Asianet Suvarna News Asianet Suvarna News

ಸಾಮಾಜಿಕ ಜಾಲತಾಣದಲ್ಲಿ ಐಎಎಸ್ ಅಧಿಕಾರಿ ಟೀನಾ ದಾಬಿ ಹೆಸರಲ್ಲಿ ವಂಚಿಸಲು ಯತ್ನಿಸಿದ ವ್ಯಕ್ತಿ ಬಂಧನ

ಯುಪಿಎಸ್‌ಸಿ ಟಾಪರ್ ಹಾಗೂ ಜೈಸಲ್ಮೇರ್‌ ಜಿಲ್ಲಾಧಿಕಾರಿಯಾಗಿರುವ ಟೀನಾ ದಾಬಿ ಹೆಸರಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಂಚಿಸಲು ಯತ್ನಿಸಿದ ವ್ಯಕ್ತಿಯೊಬ್ಬರನ್ನು ರಾಜಸ್ಥಾನದಲ್ಲಿ ಬಂಧಿಸಲಾಗಿದೆ. ಈ ಬಗ್ಗೆ ಟೀನಾ ದಾಬಿಯೇ ದೂರು ನೀಡಿದ್ದರು. 

jaisalmer collector tina dabi impersonator arrested in rajasthan dungarpur ash
Author
Bangalore, First Published Aug 10, 2022, 11:46 AM IST

ರಾಜಸ್ಥಾನದ ಡುಂಗಾರ್‌ಪುರದ ಯುವಕನೊಬ್ಬ ಐಎಎಸ್ ಅಧಿಕಾರಿ ಟೀನಾ ದಾಬಿ ಅವರ ಫೋಟೋಗಳನ್ನು ಬಳಸಿಕೊಂಡು ವಂಚಿಸಲು ಯತ್ನಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಯುಪಿಎಸ್‌ಸಿ ಟಾಪರ್‌ ಆಗಿದ್ದ ಟೀನಾ ಡಾಬಿ ಹೆಸರು ದುರ್ಬಳಕೆ ಮಾಡಿಕೊಂಡು ಇತರರನ್ನು ವಂಚಿಸಲು ಪ್ರಯತ್ನಿಸಿದ ಸಂಬಂಧ ಆ ಯುವಕನನ್ನು ಬಂಧಿಸಲಾಗಿದೆ. ಸದ್ಯ, ಟೀನಾ ದಾಬಿ ಜೈಸಲ್ಮೇರ್‌ ಜಿಲ್ಲಾಧಿಕಾರಿಯಾಗಿದ್ದು, ತಮ್ಮ ಹೆಸರು ದುರ್ಬಳಕೆ ಮಾಡಲು ಯತ್ನಿಸಿದ ಆರೋಪಿಯ ವಿರುದ್ಧ ದೂರು ನೀಡಿದ್ದಾರೆ.

