ಬೆಂಗಳೂರು(ಜ.09): ಮಾದಕ ವಸ್ತು ಮಾರಾಟ ಜಾಲದಲ್ಲಿ ತೊಡಗಿದ್ದ ನಾಲ್ವರು ವಿದೇಶಿ ಪ್ರಜೆಗಳು ಪ್ರತ್ಯೇಕವಾಗಿ ತಲಘಟ್ಟಪುರ ಹಾಗೂ ಕುಮಾರಸ್ವಾಮಿ ಲೇಔಟ್‌ ಠಾಣೆಗಳ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಬನಶಂಕರಿ 2ನೇ ಹಂತದ ಪ್ರಗತಿಪುರ ಸಮೀಪ ಮಾದಕ ವಸ್ತು ಮಾರಾಟಕ್ಕೆ ಯತ್ನಿಸಿದ್ದಾಗ ಕಾಂಗೋ ದೇಶದ ಕ್ರಿಸ್ಟೀನಾ ಕಾಬೊಂಗ್‌ ಮಸೆಬ್‌ ಅಲಿಯಾಸ್‌ ಮಹಮ್ಮದ್‌ ಕುಜ್ವಾ ಹಾಗೂ ಜೇನ್‌ ಪೌಲ್‌ನನ್ನು ಕುಮಾರಸ್ವಾಮಿ ಲೇಔಟ್‌ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

ಕಮಿಷನ್ ಆಸೆ ತೋರಿಸಿ ಮೋಸ: ನೀವೂ ಚೈನ್‌ಲಿಂಕಲ್ಲಿ ಹೂಡಿಕೆ ಮಾಡಿದ್ರಾ ?

ಆರೋಪಿಗಳಿಂದ 6 ಲಕ್ಷ ಮೌಲ್ಯ‡ದ ಎಲ್‌ಎಸ್‌ಡಿ ಹಾಗೂ 30 ಗ್ರಾಂ ಎಂಡಿಎಂಎ ಜಪ್ತಿ ಮಾಡಲಾಗಿದೆ. ಮಾದಕ ವಸ್ತು ಮಾರಾಟವನ್ನು ವೃತ್ತಿಯಾಗಿಸಿಕೊಂಡಿದ್ದರು. ದಂಧೆ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಕನಕಪುರ ರಸ್ತೆಯ ತುರಹಳ್ಳಿ ಸಮೀಪ ತಲಘಟ್ಟಪುರ ಠಾಣೆ ಪೊಲೀಸರು ನಡೆಸಿದ ಮತ್ತೊಂದು ಕಾರ್ಯಾಚರಣೆ ಇಬ್ಬರು ನೈಜೀರಿಯಾ ಪ್ರಜೆಗಳು ಸಿಕ್ಕಿಬಿದ್ದಿದ್ದಾರೆ. ಸನೊಗೊ ಇಸ್ಮಾಯಿಲ್‌ ಓಯಕಾ ಹಾಗೂ ಕ್ವಿಜ್‌ ಪ್ರಿನ್ಸ್‌ ಬಂಧಿತರಾಗಿದ್ದು, ಆರೋಪಿಗಳಿಂದ 19 ಗ್ರಾಂ ಎಂಡಿಎಂ ಮತ್ತು ಮೊಬೈಲ್‌ಗಳು ಜಪ್ತಿಯಾಗಿವೆ. ತುರಹಳ್ಳಿ ಅರಣ್ಯದ ಸಮೀಪ ಮಾದಕ ವಸ್ತು ಮಾರಾಟಕ್ಕೆ ಆರೋಪಿಗಳು ಯತ್ನಿಸಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.