ಮದುವೆಯಾದ ನಾಲ್ಕೇ ತಿಂಗಳಿಗೆ ಹಂತಕಿಯಾದ ಹೆಂಡತಿ, ಗಂಡನ ಹತ್ಯೆಗೆ ಕಾರಣವಾಯ್ತು ಜೀನ್ಸ್!
ಜಾರ್ಖಂಡ್‌ನ ಜಮ್ತಾರಾದಲ್ಲಿ ಶಾಕಿಂಗ್ ಘಟನೆ ಬೆಳಕಿಗೆ ಬಂದಿದ್ದು, ಗಂಡ ಹೆಂಡತಿ ನಡುವಿನ ಸಂಬಂಧ ಅನೇಕ ಸವಾಲುಗಳನ್ನೆತ್ತಿದೆ. ಇಲ್ಲಿ ಪತ್ನಿಯೊಬ್ಬಳು ತನ್ನ ಸ್ವಂತ ಪತಿಯನ್ನು ಕೊಂದು ಜೈಲು ತಲುಪಿದ್ದು, ಕೊಲೆಗೆ ಕಾರಣ ಕೂಡ ಅಚ್ಚರಿ ಮೂಡಿಸಿದೆ.
ಜಾರ್ಖಂಡ್(ಜು.18): ಸಂಬಂಧದಲ್ಲಿ ಪ್ರೀತಿ, ವಿಶ್ವಾಸ ಮತ್ತು ಸಹನೆಯ ಕೊರತೆ ಇರುತ್ತದೆ. ವಿಶೇಷವಾಗಿ ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧದಲ್ಲಿ. ಇಲ್ಲಿ ಗಂಡ-ಹೆಂಡತಿ ಚಿಕ್ಕ ಚಿಕ್ಕ ವಿಷಯಕ್ಕೂ ಪರಸ್ಪರ ವೈರಿಗಳಾಗುತ್ತಿದ್ದಾರೆ. ಒಟ್ಟಿಗೆ ಏಳು ಜನ್ಮ ಜೊತೆಯಾಗಿ ಜೀವನ ನಡೆಸುತ್ತೇವೆ ಎಂದು ಭರವಸೆ ನೀಡುವವರು ಮಾತ್ರ ಪರಸ್ಪರರ ಜೀವನ ಸಣ್ಣ ಪುಟ್ಟ ವಿಚಾರಕ್ಕೆ ಜಗಳವಾಡುತ್ತಾ, ಇದನ್ನೇ ದೊಡ್ಡ ವಿಚಾರವಾಗಿಸಿಕೊಂಡು ಜೀವ ಕಸಿದುಕೊಳ್ಳುವ ಮಟ್ಟಕ್ಕೆ ಹೋಗುತ್ತಾರೆ. ಜಾರ್ಖಂಡ್‌ನ ಜಮ್ತಾರಾದಲ್ಲಿ ಶಾಕಿಂಗ್ ಘಟನೆ ಬೆಳಕಿಗೆ ಬಂದಿದ್ದು, ಗಂಡ ಹೆಂಡತಿ ನಡುವಿನ ಸಂಬಂಧ ಅನೇಕ ಸವಾಲುಗಳನ್ನೆತ್ತಿದೆ. ಇಲ್ಲಿ ಪತ್ನಿಯೊಬ್ಬಳು ತನ್ನ ಸ್ವಂತ ಪತಿಯನ್ನು ಕೊಂದು ಜೈಲು ತಲುಪಿದ್ದು, ಕೊಲೆಗೆ ಕಾರಣ ಕೂಡ ಅಚ್ಚರಿ ಮೂಡಿಸಿದೆ.
ಮದುವೆಯಾದ 4 ತಿಂಗಳ ನಂತರ ಹಂತಕಿಯಾದ ವಧು
ಜಮ್ತಾರಾದ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ ಜೋರ್ಬಿತಾ ಗ್ರಾಮದಲ್ಲಿ 4 ತಿಂಗಳ ಹಿಂದೆ ಮನೆಯೊಂದರಲ್ಲಿ ಅಧ್ಧೂರಿ ಮದುವೆಯೊಂದು ನಡೆದಿತ್ತು. ಮುದ್ದುಮುಖದ ವಧು ಮನೆಗೆ ಹೊಸ ಸದಸ್ಯೆಯಾದಳು. ಆದರೆ ಮನೆಗೆ ಬಂದ ಸೊಸೆ ಕೊಲೆಗಾರ್ತಿಯಾಗುತ್ತಾಳೆಂದು ಆಗ ಯಾರೂ ಭಾವಿಸಿರಲಿಲ್ಲ. ಆಕೆ ತನ್ನ ಜೀವನ ಸಂಗಾತೊಯನ್ನೇ ಕೊಂದಿದ್ದಾಳೆ, ಅದೂ ಒಂದು ಜೀನ್ಸ್‌ಗೆ. ಹೌದು, ಪತಿ ತನ್ನ ಹೆಂಡತಿಯನ್ನು ಜೀನ್ಸ್ ಧರಿಸಲು ನಿರಾಕರಿಸಿದ್ದೇ ಇದಕ್ಕೆ ಕಾರಣವಾಗಿದೆ. ಇದರಿಂದ ಕೋಪಗೊಂಡ ಪತ್ನಿ ತನ್ನ ಗಂಡನನ್ನು ಚಾಕುವಿನಿಂದ ಚುಚ್ಚಿ ಸಾಯಿಸಿದ್ದಾಳೆ.
