Asianet Suvarna News Asianet Suvarna News

Dowry Case: ಹಲ್ಲೆಗೆ ಸಾಕ್ಷ್ಯ ಒದಗಿಸದ ಪತ್ನಿ: ಪತಿಗೆ ಸಿಕ್ತು ಬೇಲ್‌

*   ಪತಿ ಕತ್ತು ಹಿಸುಕಿ ಕೊಲೆಗೆ ಯತ್ನಿಸಿದ್ದರೆಂದು ಆರೋಪ
*  ಗಾಯ ಆಗಿರುವುದಕ್ಕೆ ಪ್ರಮಾಣಪತ್ರ ಸಲ್ಲಿಸದ ಪತ್ನಿ
*  ನಂದಿನಿ ಲೇಔಟ್‌ ಠಾಣಾ ಪೊಲೀಸರಿಗೆ ದೂರು ನೀಡಿದ್ದ ಮಹಿಳೆ
 

Karnataka High Court Granted Bail to Husband  Due to Wife Who Did Not Submit Evidence grg
Author
Bengaluru, First Published Jan 22, 2022, 8:41 AM IST

ಬೆಂಗಳೂರು(ಜ.22):  ವರದಕ್ಷಿಣೆಗಾಗಿ(Dowry) ಪೀಡಿಸಿದಲ್ಲದೆ ಕತ್ತು ಹಿಸುಕಿ ಪತ್ನಿಯ ಕೊಲೆಗೆ ಪ್ರಯತ್ನಿಸಿದ ಆರೋಪದಲ್ಲಿ ಜೈಲುಪಾಲಾದ(Jail) ವ್ಯಕ್ತಿಗೆ, ಕತ್ತಿನ ಭಾಗದಲ್ಲಿ ಗಾಯವಾಗಿರುವುದನ್ನು ದೃಢಪಡಿಸುವ ಪ್ರಮಾಣಪತ್ರವನ್ನು ಪತ್ನಿ ನ್ಯಾಯಾಲಯಕ್ಕೆ ಸಲ್ಲಿಸದ ಕಾರಣ ಪರಿಗಣಿಸಿ ಹೈಕೋರ್ಟ್‌(Highcourt) ಜಾಮೀನು ನೀಡಿದೆ. ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿದ್ದ ಲಗ್ಗೆರೆ ನಿವಾಸಿ ಎ.ಮಹೇಶ್‌ ಜಾಮೀನು(Bail) ಕೋರಿ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಚ್‌.ಪಿ. ಸಂದೇಶ್‌ ಅವರ ನ್ಯಾಯಪೀಠ ಈ ಆದೇಶ ನೀಡಿತು.

ಆರೋಪಿಯು(Accused) ದೂರುದಾರಳ ಕತ್ತು ಹಿಸುಕಿ ಕೊಲೆಗೆ ಯತ್ನಿಸಿದ(Attempt to Murder) ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಆದರೆ, ಕತ್ತಿನ ಭಾಗದಲ್ಲಿ ಗಾಯವಾಗಿರುವುದನ್ನು ದೃಢಪಡಿಸುವ ವೈದ್ಯಕೀಯ ಪ್ರಮಾಣಪತ್ರವನ್ನು ದೂರುದಾರೆ ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ಆಕೆಯ ಕುತ್ತಿಗೆ ಭಾಗದಲ್ಲಿ ಯಾವುದೇ ಗಾಯಗಳು ಸಹ ಇಲ್ಲ. ಪರಿಸ್ಥಿತಿ ಹೀಗಿರುವಾಗ ಆರೋಪಿ ಕಳೆದ ನಾಲ್ಕು ತಿಂಗಳಿಂದ ಜೈಲಿನಲ್ಲಿದ್ದಾನೆ. ಈಗಾಗಲೇ ಪ್ರಕರಣದ ತನಿಖೆ(Investigation) ಪೂರ್ಣಗೊಂಡಿದೆ. ಸಾಕ್ಷಿಗಳ ಹೇಳಿಕೆಯೂ ದಾಖಲಾಗಿದೆ. ಹೆಚ್ಚಿನ ತನಿಖೆಗೆ ಆರೋಪಿಯ ಬಂಧನದ ಅಗತ್ಯ ಇಲ್ಲವಾಗಿದೆ. ಇದರಿಂದ ಆತನಿಗೆ ಜಾಮೀನು ನೀಡಬಹುದಾಗಿದೆ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

Woman Found Dead: ಬಾಣಂತನಕ್ಕೆ ತವರಿಗೆ ಹೋಗಿ ಬಂದವಳ ಶವ ಫ್ಯಾನ್ ನಲ್ಲಿ

ಅಲ್ಲದೆ, ಆರೋಪಿ ವಿರುದ್ಧದ ಕೊಲೆ ಯತ್ನ, ದೂರುದಾರಳಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿರುವ ವಿಚಾರ ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ಸಂಬಂಧಿಸಿದೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್‌, ಅರ್ಜಿದಾರ ಎ. ಮಹೇಶ್‌ಗೆ ಜಾಮೀನು ನೀಡಿ ಆದೇಶಿಸಿದೆ.

