* ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದ ಮುಂದುವರಿದ ಹಂತ* ಪ್ರೆಸ್ಟೀಜ್ ಗ್ರೂಪ್ ಕಾರ್ಯನಿರ್ವಾಹಕ ನಿರ್ದೇಶಕಿ ಅಂಜುಂ ಜಂಗ್ ವಿಚಾರಣೆ* ಸಿನಿಮಾಟೋಗ್ರಾಫರ್ ಸಂಜಯ್ ಹ್ಯಾರಿಸ್ ಗೆ ನೋಟಿಸ್* ಪೊಲೀಸರು ವಿಚಾರಣೆ ಎನ್ನುತ್ತಲೇ ಮುಂಬೈ ಗೆ ಹಾರಿದ ಪಾರ್ಟಿ ಆಯೋಜಕಿ
ಬೆಂಗಳೂರು(ಡಿ. 17) ಮಾದಕ ವಸ್ತು (Drugs) ಮಾರಾಟ ಜಾಲದ ಜತೆ ನಂಟು ಆರೋಪದ ಎದುರಿಸುತ್ತಿದ್ದ ಪ್ರತಿಷ್ಠಿತ ರಿಯಲ್ ಎಸ್ಟೇಟ್ (Real Estate) ಕಂಪನಿ ಪ್ರೆಸ್ಟೀಜ್ ಗ್ರೂಪ್‌ನ (Prestige Group) ಕಾರ್ಯನಿರ್ವಾಹಕ ನಿರ್ದೇಶಕಿ ಅಂಜುಂ ಜಂಗ್ ಅವರನ್ನು ಪೊಲೀಸರು ವೈದ್ಯಕೀಯ ಪರೀಕ್ಷೆಗೆ (Medical Test) ಒಳಪಡಿಸಿದ್ದಾರೆ. ಈ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ (Notice) ನೀಡಿದ್ದ ಹಿನ್ನೆಲೆಯಲ್ಲಿ ಗುರುವಾರ ಅಜುಂ ಅವರು ನಗರದ ಗೋವಿಂದಪುರ ಠಾಣೆ ಪೊಲೀಸರ ಎದುರು ಹಾಜರಾಗಿದ್ದರು. ಈ ವೇಳೆ ಪೊಲೀಸರು (Police) ಖಾಸಗಿ ಆಸ್ಪತ್ರೆಯಲ್ಲಿ (Hospital) ವೈದ್ಯಕೀಯ ಪರೀಕ್ಷೆಗೆ ಹಾಜರುಪಡಿಸಿದ್ದಾರೆ.
ಇದು ಪ್ರಕರಣದ ಒಂದು ಮುಖವಾದರೆ ಗೋವಿಂದಪುರ ಡ್ರಗ್ಸ್ ಕೇಸ್ ನಲ್ಲಿ ವಿಚಾರಣೆಗೆ ಹಾಜರಾಗಲು ಸಿನಿಮಾಟೋಗ್ರಾಫರ್ ಸಂಜಯ್ ಹ್ಯಾರಿಸ್ ಗೆ ನೋಟಿಸ್ ನೀಡಲಾಗಿದೆ. ಈ ಹಿಂದೆ ಕೂಡ ಸಂಜಯ್ ಹ್ಯಾರಿಸ್ ಗೆ ನೋಟಿಸ್ ನೀಡಲಾಗಿತ್ತು. ಆದ್ರೆ ಅನಾರೋಗ್ಯ ಕಾರಣ ನೀಡಿ ಗೈರಾಗಿದ್ದರು.
ಪಾರ್ಟಿ ಆಯೋಜಕಿ ಆರ್ಜೂ ಸೇಟ್ ಗೂ ನೋಟಿಸ್ ನೀಡಲಾಗಿದೆ. ಆದರೆ ಸೇಟ್ ಮುಂಬೈಗೆ ಹಾರಿದ್ದಾರೆ ಎನ್ನಲಾಗಿದೆ. ಪೆಡ್ಲರ್ ಥಾಮಸ್ ಕಾಲು ಜೊತೆಗೆ ಲಿಂಕ್ ಹೊಂದಿದಿರುವ ಆರೋಪ ಆರ್ಜೂ ಸೇಟ್ ಮೇಲಿದೆ. ದೊಡ್ಡ ದೊಡ್ಡವರ ಪಾರ್ಟಿ ಆಯೋಜನೆ ಮಾಡ್ತಿದ್ದ ಆರ್ಜೂ ಸೇಟ್ ಥಾಮಸ್ ಕಾಲು ಮೂಲಕ ಡ್ರಗ್ಸ್ ತರಿಸಿ ಹಂಚಿರುವ ಮಾಹಿತಿ ಇದ್ದು ವಿಚಾರಣೆಗೆ ಕರೆಯಲಾಗಿದೆ.
ಮುಂಬೈನಲ್ಲಿ ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ನಂತರ ಹುಟ್ಟಿಕೊಂಡ ಡ್ರಗ್ಸ್ಬ ಘಾಟು ಸ್ಯಾಂಡಲ್ ವುಡ್ ಲಿಂಕ್ ಕೊಟ್ಟಿತ್ತು. ನಟಿ ರಾಗಿಣಿ ಮತ್ತು ಸಂಜನಾ ಸಹ ಸಂಕಷ್ಟಕ್ಕೆ ಸಿಲುಕಿದ್ದರು. ಜೈಲು ವಾಸ ಸಹ ಅನುಭವಿಸಿದ್ದರು. ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
Drive Against Drug Menace Bengaluru: ಹೊಸ ವರ್ಷಕ್ಕೆ ನಶೆ ಏರಿಸಲು ಡ್ರಗ್ಸ್ ತಂದವರ ಬಂಧನ!