ಐಎಎಸ್ ಅಧಿಕಾರಿ ಟೀನಾ ದಾಬಿ ಅವರ ಫೋಟೋಗಳನ್ನು ಬಳಸಿಕೊಂಡು ವಾಟ್ಸಾಪ್‌ ಮೂಲಕ ಹಣ ಮತ್ತು ಗಿಫ್ಟ್‌ ಕಾರ್ಡ್‌ಗಳಿಗೆ ಮನವಿ ಮಾಡಿ ಇತರರನ್ನು ವಂಚಿಸಲು ಪ್ರಯತ್ನಿಸಿದ್ದಕ್ಕಾಗಿ ಆರೋಪಿಯನ್ನು ಸೆರೆಹಿಡಿಯಲಾಗಿದೆ ಎಂದು ತಿಳಿದುಬಂದಿದೆ. ನಗರ ಸುಧಾರಣಾ ಟ್ರಸ್ಟ್ (ರಾಜಸ್ಥಾನ ಆಡಳಿತ ಸೇವೆ) ಕಾರ್ಯದರ್ಶಿ ಸುನಿತಾ ಚೌಧರಿ ಅವರಿಗೆ ಟೀನಾ ದಾಬಿ ಹೆಸರಿನಲ್ಲಿ ಸಂದೇಶ ಬಂದಿದ್ದು, ಅದು ಪರ್ಫೆಕ್ಟ್‌ ಇಂಗ್ಲೀಷ್‌ನಲ್ಲಿ ಇದ್ದಿದ್ದರಿಂದ ಸ್ವತ: ಐಎಎಸ್‌ ಅಧಿಕಾರಿ ಟೀನಾ ದಾಬಿಯೇ ತನಗೆ ಸಂದೇಶ ಕಳಿಸಿದ್ದಾರೆಂದು ಅವರು ಅಂದುಕೊಂಡಿದ್ದಾರೆ. ಆದರೆ, ಅಮೆಜಾನ್‌ ಗಿಫ್ಟ್‌ ಕಾರ್ಡ್‌ ಕೇಳುವ ಮೆಸೇಜ್‌ ಬಂದಾಗ ಅನುಮಾನಗೊಂಡ ಅವರು ನಂತರ ಟೀನಾ ದಾಬಿಗೆ ಕರೆ ಮಾಡಿದ ನಂತರ, ಜೈಸಲ್ಮೇರ್‌ ಜಿಲ್ಲಾಧಿಕಾರಿ ಈ ಬಗ್ಗೆ ಎಸ್‌ಪಿಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.

ಸೋಶಿಯಲ್ ಮೀಡಿಯಾದಲ್ಲಿ ಮದುವೆ ಫೋಟೋ ಶೇರ್ ಮಾಡಿಕೊಂಡ IAS ಟೀನಾ ದಾಬಿ!

ವಂಚಕನ ಫೋನ್ ಸಂಖ್ಯೆಯಿಂದ ಉತ್ತಮ ಇಂಗ್ಲೀಷ್‌ನಲ್ಲಿ UIT ಕಾರ್ಯದರ್ಶಿ (RAS) ಸುನೀತಾ ಚೌಧರಿ ಅವರಿಗೆ ಸೋಮವಾರ ರಾತ್ರಿ ಸಂದೇಶ ಬಂದಿದೆ. ಈ ಹಿನ್ನೆಲೆ ಟೀನಾ ದಾಬಿ ತನ್ನನ್ನು ಸಂಪರ್ಕಿಸಿದ್ದಾರೆ ಎಂದು ಅವರು ಭಾವಿಸಿದ್ದಾರೆ. ‘’ಅವರು ಕೆಲಸ ಮಾಡುತ್ತಿದ್ದಾರೆ ಎಂದು ನಾನು ಭಾವಿಸಿದೆ. ಆದರೆ ಸಂದೇಶದಲ್ಲಿ, ಆ ವಂಚಕ ನನ್ನಿಂದ ಅಮೆಜಾನ್‌ ಗಿಫ್ಟ್‌ ಕಾರ್ಡ್‌ಗಳನ್ನು ಕೇಳಿದ್ದಾನೆ. ಆದರೆ, ನಾನು ಅಮೆಜಾನ್ ಅನ್ನು ಬಳಸದ ಕಾರಣ ನನಗೆ ಅನುಮಾನ ಬಂದಿತು" ಎಂದು ಸುನೀತಾ ಚೌಧರಿ ವಿವರಿಸಿದ್ದಾರೆ.

ಆದರೆ ನಾನು ಆ ಬಗ್ಗೆ ಖಚಿತಪಡಿಸಿಕೊಳ್ಳಲು ಟೀನಾ ದಾಬಿಯ ಅಧಿಕೃತ ನಂಬರ್‌ಗೆ ಕರೆ ಮಾಡಿದ್ದೆ ಮತ್ತು ಆ ವಿಚಾರವನ್ನು ತಿಳಿದು ಅವರು ಗಾಬರಿಗೊಂಡರು. ನಂತರ ಜೈಸಲ್ಮೇರ್ ಜಿಲ್ಲಾಧಿಕಾರಿ ಟೀನಾ ದಾಬಿ ಅವರೇ ತಮ್ಮ ಹೆಸರಿನಲ್ಲಿ ವಂಚಿಸುವ ಪ್ರಯತ್ನದ ಬಗ್ಗೆ ತಿಳಿದ ತಕ್ಷಣ ಎಸ್‌ಪಿಗೆ (Superintendent of Police) ಎಚ್ಚರಿಕೆ ನೀಡಿದರು.

