ಮಹಿಳೆಯೊಂದಿಗೆ ಅಸಭ್ಯ ವರ್ತನೆ: ಜೆಡಿಎಸ್ ನಾಯಕ ಅರೆಸ್ಟ್
* ಹುಬ್ಬಳ್ಳಿ-ಧಾರವಾಡ ಪಾಲಿಕೆ ಮಾಜಿ ಸದಸ್ಯ ಜಮನಾಳ
* ಮಹಿಳೆಯನ್ನು ನಡುರಸ್ತೆಯಲ್ಲಿಯೇ ಎಳೆದಾಡಿದ್ದ ಪಾಲಿಕೆ ಮಾಜಿ ಸದಸ್ಯ
* ಈ ಕುರಿತು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಧಾರವಾಡ(ಸೆ.13): ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತನೆ ಮಾಡಿದ ಪಾಲಿಕೆಯ ಜೆಡಿಎಸ್ ಮಾಜಿ ಸದಸ್ಯ ಶ್ರೀಕಾಂತ ಜಮನಾಳ ಅವರನ್ನು ವಿದ್ಯಾಗಿರಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಎರಡು ದಿನಗಳ ಹಿಂದೆ ಸತ್ತೂರಿನ ಡೆಂಟಲ್ ಕಾಲೇಜು ಬಳಿ ಮಹಿಳೆಯನ್ನು ನಡುರಸ್ತೆಯಲ್ಲಿಯೇ ಎಳೆದಾಡಿದ ಕುರಿತು ವಿಡಿಯೋ ವೈರಲ್ ಆಗಿತ್ತು. ತನ್ನ ಮೇಲಾದ ದೌರ್ಜನ್ಯ ಕುರಿತು ಮಹಿಳೆಯು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಶನಿವಾರ ದೂರು ದಾಖಲಿಸಿದ್ದರು.
ಬಲವಂತವಾಗಿ ಡ್ರಗ್ ಸೇವಿಸುವಂತೆ ಮಾಡಿ, ಕಾರಿನಲ್ಲಿ ಯುವತಿಯ ಗ್ಯಾಂಗ್ ರೇಪ್!
ಈ ದೂರಿನ ಅನ್ವಯ ವಿದ್ಯಾಗಿರಿ ಪೊಲೀಸರು ಆರೋಪಿ ಶ್ರೀಕಾಂತ ಅವರನ್ನು ಸವದತ್ತಿ ಪಟ್ಟಣದಲ್ಲಿ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.