Asianet Suvarna News Asianet Suvarna News

Dandupalya: ದಂಡುಪಾಳ್ಯದವರಿಗೆ ಮನೆ ಬಾಡಿಗೆ ಕೊಡಬಹುದೆ? ಪೊಲೀಸರ ಕೇಳಿದ ಮನೆ ಮಾಲೀಕ

* ದಂಡುಪಾಳ್ಯದ ಜನರಿಗೆ ಮನೆ ಬಾಡಿಕೆ ಕೊಡಬಹುದೆ?
*  ಬೆಂಗಳೂರು ಪೊಲೀಸರಿಗೆ ಸಂದೇಶ ರವಾನಿಸಿ ಮನೆ ಮಾಲೀಕ
* ಹತ್ತಿರದ ಪೊಲೀಸ್ ಠಾಣೆ ಸಂಪರ್ಕಿಸಿ ಎಂದು ತಿಳಿಸಿದ ಪೊಲೀಸ್

is it fine to give house for rent to dandupalya people landlord questions bengaluru police mah
Author
Bengaluru, First Published Feb 8, 2022, 4:36 PM IST | Last Updated Feb 8, 2022, 4:36 PM IST

ಬೆಂಗಳೂರು(ಫೆ. 08) ಇದು ನಿಜಕ್ಕೂ ಒಂದು ವಿಚಿತ್ರ ಪ್ರಕರಣ. ದಂಡುಪಾಳ್ಯದವರಿಗೆ (Dandupalya) ಮನೆ ಬಾಡಿಗೆಗೆ (Rent) ಕೊಡಬೇಕೊ ಬೇಡ್ವೊ..?   ಬೆಂಗಳೂರು (Bengaluru) ಮನೆ ಮಾಲೀಕರಲ್ಲಿ ಈ ಪ್ರಶ್ನೆ ಮತ್ತೆ ಮೂಡಿದೆ. ಮನೆ ಮಾಲೀಕ  ಸೋಶಿಯಲ್ ಮೀಡಿಯಾ (Social Media)  ಮುಖೇನ ಪೊಲೀಸರ (Bengaluru Police) ಸಲಹೆ ಕೇಳಿದ್ದಾರೆ.

ದಂಡುಪಾಳ್ಯದ ಹೆಸರಿನಲ್ಲಿ ಸಿನಿಮಾ ಬಂದಿದೆ. ಅವು ಯಾವ ರೀತಿಯ ಪರಿಣಾಮ ಉಂಟುಮಾಡಿದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ದಂಡುಪಾಳ್ಯ ಸಿನಿಮಾ ಎಂದಾಗ ತಕ್ಷಣ ಕಣ್ಣು ಮುಂದೆ ಬರುವುದು ಕಳ್ಳತನ, ದರೋಡೆ, ಅತ್ಯಾಚಾರ, ಕೊಲೆ. ಈ ಸಿನಿಮಾ ನೋಡಿದ ಬೆಂಗಳೂರಿನ ಕೆಲ ಮನೆ ಮಾಲೀಕರಿಗೆ ದಂಡುಪಾಳ್ಯದವರಿಗೆ ಮನೆ ಬಾಡಿಗೆಗೆ ಕೊಡಬೇಕೊ ಬೇಡವೋ ಎನ್ನುವ ಗೊಂದಲ ಶುರುವಾಗಿದೆ.

ಮನೆ ಮಾಲೀಕ ಕೃಷ್ಣಮೂರ್ತಿ ಎಂಬುವರ ಮನೆಗೆ ಇತ್ತೀಚೆಗೆ ಓರ್ವ ಬಾಡಿಗೆದಾರ ಬಂದಿದ್ದು, ಆಗ ಅವರು ಅವರ ಆಧಾರ್ ಕಾರ್ಡ್ ಅನ್ನು ಪರಿಶೀಲಿಸಿದ್ದಾರೆ. ಅದರಲ್ಲಿ ಅವರ ಹಳ್ಳಿಯ ಹೆಸರನ್ನು ದಂಡುಪಾಳ್ಯ ಎಂದು ಇರುವುದನ್ನು ಗುರುತಿಸಿದ್ದಾರೆ.  ಇದರಿಂದ ಆತಂಕಗೊಂಡ ಮನೆ ಮಾಲೀಕ ದಂಡುಪಾಳ್ಯದವರಿಗೆ ಮನೆ ಬಾಡಿಗೆ ಕೊಡಬಹುದೇ ಎಂದು ಟ್ವೀಟ್ ಮೂಲಕ ಪೊಲೀಸರ ಸಲಹೆ ಕೇಳಿದ್ದಾರೆ.

ಆಧಾರ್ ಕಾರ್ಡ್ ಪರಿಶೀಲಿಸಿದಾಗ ಅದರಲ್ಲಿ ಅವರ ಹಳ್ಳಿಯ ಹೆಸರನ್ನು ದಂಡುಪಾಳ್ಯ ಎಂದು ನಮೂದಿಸಲಾಗಿದೆ. ಈ ಹಳ್ಳಿಯ ಜನರು ಕ್ರೂರವಾಗಿ ಕೊಲೆ ಮಾಡುತ್ತಾರೆ. ಈ ಕುರಿತು ನಾನು ಚಲನಚಿತ್ರಗಳನ್ನು ನೋಡಿದ್ದೇನೆ. ಹಾಗಾಗಿ ನೀವೆ ಸಹಾಯ ಮಾಡಬೇಕು ಎಂದು ಪೊಲೀಸರ ಮೊರೆ ಹೋಗಿದ್ದಾರೆ.