ಬಳಿಕ, ಸೈಬರ್ ಸ್ಕ್ವಾಡ್‌ (Cyber Squad) ಸಹಾಯದಿಂದ, ಜೈಸಲ್ಮೇರ್‌ ಎಸ್‌ಪಿ ಆ ಫೋನ್‌ ನಂಬರ್‌ ಅನ್ನು ಪತ್ತೆಹಚ್ಚಿದರು ಮತ್ತು ಡುಂಗಾರ್‌ಪುರ (Dungarpur) ಜಿಲ್ಲೆಯಲ್ಲಿ ಆ ನಂಬರ್ ಲೊಕೇಟ್‌ ಆಗುತ್ತಿರುವ ಬಗ್ಗೆ ಅವರು ಪತ್ತೆ ಮಾಡಿದರು. ಈ ಪರಿಸ್ಥಿತಿಯ ಬಗ್ಗೆ ಡುಂಗರಪುರ ಎಸ್‌ಪಿಗೆ ಎಚ್ಚರಿಕೆ ನೀಡಿದ ನಂತರ ಫೋನ್ ಬಳಸುತ್ತಿದ್ದ ಯುವಕನನ್ನು ಬಂಧಿಸಲಾಯಿತು ಎಂದು ತಿಳಿದುಬಂದಿದೆ. ಈ ಮಧ್ಯೆ, ಆ ಯುವಕ ಇತರರಿಗೂ ಸಹ ಇದೇ ರೀತಿ ವಂಚಿಸಿದ್ದಾನಾ ಅಥವಾ ಮೋಸ ಮಾಡಲು ಪ್ರಯತ್ನಿಸಿದ್ದಾನಾ ಎಂಬ ಬಗ್ಗೆ ಪೊಲೀಸರು ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. 

ಡಾ ಪ್ರದೀಪ್ ಗವಾಂಡೆ ಜೊತೆ ಹಸೆಮಣೆಯೇರಿದ ಐಎಎಸ್‌ ಟೀನಾ ದಾಬಿ

ವಾಟ್ಸಾಪ್‌ನಲ್ಲಿ ಫೋನ್‌ ನಂಬರ್‌ ರಿಜಿಸ್ಟರ್‌ ಮಾಡಿಕೊಂಡು ಅದರ ಡಿಪಿಗೆ ಯುಪಿಎಸ್‌ಸಿ ಟಾಪರ್‌ ಆಗಿದ್ದ ಟೀನಾ ದಾಬಿ ಫೋಟೋ ಹಾಕಿಕೊಂಡಿದ್ದ. ನಂತರ, ಅಮೆಜಾನ್‌ ಗಿಫ್ಟ್‌ ಕಾರ್ಡ್‌ ಕೇಳುವ ಮೂಲಕ ವಂಚಿಸಲು ಯತ್ನಿಸುತ್ತಿದ್ದ ಎಂದು ತಿಳಿದುಬಂದಿದೆ. ಈ ಮಧ್ಯೆ, ನನ್ನ ಬಳಿ ಒಂದೇ ಅಧಿಕೃತ ನಂಬರ್ ಇದೆ. ಈ ಹಿನ್ನೆಲೆ ಅಪರಿಚಿತ ನಂಬರ್‌ನಿಂದ ಮೆಸೇಜ್‌ ಬಂದರೆ ಆ ಬಗ್ಗೆ ಎಚ್ಚರಿಕೆಯಿಂದ ಇರಲು ಜೈಸಲ್ಮೇರ್‌ ಜಿಲ್ಲಾದಿಕಾರಿಯಾಗಿರುವ ಟೀನಾ ದಾಬಿ ಜನರಿಗೆ ಮನವಿ ಮಾಡಿದ್ದಾರೆ.

Follow Us:
Download App:
  • android
  • ios