ಗರ್ಲ್‌ಫ್ರೆಂಡ್ ಮನೆಗೆ ನುಗ್ಗಿ ಅಟ್ಯಾಕ್ ಮಾಡಿದ ಪಾಗಲ್ ಪ್ರೇಮಿ; ಆಕೆಯ ಸೋದರನನ್ನು ಕೊಲೆನೇ ಮಾಡ್ದ!
ಹೋಮಿಯೋಪತಿ ಕೋರ್ಸ್ ಓದುತ್ತಿರುವ ಮಹಿಳೆಯ ಮನೆಗೆ ನುಗ್ಗಿದ ದುಷ್ಕರ್ಮಿ, ಆಕೆಯ ಮತ್ತು ಆಕೆಯ ಸಹೋದರನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಸಹೋದರ ಈ ದಾಳಿಯಲ್ಲಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಹೈದರಾಬಾದ್ (ಸೆಪ್ಟೆಂಬರ್ 4, 2023): ಮಹಿಳೆಯೊಂದಿಗಿನ ಪ್ರೇಮ ಸಂಬಂಧದ ಆರೋಪದ ಮೇಲೆ ಯುವಕನೊಬ್ಬ ಭಾನುವಾರ ಆಕೆಯ ಮನೆಗೆ ನುಗ್ಗಿ ಚಾಕುವಿನಿಂದ ದಾಳಿ ಮಾಡಿರುವ ಘಟನೆ ತೆಲಂಗಾಣ ರಾಜಧಾನಿಯಲ್ಲಿ ನಡೆದಿದೆ. ಯುವಕನ ದಾಳಿಗೆ ಎಂಜಿನಿಯರಿಂಗ್ ಪದವೀಧರ ಇರಿತದ ಗಾಯದಿಂದ ಮೃತಪಟ್ಟಿದ್ದು, ಆತನ ಸಹೋದರಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೋಮಿಯೋಪತಿ ಕೋರ್ಸ್ ಓದುತ್ತಿರುವ ಮಹಿಳೆಯ ಮನೆಗೆ ನುಗ್ಗಿದ ದುಷ್ಕರ್ಮಿ, ಆಕೆಯ ಮತ್ತು ಆಕೆಯ ಸಹೋದರನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಈ ಘಟನೆ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ಆಕೆಯ (ಮಹಿಳೆಯ) ಸಹೋದರ ಚಾಕು ದಾಳಿಯಲ್ಲಿ ಮೃತಪಟ್ಟಿದ್ದು, ಮಹಿಳೆಗೆ ಗಾಯಗಳಾಗಿದೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ" ಎಂದೂ ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಕೆಲವು ಸ್ಥಳೀಯ ನಿವಾಸಿಗಳು ಯುವಕನನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದೂ ಅಧಿಕಾರಿ ತಿಳಿಸಿದ್ದಾರೆ.
ಇದನ್ನು ಓದಿ: ಕುಡುಕ ಪತಿಯ ಜಗಳದಿಂದ ಬೇಸತ್ತ ಪತ್ನಿ: ಮಲಗಿದ್ದ ಗಂಡನ ಮೇಲೆ ಬಿಸಿ ಎಣ್ಣೆ ಸುರಿದು ಕೊಲೆನೇ ಮಾಡಿದ್ಳು!
ಆ ಮಹಿಳೆ ಆರೋಪಿ ಯುವಕನನ್ನು ಅವಾಯ್ಡ್ ಮಾಡ್ತಿದ್ದಳು ಅಥವಾ ಆತನ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಈ ಹಿನ್ನೆಲೆ ಆತ ಇಂದು ಮಹಿಳೆಯ ಮನೆಗೆ ಹೋಗಿ ಅವಳೊಂದಿಗೆ ಜಗಳವಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯ ಆಧಾರದ ಮೇಲೆ ತಿಳಿದುಬಂದಿದೆ ಎಂದು ಇನ್ನೊಬ್ಬರು ಪೊಲೀಸ್ ಅಧಿಕಾರಿ ಹೇಳಿರುವ ಬಗ್ಗೆ ವರದಿಯಾಗಿದೆ.
ಆಕೆಯ ಮನೆಯ ಅಡುಗೆಮನೆಯಿಂದ ಯುವಕ ಚಾಕುವನ್ನು ತೆಗೆದುಕೊಂಡನು, ಇದರಿಂದ ಗಾಬರಿಗೊಂಡ ಮಹಿಳೆ ಕಿರುಚುತ್ತಾ ಕೋಣೆಗೆ ಓಡಿಹೋದಳು ಮತ್ತು ಇನ್ನೊಂದು ಕೋಣೆಯಲ್ಲಿದ್ದ ಅವಳ ಸಹೋದರ ಅವಳನ್ನು ರಕ್ಷಿಸಲು ಬಂದನು. ನಂತರ, ಆತ ಮಹಿಳೆಯ ಸೋದರನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದು, ಆತನ ಸಾವಿಗೆ ಕಾರಣನಾಗಿದ್ದಾನೆ. ನಂತರ ಮಹಿಳೆಯ ಮೇಲೆ ಪಾಗಲ್ ಪ್ರೇಮಿ ಹಲ್ಲೆ ನಡೆಸಿ ಗಾಯಗೊಳಿಸಿದ್ದಾನೆ.
ಇದನ್ನೂ ಓದಿ: ಗರ್ಭಿಣಿ ಪತ್ನಿಯನ್ನು ಹಿಗ್ಗಾಮುಗ್ಗ ಥಳಿಸಿ, ಬೆತ್ತಲೆ ಮೆರವಣಿಗೆ ಮಾಡಿದ ಪಾಪಿ ಪತಿ: ವಿಡಿಯೋ ವೈರಲ್
ಕೂಡಲೇ ಸ್ಥಳೀಯರು ಮನೆಗೆ ನುಗ್ಗಿ ದಾಳಿಕೋರನನ್ನು ಹಿಡಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ, ಅವರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಹೆಂಡ್ತಿ ತಂಗಿಯನ್ನು ಮುಟ್ತಿದ್ದ ಅಪ್ರಾಪ್ತ ಬಾಲಕನ ಕೊಂದು ಬಾಡಿ ಪೀಸ್ ಪೀಸ್ ಮಾಡಿದ ಆಟೋ ಡ್ರೈವರ್!