ಬೆಂಗಳೂರು(ಜ.29):ಸನ್ನಡತೆ ಆಧಾರದಲ್ಲಿ ಜೈಲಿನಿಂದ ಆಚೆ ಬಂದು ಮತ್ತೆ ಮನೆಗಳ್ಳತನ ಮಾಡುತ್ತಿದ್ದ ಹಗಲುಕಳ್ಳನನ್ನ ನಗರದ ಜಾಲಹಳ್ಳಿ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉದಯ್ ಅಲಿಯಾಸ್ ನೀರು ಮಜ್ಜಿಗೆ ಎಂಬಾತನೇ ಬಂಧಿತ ಖದೀಮನಾಗಿದ್ದಾನೆ. 

ಉದಯ್ ಅಲಿಯಾಸ್ ನೀರು ಮಜ್ಜಿಗೆ 17 ವರ್ಷದವನಿದ್ದಾಗ ಕಳ್ಳತನ ನೆಡೆಸಿ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದನು. ಸನ್ನಡತೆಯ ಆಧಾರದ ಮೇಲೆ ನಿಗದಿತ ಶಿಕ್ಷೆಗಿಂತ ಎರಡು ವರ್ಷ ಮುನ್ನವೇ ಆತನನ್ನ ಬಿಡುಗಡೆಗೊಳಿಸಲಾಗಿತ್ತು. ಆದರೆ, ಮತ್ತೆ ತನ್ನ ಹಳೆ ಚಾಳಿ ಆರಂಭಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.  

ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಉದಯ್ ಜೈಲಿನಲ್ಲಿ ಮಜ್ಜಿಗೆ ಹಂಚುವ ಜವಾಬ್ದಾರಿ ನಿಭಾಯಿಸುತ್ತಿದ್ದ. ಹೀಗಾಗಿ ಉದಯ್‌ನಿಗೆ ನೀರುಮಜ್ಜಿಗೆ ಎಂಬ ಹೆಸರು ಬಂದಿತ್ತು. ಸನ್ನಡತೆ ಆಧಾರದಲ್ಲಿ 2 ವರ್ಷ ಮುನ್ನವೇ ಬಿಡುಗಡೆಯಾಗಿದ್ದನು. ಆರೋಪಿಯ ವಿರುದ್ಧ ಜಾಲಹಳ್ಳಿ, ಸೋಲದೇವನಹಳ್ಳಿ ಸೇರಿದಂತೆ ಹಲವೆಡೆ ಪ್ರಕರಣಗಳು ದಾಖಲಾಗಿವೆ.

ಉದಯ್ ಬಂಧನದ ವೇಳೆ ಸರಿಸುಮಾರು 500 ಗ್ರಾಂ ಚಿನ್ನಾಭರಣಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.