ಅಂಜುಂ ಜಂಗ್ ವಿಚಾರಣೆ: ಸುಮಾರು ಎರಡೂವರೆ ತಾಸು ತನಿಖಾಧಿಕಾರಿ ಆರ್.ಪ್ರಕಾಶ್ ಅವರು ಅಜುಂ ಅವರನ್ನು ಪ್ರಶ್ನಿಸಿದರು. ನಂತರ ಅಂಜುಂ ಅವರು ಡ್ರಗ್ಸ್ (Drugs) ಸೇವಿಸಿದ್ದಾರೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಯಿತು. ಈ ವರದಿ ಬಳಿಕ ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
‘ನನಗೆ ಪೆಡ್ಲರ್ ಪರಿಚಯವಿಲ್ಲ. ನನ್ನ ಕಾರು ಚಾಲಕರಿಗೆ (Driver) ಸಂಪರ್ಕವಿರಬಹುದು. ಅದಕ್ಕೂ ನನಗೂ ಸಂಬಂಧವಿಲ್ಲ ಎಂದು ಅಂಜುಂ ವಿಚಾರಣೆ ವೇಳೆ ಹೇಳಿಕೆ ಕೊಟ್ಟಿದ್ದಾರೆ’ ಎಂದು ಮೂಲಗಳು ಹೇಳಿವೆ. ಪ್ರತಿಷ್ಠಿತ ರಿಯಲ್ ಎಸ್ಟೇಟ್ (Real estate) ಸಂಸ್ಥೆಯಾದ ಪ್ರೆಸ್ಟೀಜ್ ಗ್ರೂಪ್‌ನ ಮುಖ್ಯಸ್ಥರ ಸೋದರಿ ಆಗಿರುವ ಅಂಜುಂ, ಒಳಾಂಗಣ ವಿನ್ಯಾಸಕಿ ಆಗಿ ಖ್ಯಾತಿ ಪಡೆದಿದ್ದಾರೆ. ತಮ್ಮ ಕುಟುಂಬದ ಜತೆ ಜೆ.ಸಿ.ನಗರದ ನಂದಿದುರ್ಗ ರಸ್ತೆಯಲ್ಲಿ (Road) ಅವರು ನೆಲೆಸಿದ್ದು, ಪ್ರೆಸ್ಟೀಜ್ ಗ್ರೂಪ್ ಕಂಪನಿಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿದ್ದಾರೆ.
ಕೆಲ ದಿನಗಳ ಹಿಂದೆ ಡ್ರಗ್ಸ್(Drugs) ಮಾರಾಟದ ವೇಳೆ ಪೆಡ್ಲರ್ ಥಾಮಸ್ ಎಂಬುವನನ್ನು ಗೋವಿಂದಪುರ ಠಾಣೆ ಪೊಲೀಸರು(Police) ಬಂಧಿಸಿದ್ದರು. ಬಳಿಕ ಆತನ ವಿಚಾರಣೆ ವೇಳೆ ಅಂಜುಂ ಸಹ ಪೆಡ್ಲರ್ ಜತೆ ಸಂಪರ್ಕದಲ್ಲಿದ್ದ ಸಂಗತಿ ಗೊತ್ತಾಯಿತು. ಈ ಮಾಹಿತಿ ಮೇರೆಗೆ ವಿಚಾರಣೆಗೆ ಹಾಜರಾಗುವಂತೆ ಅಂಜುಂಗೆ ಪೊಲೀಸರು ನೋಟಿಸ್ ನೀಡಿದ್ದರು. ಎರಡು ಬಾರಿ ಗೈರಾಗಿದ್ದ ಅವರು, ಮೂರನೇ ಬಾರಿ ವಿಚಾರಣೆಗೆ ಹಾಜರಾಗಿದ್ದರು ಎಂದು ತಿಳಿದು ಬಂದಿದೆ.
ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಸಹ ವಿಚಾರಣೆಯ ಹಂತದಲ್ಲಿಯೇ ಇದೆ. ನಟಿಯರ ತಲೆಕೂದಲು ಪರೀಕ್ಷೆ ವರದಿಯಲ್ಲಿ ಡ್ರಗ್ಸ್ ಸೇವಿಸಿದ್ದರ ಬಗ್ಗೆ ಸಾಕ್ಷ್ಯ ಸಿಕ್ಕಿದೆ. ಒಟ್ಟಿನಲ್ಲಕಿ ಎಲ್ಲಿಂದಲೋ ಹುಟ್ಟಿಕೊಂಡ ಡ್ರಗ್ಸ್ ಜಾಲಕ್ಕೆ ಹೊಸ ಹೊಸ ಹೆಸರುಗಳು ಸೇರ್ಪಡೆಯಾಗುತ್ತಲೇ ಇವೆ. ಗೋವಿಂದಪುರ ಡ್ರಗ್ಸ್ ಪ್ರಕರಣದಲ್ಲಿ ಮಾಡೆಲ್ ಸೋನಿಯಾ ಅಗರ್ ವಾಲ್ ಅವರ ಹೆಸರು ಕೇಳಿ ಬಂದಿತ್ತು.
