ಖದರ್ ಕಳೆದುಕೊಂಡ IPL, 14 ವರ್ಷದ ಐಪಿಎಲ್ ಯಶಸ್ವಿ ಓಟಕ್ಕೆ ಬಿತ್ತಾ ಬ್ರೇಕ್..?
* ಹಿಂದಿನ ಖದರ್ ಉಳಿಸಿಕೊಳ್ಳುವಲ್ಲಿ IPL ಫೇಲ್
* 14 ವರ್ಷದ ಐಪಿಎಲ್ ಯಶಸ್ವಿ ಓಟಕ್ಕೆ ಬಿತ್ತಾ ಬ್ರೇಕ್..?
* ಪರಿಹಾರಕ್ಕಾಗಿ ಸ್ಟಾರ್ ವಾಹಿನಿಗೆ ಮೊರೆಯಿಟ್ಟ ಜಾಹೀರಾತುದಾರರು
ಮುಂಬೈ, (ಏ.16): IPL. ಸಾಟಿಯಿಲ್ಲದ ವಿಶ್ವದ ನಂ.1 ಟಿ20 ಜನಪ್ರಿಯ ಲೀಗ್. 2008ರಿಂದ 2014ರವರೆಗೆ ಯಶಸ್ಸಿನ ಉತ್ತುಂಗಕ್ಕೇರಿದೆ. ಹಣ ಗಳಿಕೆ ಮತ್ತು ಅಭಿಮಾನಿಗಳ ಪ್ರೀತಿ ಸಂಪಾದನೆಯಲ್ಲಿ ಈವರೆಗೆ ಹಿಂದೆ ಬಿದ್ದಿಲ್ಲ. ಬಿಸಿಸಿಐ 14 ವರ್ಷ ಮುಟ್ಟಿದ್ದೆಲ್ಲ ಚಿನ್ನ. ಆದ್ರೆ ವಿಶ್ವದ ಇತರೆ ಟಿ20 ಲೀಗ್ಗೆ ಸಾಟಿಯಾಗದ ಕಲರ್ಫುಲ್ ಟೂರ್ನಿ ಯಾಕೋ ಈ ಸಲ ಹಿಂದಿನ ಖದರ್ ಉಳಿಸಿಕೊಳ್ಳುವಲ್ಲಿ ಫೇಲಾಯ್ತಾ ಅನ್ನೋ ಪ್ರಶ್ನೆ ಕಾಡೋಕೆ ಶುರುವಾಗಿದೆ. ಯಾಕಂದ್ರೆ ಹುಚ್ಚೆದ್ದು IPL ವೀಕ್ಷಿಸೋರ ಸಂಖ್ಯೆ ಈ ಸಲ ಶೋಚನೀಯ ರೀತಿಯಲ್ಲಿ ಕುಸಿತ ಕಂಡಿದೆ.
ಎರಡು ದಿನದ ಹಿಂದಷ್ಟೇ ಮೊದಲ ವಾರದ IPL ಟಿವಿ ರೇಟಿಂಗ್ಸ್ ಹೊರಬಿದ್ದಿತ್ತು. ಅಚ್ಚರಿ ಎನ್ನುವಂತೆ ಶೇಕಡಾ 29ರಷ್ಟು IPL ವೀಕ್ಷಿಸೋರ ಸಂಖ್ಯೆ ದಿಢೀರ್ ಕಮ್ಮಿಯಾಗಿತ್ತು. ಬಿಸಿಸಿಐ ಈ ಸುದ್ದಿಯಿಂದ ನಿಜಕ್ಕೂ ಆಘಾತಕ್ಕೊಳಗಾಗಿತ್ತು. ಈಗ ಇದೇ ವಿಚಾರ ಬಿಸಿಸಿಐಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಯಾಕಂದ್ರೆ IPL ರೇಟಿಂಗ್ಸ್ ಕುಸಿತಕ್ಕೆ ಜಾಹೀರಾತುದಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
