Asianet Suvarna News Asianet Suvarna News

ಮಾಜಿ ಸಿಎಂ ಬಿ. ಎಸ್‌. ಯಡಿಯೂರಪ್ಪ ಮೊಮ್ಮಗಳು ಆತ್ಮಹತ್ಯೆ!

* ಬಿಎಸ್‌ವೈ ಪುತ್ರಿ ಪದ್ಮವತಿ ನ ಮಗಳು ಸೌಂದರ್ಯ ಆತ್ಮಹತ್ಯೆ

* ಇಂದು ಬೆಳಗ್ಗೆ ಶಿವಾನಂದ ಬಳಿ ಇರುವ ಅಪಾರ್ಟ್‌ಮೆಂಟ್ ನಲ್ಲಿ ಆತ್ಮಹತ್ಯೆ

Karnataka Former Chief Minister BS Yediyurappa Grand Daughter Commits Suicide pod
Author
Bangalore, First Published Jan 28, 2022, 2:08 PM IST

ಬೆಂಗಳೂರು(ಜ.28): ಕರ್ನಾಟಕ ಮಾಜಿ ಸಿಎಂ ಬಿ, ಎಸ್. ಯಡಿಯೂರಪ್ಪ ಮೊಮ್ಮಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಳಗ್ಗೆ ಸುಮಾರು 10 ಗಂಟೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪದ್ಮಾವತಿ ಪುತ್ರಿ ಸೌಂದರ್ಯ(30) ಆತ್ಮಹತ್ಯೆ ಮಾಡಿಕೊಂಡ ಯುವತಿ. ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. 

ಬಿ. ಎಸ್​ ಯಡಿಯೂರಪ್ಪ ಅವರ ದ್ವಿತೀಯ ಪುತ್ರಿ ಪದ್ಮಾವತಿ ಅವರ ಮಗಳು ಸೌಂದರ್ಯ ಅವರು ವಸಂತನಗರದಲ್ಲಿರುವ ಮೌಂಟ್ ಕಾರ್ಮೆಲ್ ಕಾಲೇಜು ಬಳಿಯ ಫ್ಲ್ಯಾಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೌಂದರ್ಯ ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದರು. 2018ರಲ್ಲಿ ಜಿಲ್ಲಾ ಪಂಚಾಯತ ಸದಸ್ಯರಾದ ಮರಿಸ್ವಾಮಿ ಅಣ್ಣನ ಮಗ ಡಾ. ನಿರಂಜನ್ ಅವರನ್ನು ಸೌಂದರ್ಯ ಮದುವೆಯಾಗಿದ್ದರು. ಮೃತ ಸೌಂದರ್ಯಗೆ ಒಂದು ಮಗು ಇದೆ.

ಸಿದ್ದು ಯಾವ ಪಕ್ಷದ ಬಾಲಂಗೋಚಿ: ಬಿಎಸ್‌ವೈರಿಂದ ಪಡೆದ ಹಣಕ್ಕೆ ಇನ್ನೂ ಉತ್ತರವಿಲ್ಲ: HDK

ಸೌಂದರ್ಯ ಪತಿ ನಿರಂಜನ್ ರಾಮಯ್ಯ ಆಸ್ಪತ್ರೆಯಲ್ಲಿ ಅಸಿಸ್ಟೆಂಟ್  ಫ್ರೊಫೆಸರ್ ಆಗಿದ್ದು, ಬೆಬೆಳಗ್ಗೆ 8 ಗಂಟೆಗೆ ಕೆಲಸಕ್ಕೆ ಹೋಗಿದ್ದರು. ಇತ್ತ ಸೌಂದರ್ಯ 10 ಗಂಟೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆ ಕೆಲಸದವರು ಬಂದಾಗ ಬಾಗಿಲು ತೆಗೆಯದಿದ್ದಾಗ ಸೌಂದರ್ಯ ಪತಿ ಡಾ. ನೀರಜ್‌ಗೆ ಕೆಲಸದವರು ಕರೆ ಮಾಡಿದ್ದರು. ಮನೆ ಕೆಲಸದವರು ಫೋನ್ ಮಾಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಬೌರಿಂಗ್ ಆಸ್ಪತ್ರೆಯಲ್ಲಿ ಮೃತದೇಹ ಇದೆ.

