Asianet Suvarna News Asianet Suvarna News

ಬಲವಂತವಾಗಿ ಡ್ರಗ್‌ ಸೇವಿಸುವಂತೆ ಮಾಡಿ, ಕಾರಿನಲ್ಲಿ ಯುವತಿಯ ಗ್ಯಾಂಗ್‌ ರೇಪ್‌!

* 20 ವರ್ಷದ ಮಹಿಳೆಗೆ ಬಲವಂತವಾಗಿ ಡ್ರಗ್ಸ್‌ ಸೇವಿಸುವಂತೆ ಮಾಡಿದ್ರು

* ತ.ನಾಡು: ಕಾರಿನಲ್ಲಿ ಯುವತಿಯ ಮೇಲೆ ಗ್ಯಾಂಗ್‌ ರೇಪ್‌

 

tamil Nadu 20 Year Old Woman Drugged Gangraped In Car Dumped On Road pod
Author
Bangalore, First Published Sep 12, 2021, 9:08 AM IST
  • Facebook
  • Twitter
  • Whatsapp

ಚೆನ್ನೈ(ಸೆ.12): 20 ವರ್ಷದ ಮಹಿಳೆಗೆ ಬಲವಂತವಾಗಿ ಡ್ರಗ್‌ ಸೇವಿಸುವಂತೆ ಮಾಡಿ, ಚಲಿಸುತ್ತಿರುವ ಕಾರಿನಲ್ಲಿ ಅತ್ಯಾಚಾರ ಎಸಗಿದ ಘಟನೆ ಚೆನ್ನೈ ಸಮೀಪದ ಕಾಂಚೀಪುರಂ ನಗರದಲ್ಲಿ ನಡೆದಿದೆ.

ಮೊಬೈಲ್‌ ಅಂಗಡಿಯಲ್ಲಿ ಕೆಲಸ ಮಾಡತ್ತಿದ್ದ ಯುವತಿ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದಾಗ ರಸ್ತೆ ಬಳಿ ಆಕೆಯನ್ನು ಕಾರಿಗೆ ಹತ್ತಿಸಿಕೊಂಡ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಕಾರಿನಲ್ಲಿ ಪರಿಚಿತ ವ್ಯಕ್ತಿ ಇದ್ದುದರಿಂದ ಆಕೆ ಕಾರನ್ನು ಹತ್ತಿದ್ದಾಳೆ. ಆತನನ್ನು ಪೊಲೀಸರು ಗುಣಶೀಲನ್‌ ಎಂದು ಗುರುತಿಸಿದ್ದು, ಆತ ಮತ್ತು ಅವನ ಸ್ನೇಹಿತರು ಸೇರಿ ಆಕೆಯ ಮೇಲೆ ಚಲಿಸುತ್ತಿರುವ ಕಾರಿನಲ್ಲೇ ಅತ್ಯಚಾರವೆಸಗಿದ್ದಾರೆ ಎನ್ನ​ಲಾ​ಗಿದೆ.

ಸಂತ್ರಸ್ತೆಗೆ ಚಿಕಿತ್ಸೆ ನೀಡಲಾಗುತ್ತಿದ್ದು ಆಕೆ ಗುಣಮುಖವಾಗುತ್ತಿದ್ದಾಳೆ. ಆರೋಪಿಗಳನ್ನು ಬಂಧಿಸಲು ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow Us:
Download App:
  • android
  • ios