ಕಲಾಸಿಪಾಳ್ಯ ಠಾಣೆ ಇನ್‌ಸ್ಪೆಕ್ಟರ್ ಅಮಾನತು ಮಾಡಿರೋದು ಸರಿಯಲ್ಲ: ದೂರುದಾರ ಬೇಸರ
- ನಾನು ದೂರು ತೆಗೆದುಕೊಂಡಿಲ್ಲ ಅಂತ ಎಲ್ಲೂ ಹೇಳಿಲ್ಲ
- ರೌಡಿಶೀಟರ್ ಬಾಂಬೆ ಸಲೀಂ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾತ್ರ ದೂರು ನೀಡಿದೆ.
- ಕಲಾಸಿಪಾಳ್ಯ ಠಾಣೆ ಇನ್‌ಸ್ಪೆಕ್ಟರ್ ಅಮಾನತಿಗೆ ದೂರುದಾರ ಬೇಸರ
ಬೆಂಗಳೂರು (ಜು.9): ಕರ್ತವ್ಯಲೋಪ ಎಸಗಿದ ಆರೋಪ ಹಿನ್ನಲೆ ನಗರದ ಕಲಾಸಿಪಾಳ್ಯ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಚೇತನ್ ಕುಮಾರ್ ಅಮಾನತು ಮಾಡಿದ್ದ ಬೆನ್ನಲೇ ಪ್ರಕರಣದ ದೂರುದಾರ ಬೇಸರ ವ್ಯಕ್ತಪಡಿಸಿದ್ದಾರೆ. ಎಫ್ಐಆರ್ ದಾಖಲಿಸಿಕೊಳ್ಳುವಂತೆ ನಾನು ಒತ್ತಡ ಹೇರಿರಲಿಲ್ಲ ಎಂದು ದೂರುದಾರ ಹೇಳಿದ್ದಾರೆ.
ಬದಲಾಗಿ ಕಾರಾಗೃಹ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಭೇಟಿಯಾಗಿ ರೌಡಿಶೀಟರ್ ಬಾಂಬೆ ಸಲೀಂ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾತ್ರ ದೂರು ನೀಡಿದೆ. ಎಫ್ಐಆರ್ ದಾಖಲಿಸುವಂತೆ ಇನ್‌ಸ್ಪೆಕ್ಟರ್ ಚೇತನ್ ಸೂಚಿಸಿದರೂ ಪ್ರಕರಣಕ್ಕೆ ದಾಖಲಿಸದಂತೆ ಮನವಿ ಮಾಡಿದ್ದೆ ಎಂದು ದೂರುದಾರ ಮುಜೀಬ್ ಅಹಮದ್ ಹೇಳಿದ್ದಾರೆ.
ಐಐಟಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಅಧಿಕಾರಿ ಅಮಾನತುಗೊಳಿಸಿದ ಸರ್ಕಾರ
ಧಾರವಾಡ ಜೈಲಿನಲ್ಲಿದ್ದುಕೊಂಡೆ ರಿಯಲ್ ಎಸ್ಟೇಟ್ ಉದ್ಯಮಿ ಮುಜೀಬ್ ಗೆ ಸಹಚರರ ಮುಖಾಂತರ ವಿಡಿಯೋ ಕರೆ ಮಾಡಿ 8 ಲಕ್ಷ ಹಣಕ್ಕೆ ಬೇಡಿಕೆ ಇಡಲಾಗಿತ್ತು. ಇಲ್ಲದಿದ್ದರೆ ಕೊಲ್ಲುವುದಾಗಿ ಆರೋಪಿಗಳು ಧಮಕ್ಕಿ ಹಾಕಿದ್ದರು. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಬಂಧಿಖಾನೆ ಇಲಾಖೆಗೆ ದೂರು ನೀಡಿದ್ದೆ. ದೂರನ್ನು ಪೊಲೀಸ್ ಕಮೀಷನರ್ ಗೆ ವರ್ಗಾಯಿಸಿದ್ದರು. ಈ ಬಗ್ಗೆ ತನಿಖೆ ನಡೆಸುವಂತೆ ಸಿಸಿಬಿಗೆ ಆದೇಶಿಸಿದ್ದರು.
ಸಿಸಿಬಿಯವರು ಬಂದು ಎಫ್ ಐಆರ್ ಮಾಡಿಸಿದ್ರು. ಇದೀಗ ಪೊಲೀಸ್ ಇನ್‌ಸ್ಪೆಕ್ಟರ್ ಸಸ್ಪೆಂಡ್ ಆಗಿರುವುದು ಸರಿಯಲ್ಲ. ಬಾಂಬೆ ಸಲೀಂ ಕಾಟದಿಂದ ಮುಕ್ತಿಗೊಳಿಸಿ, ಎಫ್ಐಆರ್ ದಾಖಲಿಸಿಕೊಳ್ಳದಂತೆ ಮನವಿ ಮಾಡಿದ್ದೆ.
Crime News: ಬೆಂಗಳೂರಲ್ಲಿ ಮತ್ತೆ ರೌಡಿಶೀಟರ್ ಆ್ಯಕ್ಟಿವ್: ಇನ್ಸಪೆಕ್ಟರ್, ಸಬ್ ಇನ್ಸಪೆಕ್ಟರ್ ಸಸ್ಪೆಂಡ್
ಆದರೂ ಇನ್‌ಸ್ಪೆಕ್ಟರ್ ಚೇತನ್ ಎಫ್ಐಆರ್ ಮಾಡುವಂತೆ ಹೇಳಿದ್ರು. ಆದರೆ ನಿರ್ಲಕ್ಷ್ಯ ತೋರಿದ ಆರೋಪದಡಿ ಇನ್‌ಸ್ಪೆಕ್ಟರ್ ಚೇತನ್ ಅವರನ್ನು ಅಮಾನತು ಮಾಡಿರುವುದು ಸರಿಯಲ್ಲ. ಕೂಡಲೇ ಕಮಿಷನರ್ ಅಮಾನತು ಆದೇಶವನ್ನ ಹಿಂಪಡೆದುಕೊಳ್ಳಬೇಕು ಅಂತ ದೂರುದಾರ ಒತ್ತಾಯಿಸಿದರು..