IPL 2022 ವೇಳೆ 14 ಗೇಮಿಂಗ್ ಸಂಸ್ಥೆಗಳಿಂದ ಜಾಹೀರಾತು ಮಾನದಂಡ ಉಲ್ಲಂಘನೆ : ಎಎಸ್‌ಸಿಐ ವರದಿ
ಪರಿಹಾರಕ್ಕಾಗಿ ಸ್ಟಾರ್ ವಾಹಿನಿಗೆ ಮೊರೆಯಿಟ್ಟ ಜಾಹೀರಾತುದಾರರು
IPL ಟಿವಿ ರೇಟಿಂಗ್ಸ್ ಕುಸಿತ ಸದ್ಯ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಟೂರ್ನಿಯನ್ನ ನಂಬಿ ಕೋಟಿ ಕೋಟಿ ಸುರಿದಿದ್ದ ಜಾಹೀರಾತುದಾರರಿಗೆ ಬರ ಸಿಡಿಲು ಬಡಿದಂತಾಗಿದೆ. ಮ್ಯಾಚ್ ನಡೆಯುತ್ತಿದ್ದರು ಅಡ್ವರ್ಟೈಸ್ಮೆಂಟ್ ವೀಕ್ಷಿಸೋರೆ ಇಲ್ಲದಂತಾಗಿದೆ. ಇದು ಜಾಹೀರಾತುದಾರರನ್ನ ಕೆರಳಿಸಿದ್ದು ಆಗಿರೋ ಅನ್ಯಾಯ ಸರಿಪಡಿಸಲು ಸ್ಟಾರ್ ಸ್ಟೋರ್ಟ್ಸ್ ವಾಹಿನಿಗೆ ಮೊರೆ ಹೋಗಿದ್ದಾರೆ.
IPL ಟಿವಿ ರೇಟಿಂಗ್ಸ್ ಭಾರಿ ಕುಸಿತ ಕಂಡಿದೆ. ಇದು ಅನಿರೀಕ್ಷಿತ. ಎಂದಿಗೂ ಇಷ್ಟೊಂದು ಕುಸಿದಿರಲಿಲ್ಲ. ಕಳೆದ ಬಾರಿಗಿಂತ ಈ ಸಲ ಶೇಕಡ 25 ರಷ್ಟು ಹೆಚ್ಚು ಪಾವತಿಸಿದ್ದೇವೆ. ಪರಿಹಾರಕ್ಕಾಗಿ ಸ್ಟಾರ್ ಸ್ಪೋರ್ಟ್ಸ್ ಅನ್ನು ಸಂಪರ್ಕಿಸಿದ್ದೇವೆ ಎಂದು ಪ್ರಮುಖ ಜಾಹೀರಾತುದಾರರೊಬ್ಬರು ಹೇಳಿದ್ದಾರೆ.

IPL ರೇಟಿಂಗ್ಸ್ ಭಾರಿ ಕುಸಿತ ಕಂಡಿದ್ದೇಕೆ..? :
ಜಿದ್ದಾಜಿದ್ದಿನ ಪಂದ್ಯಗಳ ಹೊರತಾಗಿಯೂ IPL ರೇಟಿಂಗ್ಸ್ ಫಸ್ಟ್ ಟೈಮ್ ಈ ಪರಿ ಕುಸಿತ ಕಂಡಿರೋದಕ್ಕೆ ಕಾರಣ ಏನಿರಬಹುದು ಅನ್ನೋ ಪ್ರಶ್ನೆ ಎಲ್ಲರನ್ನ ಕಾಡಿರುತ್ತೆ. ಆನ್ಸರ್ ಸಿಂಪಲ್. ಈ ಬಾರಿ ಲಾಕ್ಡೌನ್ ಇಲ್ಲ. ಸ್ಟಾರ್ ಕ್ರಿಕೆಟರ್ಸ್ IPLಗೆ ಗುಡ್ಬೈ ಹೇಳಿದ್ದಾರೆ. ಇನ್ನು ಮೆಗಾ ಆಕ್ಷನ್ ನಡೆದಿದ್ದರಿಂದ ಅಭಿಮಾನಿಗಳ ನೆಚ್ಚಿನ ಪ್ಲೇಯರ್ಸ್ ಬೇರೆ ಫ್ರಾಂಚೈಸಿ ಪಾಲಾಗಿದ್ದು ರೇಟಿಂಗ್ಸ್ ಕುಸಿತಕ್ಕೆ ಕಾರಣವಾಗಿದೆ.