ಕನ್ನಡ ಸಿನಿಮಾ ನಿರ್ದೇಶಕನ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್, ಪೊಲೀಸರಿಂದ ನೋಟಿಸ್!
ನಿರ್ದೇಶಕ ಮಂಸೋರೆ ಈಗ ಹಣಕಾಸಿನ ತೊಂದರೆಯಲ್ಲಿದ್ದಾರೆ ಎನ್ನುವ ಕಾರಣ ನೀಡಿ ಅವರ ಕುಟುಂಬ ಹಣಕ್ಕಾಗಿ ಬೇಡಿಕೆ ಇಡಲು ಪ್ರಾರಂಭ ಮಾಡಿತ್ತು ಎಂದು ಪತ್ನಿ ಹೇಳಿದ್ದಾರೆ.
ಬೆಂಗಳೂರು (ಜ.29): ಕನ್ನಡದ ಪ್ರಖ್ಯಾತ ಸಿನಿಮಾ ನಿರ್ದೇಶಕ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಮಂಜುನಾಥ್ ಎಸ್ ಅವರ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್ ದಾಖಲಾಗಿದೆ. ಮಂಸೋರೆ ಎನ್ನುವ ಹೆಸರಿನಿಂದಲೇ ಪ್ರಖ್ಯಾತಿಯಾಗಿರುವ ನಿರ್ದೇಶಕನ ವಿರುದ್ಧ ಅವರ ಪತ್ನಿ ದೂರು ದಾಖಲಿಸಿದ್ದು, ತಮ್ಮ ಮೇಲೆ ದೈಹಿಕ ಹಲ್ಲೆ ಅಲ್ಲದೆ, ಮಾನಸಿಕವಾಗಿಯೂ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ವರದಕ್ಷಿಣೆಯ ರೂಪದಲ್ಲಿ ಎಸ್‌ಯುವಿ ಕಾರ್‌ಅನ್ನು ಮಂಸೋರೆ ಬೇಡಿಕೆ ಇಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಜನವರಿ 25 ರಂದು ಸುಬ್ರಹ್ಮಣ್ಯಪುರ ಪೊಲೀಸರು ಮಂಸೋರೆ, ಅವರ ತಾಯಿ ಮತ್ತು ಸಹೋದರಿಯ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ. ಮಂಸೋರೆ ಅವರ ಪತ್ನಿ ಅಖಿಲಾ ಸಿ. ದೂರಿನ ಪ್ರಕಾರ, ಪ್ರೇಮಿಗಳಾಗಿದ್ದ ನಾವು ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ವಿವಾಹವಾಗಿದ್ದೆವು. 30 ಲಕ್ಷ ರೂಪಾಯಿ ವೆಚ್ಚದಲ್ಲಿ ಅದ್ದರೂರಿಯಾಗಿ ಮದುವೆ ಮಾಡಿ ಕೊಡಲಾಗಿತ್ತು. ಮದುವೆಯ ಸಮಯದಲ್ಲಿ ನಗದು, ಚಿನ್ನ, ಅತ್ಯಾಧುನಿಕ ಫೋನ್, ಹೊಸ ಬೈಕ್ ಮತ್ತು ಕೆಲವು ಎಲೆಕ್ಟ್ರಾನಿಕ್ ವಸ್ತುಗಳ ರೂಪದಲ್ಲಿ ಮಂಸೋರೆಗೆ ದುಬಾರಿ ಉಡುಗೊರೆಗಳನ್ನು ನೀಡಲಾಗಿತ್ತು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ತಾವು ಎಂಎನ್‌ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಕಾರಣ, ಕುಟುಂಬದ ಖರ್ಚಿಗೂ ತನ್ನ ಸಂಬಳದಿಂದ ಹಣವನ್ನು ನೀಡುತ್ತಿದ್ದೆ ಎಂದು ಹೇಳಿದ್ದಾರೆ.
