Kalaburagi crimes: ನ್ಯಾಯಾಧೀಶರ ಪತ್ನಿ ನಾಪತ್ತೆ, ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲು

ಇಲ್ಲಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಯಮನಪ್ಪ ಬಮ್ಮನಗಿ ಅವರ ಪತ್ನಿ ಕಾಣೆಯಾಗಿದ್ದಾರೆ ಎಂದು ಸ್ಟೇಷನ್‌ ಬಜಾರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Judges wife goes missing; A case was registered at Station Bazar police station, Kalaburagi rav

ಕಲಬುರಗಿ (ಜು.7):  ಇಲ್ಲಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಯಮನಪ್ಪ ಬಮ್ಮನಗಿ ಅವರ ಪತ್ನಿ ಕಾಣೆಯಾಗಿದ್ದಾರೆ ಎಂದು ಸ್ಟೇಷನ್‌ ಬಜಾರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ನಗರದ ರಾಜಾಪುರ ರಸ್ತೆಯಲ್ಲಿರುವ ಜ್ಯುಡಿಶಿಯಲ್‌ ಕ್ವಾಟರ್ಸ್‌ನಲ್ಲಿ ಪತ್ನಿ ಅನಿತಾ ಜೊತೆ ವಾಸಿಸುತ್ತಿದ್ದರು. ಪತ್ನಿ ಆರೋಗ್ಯ ಸಮಸ್ಯೆಯಿಂದ ಮಾನಸಿಕವಾಗಿ ನೊಂದುಕೊಂಡಿದ್ದರು. 

ಜು.5ರಂದು ಸಂಜೆ 6 ಗಂಟೆ ಸುಮಾರಿಗೆ ಕಾಣೆಯಾಗಿದ್ದು, ಅವರನ್ನು ಹುಡುಕಿಕೊಡಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಶಿರಡೋಣ ಅರಣ್ಯದಲ್ಲಿ ಮರ್ಡರ್‌ ಪ್ರಕರಣ: ಕಾಣೆಯಾಗಿದ್ದವನೇ ತನ್ನ ಗೆಳೆಯನ ಕೊಲೆಗಾರÜನಾಗಿದ್ದ!

ಬಾಲಕಿ ಮೇಲೆ ಅತ್ಯಾಚಾರ

ಕಲಬುರಗಿ: ಹನ್ನೆರಡರಿಂದ ಹದಿನಾಲ್ಕು ವರ್ಷ ವಯಸ್ಸಿನ ಐವರು ಅಪ್ರಾಪ್ತ ಬಾಲಕರು ಸೇರಿ 9 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಘಟನೆ ಇಲ್ಲಿನ ಮಹಿಳಾ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 

ಜು.5ರಂದು ಮಧ್ಯಾಹ್ನ ಐವರು ಬಾಲಕರು ಬಾಲಕಿಯನ್ನ ಮನೆ ಮೇಲಿನ ಮಹಡಿ ಮೇಲೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾರೆ ಎನ್ನಲಾಗಿದೆ. 

ಈ ಬಗ್ಗೆ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅಸ್ವಸ್ಥ ಬಾಲಕಿಯನ್ನ ಆಸ್ಪತ್ರೆಗೆ ದಾಖಲು ಮಾಡಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ನಾಲ್ವರು ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿ ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ. 

ಇನ್ನೋರ್ವ ಬಾಲಕ ಪರಾರಿಯಾಗಿದ್ದು, ಆತನ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ.

ಪತ್ನಿ ಬಗ್ಗೆ ಅವಾಚ್ಯ ಮಾತು: ಅಣ್ಣನನ್ನೇ ರಾಡ್‌ನಿಂದ ಹೊಡೆದು ಕೊಂದ ತಮ್ಮ

ಅಕ್ರಮ ಮರಳು ಜಪ್ತಿ

ಕಲಬುರಗಿ: ನಗರದ ಕೋಟನೂರ (ಡಿ) ಗ್ರಾಮದ ಕೊಳಗೇರಿ ಅಭಿವೃದ್ಧಿ ಮಂಡಳಿ ಪಕ್ಕದಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ 6,16,000 ರು. ಮೌಲ್ಯದ ಮರಳನ್ನು ಜಪ್ತಿ ಮಾಡಲಾಗಿದೆ. 

ಅಕ್ರಮವಾಗಿ ಮರಳು ಸಂಗ್ರಹಿಸಿ ಇಡಲಾಗಿದೆ ಎಂಬ ಮಾಹಿತಿ ಮೇಲೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಸತ್ಯಭಾಮ, ತಹಸೀಲ್ದಾರ ಮದುರಾಜ, ಕಂದಾಯ ನಿರೀಕ್ಷಕ ಖಾಜಾ ಪಾಶಾ, ಗ್ರಾಮ ಆಡಳಿತಾಧಿಕಾರಿ ರಾಜ್‌ ಅಹ್ಮದ್‌, ವಿಶ್ವದ್ಯಾಲಯ ಪೊಲೀಸ್‌ ಠಾಣೆ ಪಿಐ ಅರುಣ್‌ ಎಸ್‌. ಮರಗುಂಡಿ ಅವರು ದಾಳಿ ನಡೆಸಿ 6.16 ಲಕ್ಷ ರು. ಮೌಲ್ಯದ 200 ಮೆಟ್ರಿನ್‌ ಟನ್‌ ಮರಳನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Videos
Follow Us:
Download App:
  • android
  • ios