ಆರೋಪಿ ಎರಡು ಲಕ್ಷ ರು. ಮೊತ್ತದ ವೈಯಕ್ತಿಕ ಬಾಂಡ್‌ ಮತ್ತು ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ ಒದಗಿಸಬೇಕು ಎಂಬುದು ಸೇರಿದಂತೆ ವಿವಿಧ ಷರತ್ತು ವಿಧಿಸಿ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ

ಪ್ರಕರಣದ ಹಿನ್ನೆಲೆ:

ವರದಕ್ಷಿಣೆಗಾಗಿ ನನಗೆ ಪತಿ ಎ.ಮೇಹೇಶ್‌ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದಾರೆ. ಕತ್ತು ಹಿಸುಕಿ ಕೊಲೆ ಮಾಡಲು ಪ್ರಯತ್ನಿಸಿದ್ದಾರೆ. ಮಾತ್ರೆಗಳನ್ನು ನೀಡಿ ಅದನ್ನು ಸೇವಿಸಿ ಸತ್ತು ಹೋಗುವಂತೆ ಹೇಳುತ್ತಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಮಹೇಶ್‌ ಪತ್ನಿ ನಗರದ ನಂದಿನಿ ಲೇಔಟ್‌ ಠಾಣಾ ಪೊಲೀಸರಿಗೆ ದೂರು(Complaint) ನೀಡಿದ್ದರು.

Dowry Harassment: ವರದಕ್ಷಿಣೆ ತರಲಿಲ್ಲವೆಂದು ಹೆಂಡತಿಯನ್ನೇ ಕೊಂದ ಪಾಪಿ ಗಂಡ

ಇದರಿಂದ ಪೊಲೀಸರು(Police) ಪ್ರಕರಣ ದಾಖಲಿಸಿ, ಮಹೇಶ್‌ನನ್ನು ಬಂಧಿಸಿದ್ದರು(Arrest). ಆತನನ್ನು ಅಧೀನ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಇದರಿಂದ ಜಾಮೀನು ಕೋರಿ ಆರೋಪಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ.

ಶಿವಮೊಗ್ಗ, ವರದಕ್ಷಿಣೆ ಹಣ ತರದಿದ್ರೆ ಬೆತ್ತಲೆ ವಿಡಿಯೋ ಅಪ್  ಮಾಡ್ತೆನೆ..ಎಂಥಾ ಗಂಡ!

ಶಿವಮೊಗ್ಗ: ಇದೊಂದು ವಿಚಿತ್ರ ಪ್ರಕರಣ. ವರದಕ್ಷಿಣೆ (Dowry) ತೆಗೆದುಕೊಂಡು ಬರದಿದ್ದರೆ ಪತ್ನಿಯ ಬೆತ್ತಲೆ ವಿಡಿಯೋವನ್ನೇ ಸೋಶಿಯಲ್ ಮೀಡಿಯಾಕ್ಕೆ (Social Media) ಅಪ್ ಲೋಡ್ ಮಾಡುತ್ತೇನೆ (Blackmail) ಎಂದು ಗಂಡ (Husband) ಮತ್ತು ಆತನ ಕುಟುಂಬದವರು ಬೆದರಿಕೆ ಹಾಕುತ್ತಿದ್ದರು. ಜ. 16 ರಂದು ಶಿವಮೊಗ್ಗದ ರಿಪ್ಪನ್ ಪೇಟೆಯಿಂದ ಘಟನೆ ವರದಿಯಾಗಿತ್ತು. ಚಿಕ್ಕಮಗಳೂರು ಜಿಲ್ಲೆಯ ವೆಲ್ ಕಮ್ ಗೇಟ್ ನ ಸಂತ್ರಸ್ತೆಯ ಪತಿ ಸಲ್ಮಾನ್, ಅತ್ತೆ ಸಾಹೀರಾ, ಮಾವ ಶೌಕತ್ ಖಾನ್ ಮತ್ತು ನಾದಿನಿ ಸಮೀನಾ ವಿರುದ್ಧ ಪ್ರಕರಣ ದಾಖಲಾಗಿತ್ತು.

ಹೊಸನಗರ ಹುಂಚದ ಮಹಿಳೆಗೆ ಮತ್ತು  ಶೃಂಗೇರಿ ವೆಲ್ ಕಮ್ ಗೇಟ್ ನ ಸಲ್ಮಾನ್ ಜತೆ ಕಳೆದ ವರ್ಷ ವಿವಾಹವಾಗಿತ್ತು. ವಿವಾಹದ ವೇಳೆ 90 ಗ್ರಾಂ ಬಂಗಾರ, ಮೂರು ಲಕ್ಷ ರೂ. ವರದಕ್ಷಿಣೆ ನೀಡಲು ಸಂತ್ರಸ್ತ ಮಹಿಳೆ ತಂದೆ ಒಪ್ಪಿಗೆ ನೀಡಿದ್ದರು.  ಮದುವೆಗೆ ಮುಂಚೆ ಎರಡು ಲಕ್ಷ ರೂ. ಹಣ ಮತ್ತು ನಾಲ್ಕು ಗ್ರಾಂ ಉಂಗುರ ಮದುವೆ ಬಳಿಕ  90 ಗ್ರಾಂ ಬಂಗಾರ ಮತ್ತು ಗೃಹುಪಯೋಗಿ ಸಾಮಗ್ರಿಗಳನ್ನು ನೀಡಿದ್ದರು.
 

Follow Us:
Download App:
  • android
  • ios