ಮನೆ ಮಾಲೀಕರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಇಲಾಖೆ, ಈ ವಿಚಾರಕ್ಕೆ ಸಂಬಂಧಿಸಿ ದಯವಿಟ್ಟು ಹತ್ತಿರದ ಠಾಣೆ ಸಂಪರ್ಕ ಮಾಡಿ. ಅವರು ನಿಮಗೆ ಮಾರ್ಗದರ್ಶನ ನೀಡುತ್ತಾರೆ ಎಂದು ತಿಳಿಸಿದೆ.

ಸುಮನ್ ರಂಗನಾಥ್  ನಟನೆ, ದಂಡುಪಾಳ್ಯ ಭಾಗ 4  ಹೇಗಿದೆ?

ಊರಿನ ಹೆಸರನ್ನೇ ಬದಲಾಯಿಸಿಕೊಂಡಿದ್ದರು:  ದಂಡುಪಾಳ್ಯ ಹೆಸರಿನಿಂದಲೇ ತೊಂದರೆ ಆಗುತ್ತಿದೆ ಎಂದು ಮನಗಂಡ ಗ್ರಾಮಸ್ಥರು ಕೋರ್ಟ್ ಮೆಟ್ಟಿಲು ಏರಿದ್ದರು. ಹೊಸಕೋಟೆ ತಾಲೂಕಿನ ದಂಡುಪಾಳ್ಯಕ್ಕೆ ಗಾಂಧಿನಗರ ಎಂದು ಊರವರೇ ನಾಮಕರಣ ಮಾಡಿದ್ದರು ಎಂಬ ಸುದ್ದಿಯೂ ವರದಿಯಾಗಿತ್ತು

ಪೂಜಾಗಾಂಧಿ ಪ್ರಮುಖ ಪಾತ್ರದಲ್ಲಿರುವ 'ದಂಡುಪಾಳ್ಯ' ಚಿತ್ರ ಬಿಡುಗಡೆಯಾದ ಮೇಲಂತೂ ಚಿತ್ರದ ಶೀರ್ಷಿಕೆ ಬದಲಾಯಿಸುವಂತೆ ಗ್ರಾಮಸ್ಥರು ತೀವ್ರವಾಗಿ ಆಗ್ರಹಿಸಿದ್ದರು.
ಯಾರೋ ಕೆಲವರು ಮಾಡಿದ ದರೋಡೆ ಹಾಗೂ ಕೊಲೆ ಕೃತ್ಯಗಳಿಂದಾಗಿ ಇಡೀ ನಮ್ಮ ಊರಿಗೆ ಕೆಟ್ಟ ಹೆಸರು ಬಂದಿದೆ.  ಎಲ್ಲರನ್ನು ಒಂದೇ ತಕ್ಕಡಿಯಲ್ಲಿ ಹಾಖಿ ತೂಗಬೇಡಿ ಎಂದು ಕೇಳಿಕೊಂಡಿದ್ದರು.

ಇಡೀ ಊರಿಗೆ ಅಂಟಿಕೊಂಡಿರುವ ಈ ಕುಖ್ಯಾತಿಯಿಂದಾಗಿ ನಮ್ಮ ಊರಿಗೆ ಯಾರೂ ಹೆಣ್ಣು ಕೊಡುತ್ತಿಲ್ಲ. ನಮ್ಮೂರಿನೊಂದಿಗೆ ಸಂಬಂಧ ಬೆಳೆಸುತ್ತಿಲ್ಲ. ಊರಿನವರೆಲ್ಲರನ್ನೂ ಕೆಟ್ಟಭಾವದಿಂದ ನೋಡಲಾಗುತ್ತಿದೆ ಎಂದು ಆತಂಕ ತೋಡಿಕೊಂಡಿದ್ದರು. ಈ ಪ್ರಕರಣ ಸಹ ಅದೇ ಸಾಲಿಗೆ ಸೇರಬಹುದು.

ಮನೆ ದರೋಡೆಕೋರರ ಗ್ಯಾಂಗ್ ಆಧಾರಿತ ದಂಡುಪಾಳ್ಯ ಸಿನಿಮಾ ಕನ್ನಡ, ತಮಿಳು, ತೆಲುಗಿನಲ್ಲಿ ಬಿಡಿಗಡೆಯಾಗಿ ಸದ್ದು ಮಾಡಿತ್ತು. ದಂಡಪಾಳ್ಯ ಸಿನಿಮಾವನ್ನು ಮೂರು ಭಾಗದಲ್ಲಿ ತೋರಿಸಲಾಗಿದೆ. ಮೊದಲನೆಯದರಲ್ಲಿ ಗ್ಯಾಂಗ್ ದರೋಡೆಗೆ ಇಳೀಯುತ್ತದೆ. ಎರಡನೆಯದರಲ್ಲಿ ಪೊಲೀಸರೇ ಅಮಾಯಕರನ್ನು ಸಿಲುಕಿಸುತ್ತಾರೆ. 

 

Latest Videos
Follow Us:
Download App:
  • android
  • ios