ಆದರೆ, ಮಂಸೋರೆ ಆರ್ಥಿಕ ಸಂಕಷ್ಟದಲ್ಲಿದ್ದಾರೆ ಎನ್ನುವ ಕಾರಣ ನೀಡಿ ಅವರ ಕುಟುಂಬ ಹಣಕ್ಕೆ ಬೇಡಿಕೆ ಇಡಲು ಆರಂಭ ಮಾಡಿದೆ. ಈಗಾಗಲೇ 10 ಲಕ್ಷವನ್ನು ಅವರಿಗೆ ವ್ಯವಸ್ಥೆ ಮಾಡಿಕೊಟ್ಟಿದ್ದು, ಈ ಹಣವನ್ನು ಈಗಾಗಲೇ ಮಂಸೋರೆಗೆ ನೀಡಿದ್ದಾಗಿ ಅಖಿಲಾ ತಿಳಿಸಿದ್ದಾರೆ. ಆದರೆ, ಅವರ ಕುಟುಂಬ ಹೆಚ್ಚಿನ ಹಣಕ್ಕೆ ಬೇಡಿಕೆ ಇಡಲು ಪ್ರಾರಂಭ ಮಾಡಿದಾಗ ತಮ್ಮ ಕುಟುಂಬಕ್ಕೆ ಈ ವಿಚಾರವನ್ನು ತಿಳಿಸಿದ್ದೆ ಎಂದಿದ್ದಾರೆ. ಬಳಿಕ ಮಂಸೋರೆ ಅವರೊಂದಿಗೆ ಈ ಸಮಸ್ಯೆಯನ್ನು ಚರ್ಚೆ ಮಾಡಲು ಪ್ರಯತ್ನ ಮಾಡಿದ್ದೆ ಎಂದಿದ್ದಾರೆ. ಈ ಹಂತದಲ್ಲಿ ಮಂಸೋರೆ ಮತ್ತು ಅವರ ಕುಟುಂಬ ಸದಸ್ಯರು ತನ್ನ ಕುಟುಂಬವನ್ನು ದೈಹಿಕವಾಗಿ ನಿಂದಿಸಿದ್ದಲ್ಲದ,ಅವಮಾನವಾಗುವ ರೀತಿಯಲ್ಲಿ ಮಾತನಾಡಿದ್ದಾರೆ. ಹಾಗೇನಾದರೂ ಈ ವಿಚಾರ ಹೊರಗೆ ಬಂದಲ್ಲಿ ಗಂಭೀರವಾದ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದ್ದರು ಎಂದು ಅಖಿಲಾ ದೂರಿದ್ದಾರೆ.
ಸಮಾಜದಲ್ಲಿ ಮಂಸೋರೆ ಅವರಿಗೆ ದೊಡ್ಡ ಸ್ಥಾನಮಾನವಿದೆ. ಬೈಕ್‌ನಲ್ಲಿ ತಿರುಗಾಡಿದರೆ ಸರಿ ಎನಿಸೋದಿಲ್ಲ. ಆತನ ಬಳಿ ಒಂದು ಎಸ್‌ಯುವಿ ಕಾರ್ ಇದ್ದರೆ ಒಳ್ಳೆಯದು ಎಂದು ಈ ಕುರಿತಾಗಿ ಬೇಡಿಕಡ ಇಡಲು ಆರಂಭಿಸಿದಾಗ ಅಖಿಲಾ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಈ ಹಂತದಲ್ಲಿ ಅವರ ಕುಟುಂಬದ ಸದಸ್ಯರು, ಕನ್ನಡ ಚಿತ್ರರಂಗದಲ್ಲಿ ಖ್ಯಾತ ನಿರ್ದೇಶಕರಾಗಿರುವ ಕಾರಣಕ್ಕೆ ಮಂಸೋರೆಗೆ ಹಲವು ಮದುವೆ ಪ್ರಸ್ತಾಪಗಳು ಈಗಾಗಲೇ ಬಂದಿವೆ ಎಂದು ತಿಳಿಸಿದ್ದರು ಎಂದು ಅಖಿಲಾ ಹೇಳಿದ್ದಾರೆ. ಸುಬ್ರಹ್ಮಣ್ಯಪುರ ಪೊಲೀಸರು ಮಂಸೋರೆ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ. ತಮ್ಮ ಮೇಲಿನ ಎಲ್ಲಾ ಆರೋಪಗಳು ಸುಳ್ಳು ಎಂದಿರುವ ಮಂಸೋರೆ, ದೂರು ನೀಡಿರುವ ಅಖಿಲಾ, ಮಾನಸಿಕವಾಗಿ ಕುಗ್ಗಿದ್ದಾರೆ. ಅವರದ ಆಕ್ರಮಣಶೀಲ ನಡವಳಿಕೆ ಎಂದು ದೂರಿದ್ದಾರೆ.
ವರದಕ್ಷಿಣೆಗಾಗಿ ಹೆಂಡ್ತಿಗೆ ಟಾರ್ಚರ್ ಕೊಟ್ರಾ ಸಿನಿಮಾ ಡೈರೆಕ್ಟರ್?: ಠಾಣೆ ಮೆಟ್ಟಿಲೇರಿದ ಪತ್ನಿ
ಶೃತಿಹರಿಹರನ್ ನಟಿಸಿದ್ದ ನಾತಿಚರಾಮಿ, ಆಕ್ಟ್ 1978 ಹಾಗೂ ತೀರಾ ಇತ್ತೀಚೆಗೆ 19.20.21 ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಮಂಸೋರೆ, 2015ರಲ್ಲಿ ಅವರ ಮೊದಲ ವಿತ್ರ ಹರಿವು 62 ನೇ ರಾಷ್ಟ್ರೀಯ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.
ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ನಿರ್ದೇಶಕನಿಂದ ಲೈಂಗಿಕ ಕಿರುಕುಳ, ಹುದ್ದೆಯಿಂದ ವಜಾ