ಫೇಸ್‌ಬುಕ್‌ನಲ್ಲಿ ಪರಿಚಯವಾದವಳಿಂದ ಮಹಿಳಿಗೆ 3.90 ಲಕ್ಷ ರು. ವಂಚನೆ
ಫೇಸ್‌ಬುಕ್‌ನಲ್ಲಿ ಪರಿಚಯವಾದವಳಿಂದ 3.90 ಲಕ್ಷ ರು. ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಫೇಸ್‌ಬುಕ್ ಒಳ್ಳೆದಕ್ಕೂ ಇದೆ. ಕೆಟ್ಟದಕ್ಕೂ ಇದೆ ಎನ್ನುವುದಕ್ಕೆ ಈ ಸ್ಟೋರಿಯೇ ಉದಾಹರಣೆಯಾಗಿದೆ.
ಕಾರ್ಕಳ, (ಆ.29): ಇಲ್ಲಿನ ಅಜೆಕಾರು ಗ್ರಾಮದ ದೆಪ್ಪತ್ತೆಯ ನಿವಾಸಿ ಪೂರ್ಣಿಮಾ ಎಂಬವರು ಫೇಸ್ ಬುಕ್ ನಲ್ಲಿ ಪರಿಚಯವಾದ ಲೇಡಿಯೊಬ್ಬರಿಂದ 3.90 ಲಕ್ಷ ರು. ಕಳೆದುಕೊಂಡಿದ್ದಾರೆ.
ಅವರಿಗೆ ಫೇಸ್ ಬುಕ್ ನಲ್ಲಿ ಡಾ. ಲಿವೀಸ್ ಎಂಬ ಮಹಿಳೆ ಆ.4ರಂದು ಪರಿಚಯವಾಗಿ, ಅವರ ಹುಟ್ಟುಹಬ್ಬಕ್ಕೆ ಬೆಲೆ ಬಾಳುವ ಉಡುಗೊರೆ ಕಳುಹಿಸುವುದಾಗಿ ಹೇಳಿ ನಂಬಿಸಿದ್ದರು. ಅದರಂತೆ ದೆಹಲಿಯ ಪಾರ್ಸೆಲ್ ಕಚೇರಿಯಿಂದ ವ್ಯಕ್ತಿಯೊಬ್ಬ ಕರೆಮಾಡಿ ಯು.ಕೆ.ಯಿಂದ ಬಾಳುವ ಪಾರ್ಸೆಲ್ ಬಂದಿದ್ದು ಅದನ್ನು ಕಳುಹಿಸಲು 35,000 ರು. ಕಟ್ಟಬೇಕೆಂದು ಹೇಳಿ, ಬ್ಯಾಂಕ್ ಖಾತೆ ವಿವರ ನೀಡಿದ, ಪೂರ್ಣಿಮಾ ಆ ಖಾತೆಗೆ ಆ ಹಣ ವರ್ಗಾಯಿಸಿದ್ದರು.
ಎಟಿಎಂ ಕಳ್ಳರ ಸುಳಿವು ನೀಡಿದ ಗ್ಯಾಸ್ ಕಟರ್: 27 ಲಕ್ಷ ದೋಚಿದ್ದ ಸಹೋದರರು
ನಂತರ ಇನ್ನೊಬ್ಬರು ಕರೆ ಮಾಡಿ 95,000 ರು. ಕೇಳಿದ್ದರು. ಅದನ್ನು ಪೂರ್ಣಿಮಾ ಜಮೆ ಮಾಡಿದ್ದರು. ನಂತರ ರಿಸರ್ವ ಬ್ಯಾಂಕಿನಿಂದ ಎಂದು ಕರೆ ಮಾಡಿ ಉಡುಗೊರೆಯ ಕ್ಲಿಯರೆನ್ಸ್ ಗೆ 2.60 ಲಕ್ಷ ರು. ಹಣ ಕಟ್ಟಬೇಕು ಎಂದು ಹೇಳಿದರು. ಅದನ್ನೂ ಪೂರ್ಣಿಮಾ ಜಮೆ ಮಾಡಿದ್ದರು. ಆದರೇ ಈಗ ಉಡುಗೊರೆಯೂ ಬಂದಿಲ್ಲ, ಅವರು ಜಮೆ ಮಾಡಿದ 3.90 ಲಕ್ಷ ರು. ಹಣವೂ ಸಿಗದೇ ಮೋಸ ಮಾಡಿದ್ದಾರೆ ಎಂದು ಉಡುಪಿ ಸೆನ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಶುಕ್ರವಾರವೂ ಇಂತಹದ್ದೇ ಇನ್ನೊಂದು ಪ್ರಕರಣವೊಂದು ಸೆನ್ ಠಾಣೆಯಲ್ಲಿ ದಾಖಲಾಗಿದ್ದು, ಜಿಲ್ಲೆಯಲ್ಲಿ ಇನ್ನೂ ಇಂತಹ ಸೈಬರ್ ಮೋಸ ಪ್ರಕರಣಗಳು ನಡೆದಿರುವ ಸಾಧ್ಯತೆ ಇದೆ.