ಜೀನ್ಸ್‌ಗಾಗಿ ಕೊಲೆ
ಮಾಧ್ಯಮ ವರದಿಗಳ ಪ್ರಕಾರ, ಜುಲೈ 12 ರ ಸಂಜೆ, ಪತ್ನಿ ಪುಷ್ಪಾ ಹೆಂಬ್ರಾಮ್ ಗೋಪಾಲಪುರ ಗ್ರಾಮದಲ್ಲಿ ಜಾತ್ರೆಯನ್ನು ನೋಡಲು ತನ್ನ ಸ್ನೇಹಿತರೊಂದಿಗೆ ತೆರಳಿದ್ದು, ಈ ವೇಳೆ ಜೀನ್ಸ್ ಧರಿಸಿದ್ದರು. ಇದನ್ನು ಕಂಡ ಆಕೆಯ ಪತಿ ಆಂದೋಲನ ತುಡು ವಿರೋಧ ವ್ಯಕ್ತಪಡಿಸಿದ್ದಾರೆ. ನಿನಗೆ ಮದುವೆಯಾಗಿದೆ, ಜೀನ್ಸ್ ಹಾಕಬೇಡ ಎಂದಿದ್ದಾನೆ. ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದೆ. ಅಷ್ಟರಲ್ಲಿ ಕೋಪಗೊಂಡ ಪುಷ್ಪಾ ಕೋಪದಿಂದ ತನ್ನ ಕೈಯಲ್ಲಿದ್ದ ಚಾಕುವಿನಿಂದ ಪತಿಗೆ ಹಲವಾರು ಬಾರಿ ಚುಚ್ಚಿದ್ದಾಳೆ.
ತಾನು ಈ ಕೃತ್ಯ ಮಾಡಿರುವುದಾಗಿ ಒಪ್ಪಿಕೊಂಡ ಮಹಿಳೆ
ಇದಾದ ನಂತರ ಗಾಯಾಳು ಆಂದೋಲನ ತುಡುವನ್ನು ಗಾಯಗೊಂಡ ಸ್ಥಿತಿಯಲ್ಲಿ ಧನ್‌ಬಾದ್‌ನ ಪಿಎಂಸಿಎಚ್‌ಗೆ ತರಲಾಯಿತು. ಅಲ್ಲಿ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ. ಈ ವೇಳೆ ಪತ್ನಿ ಪುಷ್ಪಾ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಪೊಲೀಸರು ಆಕೆಯನ್ನು ಬಂಧಿಸಿದ್ದು, ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ.
ಸಂಬಂಧದಲ್ಲಿ ಪ್ರೀತಿ ಇರಲಿಲ್ಲ
ಇಬ್ಬರ ನಡುವೆ ಪ್ರೀತಿ ಇರದ ಹೊರತು ಪತಿ ಪತ್ನಿಯರ ಸಂಬಂಧ ಪೂರ್ಣವಾಗುವುದಿಲ್ಲ. ಈ ಸಂಬಂಧದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ತಿಳುವಳಿಕೆ ಅತ್ಯಗತ್ಯ. ಆದರೆ ಇವರಿಬ್ಬರ ನಡುವೆ ಈ ಪ್ರೀತಿಯ ಕೊರತೆ ಇತ್ತು. ಕುಟುಂಬ ಮತ್ತು ಸಮಾಜದ ಒತ್ತಡದಲ್ಲಿ ಮದುವೆ ನಡೆಯುತ್ತದೆ ಆದರೆ ಪ್ರೀತಿ ಅರಳುವುದಿಲ್ಲ. ಇಲ್ಲಿ ಪ್ರೀತಿ ಇದ್ದಿದ್ದರೆ ಹೆಂಡತಿ ತನ್ನ ಗಂಡನನನ್ನು ಜೀನ್ಸ್ ಧರಿಸಿದ್ದಾಳೆಂದು ಬೈದಿದ್ದಕ್ಕೆ ಹಲ್ಲೆ ಮಾಡುತ್ತಿರಲಿಲ್ಲ ಅಥವಾ ಹೆಂಡತಿ ಜೀನ್ಸ್ ಧರಿಸಿದ್ದಕ್ಕೆ ಗಂಡ ವಿರೋಧ ವ್ಯಕ್ತಪಡಿಸುತ್ತಿರಲಿಲ್ಲ. ಇಬ್ಬರೂ ಶಾಂತವಾಗಿ ಮಾತನಾಡಿ ತಮ್ಮ ನಡುವಿನ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುತ್ತಿದ್ದರು.