ಡಿಲಿವರಿ ಆದ ನಂತರ ಡಿಪ್ರೇಷನ್ ಹೋಗಿದ್ದ ಸೌಂದರ್ಯ?

ಕಳೆದ ಒಂಭತ್ತು ತಿಂಗಳ ಹಿಂದೆ ಸೌಂದರ್ಯ ಡೆಲಿವರಿ ಆಗಿತ್ತು. ಕಳೆದ 3 ತಿಂಗಳ ಹಿಂದೆ ಸೌಂದರ್ಯ ಮನೆಗೆ ಮರಳಿದ್ದರು. ಮನೆಯಲ್ಲಿ ಮಗುವಿನೊಟ್ಟಿಗಿದ್ದ ಸೌಂದರ್ಯ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಕೆಲಸದವರು ತಿಂಡಿ ಕೊಡಲು ಹೋದಾಗ, ಪ್ರಕರಣ ಬೆಳಕಿಗೆ ಬಂದಿದೆ. ಈ ನಡೆಗೆ ಇನ್ನೂ ಕಾರಣ ತಿಳಿದು ಬಂದಿಲ್ಲ. 

ಅಪಾರ್ಟ್ಮೆಂಟ್ ಮ್ಯಾನೇಜರ್ ಖ್ವಾಜಾ ಹುಸೇನ್ ಹೇಳಿದ್ದೇನು?

ಇನ್ನು ಸೌಂದರ್ಯ ಕುಟುಂಬದ ಬಗ್ಗೆ ಮಾಹಿತಿ ನೀಡಿರುವ ಮ್ಯಾನೇಜರ್ ಖ್ವಾಜಾ ಹುಸೇನ್, ದಂಪತಿ ನಡುವೆ ಯಾವತ್ತು ಜಗಳವಾಗಿಲ್ಲ. 2 ವರ್ಷದಿಂದ ವಾಸವಾಗಿದ್ರು,9 ತಿಂಗಳ ಮಗು ಇದೆ. 10.30 ರ ಸುಮಾರಿಗೆ ಈ ಘಟನೆ ಬೆಳಕಿಗೆ ಬಂದಿದೆ.ಸೌಂದರ್ಯ ಪತಿ ಕೆಲಸಕ್ಕೆ ಹೋದಾಗ ಘಟನೆ ನಡೆದಿದೆ. ಘಟನೆ ನಡೆದ ನಂತರ ಸೌಂದರ್ಯ ತಾಯಿ,ಅಣ್ಣ  ಕುಟುಂಬಸ್ಥರು ಮೃತ ದೇಹ ತೆಗೆದುಕೊಂಡು ಹೋಗಿದ್ದಾರೆ. ಯಾವ ಪೊಲೀಸರು ಇಲ್ಲಿಗೆ ಬಂದಿಲ್ಲ ಎಂದಿದ್ದಾರೆ.

ವೀರಶೈವ ಲಿಂಗಾಯತ ಸಂಪ್ರದಾಯದಂತೆ ಕ್ರಿಯಾ ಸಮಾಧಿ

ಇನ್ನು ಮೃತ ಸೌಂದರ್ಯ ಅಂತ್ಯಕ್ರಿಯೆ ವೀರಶೈವ ಲಿಂಗಾಯತ ಸಂಪ್ರದಾಯದಂತೆ ನಡೆಸಕು ಸಿದ್ಧತೆ ನಡೆಸಲಾಗಿದ್ದು, ಅಬ್ಬಿಗೆರೆಯ ನೀರಜ್ ನಿವಾಸದಲ್ಲಿ ಈ ಕ್ರಿಯೆ ನಡೆಯಲಿದೆ. ಪೂಜಾ ಕ್ರಿಯಾವಿಧಾನ ನೆರೆವೇರಿಸಲಿರಿವ ಪುರೋಹಿತರು ಆಗಮಿಸಿದ್ದು, ಶಿವಗಂಗೆಯ ರುದ್ರಮುನಿ ಶಿವಾಚಾರ್ಯ ಶ್ರೀಗಳ ಮಾರ್ಗದರ್ಶನದಂತೆ ವಿಧಿವಿಧಾನ ನಡೆಯಲಿದೆ

Follow Us:
Download App:
  • android
  • ios