ಪತಿಯ ಜೊತೆಗೆ ಗೋಕರ್ಣಕ್ಕೆ ಪ್ರವಾಸ ಬಂದಿದ್ದ ಜಪಾನ್ ಮಹಿಳೆ ನಾಪತ್ತೆ
ಗೋಕರ್ಣ ಪ್ರವಾಸಕ್ಕೆ ಆಗಮಿಸಿದ್ದ ಜಪಾನ್ ಮೂಲದ ಮಹಿಳೆ ನಾಪತ್ತೆಯಾಗಿರುವ ಘಟನೆ ನಡೆದಿದೆ. ನಾಪತ್ತೆಯಾದ ಜಪಾನ್ ಮೂಲದ ಪ್ರವಾಸಿ ಮಹಿಳೆಯನ್ನು ಎಮಿ ಯಮಾಝಕಿ ಎಂದು ಗುರುತಿಸಲಾಗಿದೆ.
ಕಾರವಾರ (ಫೆ.7): ಗೋಕರ್ಣ ಪ್ರವಾಸಕ್ಕೆ ಆಗಮಿಸಿದ್ದ ಜಪಾನ್ ಮೂಲದ ಮಹಿಳೆ ನಾಪತ್ತೆಯಾಗಿರುವ ಘಟನೆ ನಡೆದಿದೆ. ನಾಪತ್ತೆಯಾದ ಜಪಾನ್ ಮೂಲದ ಪ್ರವಾಸಿ ಮಹಿಳೆಯನ್ನು ಎಮಿ ಯಮಾಝಕಿ (43) ಎಂದು ಗುರುತಿಸಲಾಗಿದೆ. ಫೆಬ್ರವರಿ 4 ರಂದು ಗೋಕರ್ಣದ ಬಂಗ್ಲೆಗುಡ್ಡದ ನೇಚರ್ ಕಾಟೇಜ್‌ನಲ್ಲಿ ತನ್ನ ಪತಿಯ ಜೊತೆ ಮಹಿಳೆ ತಂಗಿದ್ದರು. ಫೆಬ್ರವರಿ 5ರಂದು ಬೆಳಗ್ಗೆ 10.15 ಸಮಯಕ್ಕೆ ಪತಿ ಮಲಗಿದ್ದ ವೇಳೆ ನೇಚರ್ ಕಾಟೇಜ್‌ನಿಂದ ಹೊರ ಹೋಗಿದ್ದ ಮಹಿಳೆ ಮತ್ತೆ ಮರಳಿ ಬಂದಿಲ್ಲ. ಈ ಬಗ್ಗೆ ಮಹಿಳೆಯ ಪತಿ ದೈ ಯಮಾಝಕಿಯಿಂದ ಗೋಕರ್ಣ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ನಾಪತ್ತೆಯಾದ ಜಪಾನಿ ಮಹಿಳೆ ಎಮಿ ಯಮಾಝಕಿ ಅವರನ್ನು ಗೋಕರ್ಣ ಪೊಲೀಸರು ಹುಡುಕಾಡುತ್ತಿದ್ದಾರೆ.
ಕ್ರಿಕೆಟಿಗನ ಜೊತೆ ಪ್ರೀತಿಯಲ್ಲಿದ್ದ ಲತಾ ಮಂಗೇಶ್ಕರ್ ಕೊನೆವರೆಗೂ ಮದುವ ...
ಓಂ ಬೀಚಿನಲ್ಲಿ ಸ್ವಚ್ಛತೆ ಕಾರ್ಯ: ದೋಣಿ ಬೈಲ್, ಕುಜನಿ ಹೊಟೇಲ್ ಮಾಲೀಕರ ಸಂಘದ ವತಿಯಿಂದ ಇಲ್ಲಿನ ಓಂ ಕಡಲತೀರದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ಕಡಲ ತಟದಲ್ಲಿ ಎಸೆದ ಪ್ಲಾಸ್ಟಿಕ್ ಬಾಟಲ್ ಮತ್ತಿತರ ತ್ಯಾಜ್ಯವನ್ನು ತೆರವುಗೊಳಿಸಲಾಯಿತು. ಮುಂಜಾನೆಯಿಂದ ಸತತ ಐದು ತಾಸಿಗೂ ಅಧಿಕ ಕಾಲ ನಡೆದ ಸ್ವಚ್ಛತಾ ಕಾರ್ಯದಲ್ಲಿ ನಮಸ್ತೆ ಕೆಫೆ ಮಾಲೀಕ ಗೋವಿಂದ ಗೌಡ, ಸ್ವಸ್ವರ ರೆಸಾರ್ಟ್‌ನ ಸುಬೋಧ ಶೆಟ್ಟಿ ಮತ್ತು ಸಿಬ್ಬಂದಿ, ಸುರೇಶ ಗೌಡ, ಸುಕ್ರು ಗೌಡ, ನಾಗೇಶ ಗೌಡ, ಪ್ರಶಾಂತ ಮಾಂದ್ರೇಕರ ಹಾಗೂ ಸಂಘಟನೆಯ ಪದಾಧಿಕಾರಿಗಳು, ಸದಸ್ಯರು, ಹೊಟೇಲ್ ಸಿಬ್ಬಂದಿ, ವಿದೇಶಿ ಪ್ರವಾಸಿಗರು ಪಾಲ್ಗೊಂಡಿದ್ದರು.
ಸೌಂದರ್ಯವತಿಯಾಗಿದ್ದ ಶಾರುಖ್ ಖಾನ್ ಸಹೋದರಿ ಜೀವನಪೂರ್ತಿ ಹೀಗಿರಲು ಕಾರ ...
ಆನಂತರ ಕಸ ಸರಿಯಾದ ರೀತಿಯಲ್ಲಿ ತುಂಬಿ ಗ್ರಾಪಂಗೆ ವಿಲೇವಾರಿಗಾಗಿ ನೀಡಲಾಯಿತು. ಈ ಬಗ್ಗೆ ಉದ್ಯಮಿ ಗೋವಿಂದ ಗೌಡ ಮಾತನಾಡಿ, ನಾವೆಲ್ಲರೂ ಸೇರಿ ಈ ಕಾರ್ಯವನ್ನು ನಿರಂತರ ಮಾಡುತ್ತಿದ್ದೇವೆ. ಆದರೆ ಇಲ್ಲಿಗೆ ಬರುವ ಪ್ರವಾಸಿಗರು ತಮ್ಮ ಬಳಿ ಇರುವ ಆಹಾರ ಪೊಟ್ಟಣ, ನೀರಿನ ಬಾಟಲಿ ಮತ್ತಿತರ ವಸ್ತುಗಳನ್ನು ಉಪಯೋಗಿಸಿದ ಆನಂತರ ಎಲ್ಲೆಂದರಲ್ಲಿ ಎಸಯದೆ ಕಸದ ತೊಟ್ಟಿಯಲ್ಲಿ ಹಾಕಿದರೆ ಸ್ವಚ್ಛ ಸುಂದರ ಪರಿಸರವನ್ನಾಗಿ ಇಡಬಹುದು. ಇದಕ್ಕೆ ಪ್ರವಾಸಿಗರು ಸಹಕರಿಸಬೇಕು ಎಂದರು.