆಲ್ಫಿ ವಿಡಿಯೋ ಮಾಡಿ ಗೃಹಿಣಿ ಸಾವು

ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬಳು ಮೊಬೈಲ್‌ನಲ್ಲಿ ಸೆಲ್ಫಿ ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.

Karnataka police Harassment Channapatna Housewife dies after making selfie video sat

ರಾಮನಗರ (ಸೆ.03): ರಾಮನಗರ ಜಿಲ್ಲೆಯಲ್ಲಿ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬಳು ಮೊಬೈಲ್‌ನಲ್ಲಿ ಸೆಲ್ಫಿ ವಿಡಿಯೋ ಮಾಡಿಟ್ಟು ಗೃಹಿಣಿ ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ನಡೆದಿದೆ. 

ಚನ್ನಪಟ್ಟಣ ನಗರದ ಕೋಟೆ ಬಡಾವಣೆಯಲ್ಲಿ ಘಟನೆ ನಡೆದಿದೆ. ಮಾಧುರಿ (31) ಸಾವನ್ನಪ್ಪಿರುವ ಮಹಿಳೆ ಆಗಿದ್ದಾಳೆ. ಈಕೆ ನಿನ್ನೆ ರಾತ್ರಿ ವೇಳೆ ನಿದ್ದೆ ಮಾತ್ರೆ ಸೇವಿಸಿ ಅಸ್ವಸ್ಥಗೊಂಡಿದ್ದಳು. ಈ ವೇಳೆ ಮನೆಯವರು ಆಕೆಯನ್ನು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಇಮದು ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ. ಇನ್ನು ಸಾಯುವ ಮುನ್ನ ತನ್ನ ಸಾವಿಗೆ ಪೊಲೀಸರು ಈಡಿದ ಕಿರುಕುಳ ಹಾಗೂ ಅವರ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಕೂಡ ಹೇಳಿದ್ದಾರೆ. ಈಗ ಚನ್ನಪ್ಪಟ್ಟಣ ಪೊಲೀಸರಿಗೆ ಮಹಿಳೆ ಸಾವಿನಿಂದ ಸಂಕಟ ಶುರುವಾಗಿದೆ.

ಸಿಎಂ ಸಿದ್ದರಾಮಯ್ಯಗೆ ಸೆಡ್ಡು ಹೊಡೆದ ಶಾಸಕ: ಸ್ವಂತ ಖರ್ಚಿನಲ್ಲಿ ಮೋಡ ಬಿತ್ತನೆ ಆರಂಭ

ಇನ್ನು ಮಹಿಳೆ ಸೆಲ್ಫಿ ವೀಡಿಯೋ ಮಾಡಿ ನಿನ್ನೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಅಸ್ವಸ್ಥಗೊಂಡಿದ್ದ ಮಹಿಳೆಯನ್ನ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ತಾನು ದೂರು ನೀಡಲು ಹೋದಾಗ ಪೊಲೀಸರು ದೂರನ್ನು ಸ್ವೀಕರಿಸಿದೇ ಪೊಲೀಸರು ಅವಮಾನ ಮಾಡಿದ್ದಾರೆ ಎಂಬ ಆರೋಪ ಮಾಡಿದ್ದಾಳೆ. ಹಣದ ವಿಚಾರಕ್ಕೆ ಗಲಾಟೆ ಮಾಡಿಕೊಂಡು, ದೂರು ನೀಡಲು ಹೋದಾಗ ನನಗೇ ಅವಮಾನ ಮಾಡಿದ್ದಾರೆ. ಜೊತೆಗೆ, ಈ ವೇಳೆ ನಿನ್ನ ಮೇಲೆ ಹಳೇ ಕೇಸುಗಳಿವೆ ಎಂದು ಆಕೆಯನ್ನು ಪೊಲೀಸ್‌ ಠಾಣೆಯಿಂದ ಪೊಲೀಸರು ವಾಪಸ್‌ ಕಳಿಸಿದ್ದಾರೆ ಎಂದು ಆರೋಪಿಸಿದ್ದಾಳೆ.

ಚನ್ನಪಟ್ಟಣ ಟೌನ್‌ ಪೊಲೀಸರ ವಿರುದ್ಧ ದೂರು ಸ್ವೀಕರಿಸದ ಆರೋಪ ಮಾಡಿದ್ದಾಳೆ. ಇನ್ನು ಪೊಲೀಸರು ಮಾಡಿದ ಅವಮಾನದಿಂದಲೇ ಬೇಸತ್ತು ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ಹೇಳಿದ್ದಾರೆ. ಸೆಲ್ಫಿ ವೀಡಿಯೋ ಮಾಡಿ ನಾನು ಸತ್ತ ಮೇಲಾದರೂ ನ್ಯಾಯಕೊಡಿಸುವಂತೆ ಮನವಿ ಮಾಡಿದ್ದಾರೆ. ಚನ್ನಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಈ ಬಗ್ಗೆ ಪ್ರಕರಣ ದಾಖಲು ಆಗಿರುವ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಆದರೆ, ನ್ಯಾಯ ಕೇಳಲು ಹೋದ ವ್ಯಕ್ತಿ ಯಾರೇ ಆಗಿದ್ದರೂ ಪೊಲೀಸರು ದೂರು ದಾಖಲಿಸಿಕೊಂಡು ನ್ಯಾಯ ಕೊಡಿಸಲು ಮುಂದಾಗುವುದು ತಮ್ಮ ಕರ್ತವ್ಯ ಎಂದು ಮಹಿಳೆಯ ಕುಟುಂಬ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರೋಗ್ಯಕ್ಕೆ ಉತ್ತಮವಾದ ಮೆಣಸಿನಕಾಯಿ ತಳಿ ಯಾವುದು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಂಧಿಕರು ನ್ಯಾಯ ಕೋರಿ ರಾಮನಗರ ಎಸ್​ಪಿಗೆ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ಚನ್ನಪಟ್ಟಣ ಟೌನ್ ಇನ್​​ಸ್ಪೆಕ್ಟರ್ ಶೋಭಾ ಹಾಗೂ ಪೊಲೀಸ್ ಸಿಬ್ಬಂದಿ ವಿರುದ್ಧ ಆರೋಪ ಮಾಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ.

Latest Videos
Follow Us:
Download App:
  • android
  • ios