Asianet Suvarna News Asianet Suvarna News

ಮಲ್ಲೇಶ್ವರಂ ಕೆಸಿ ಜನರಲ್ ಆಸ್ಪತ್ರೆ ಎಡವಟ್ಟು; ಜಗತ್ತಿಗೆ ಬರುವ ಮುಂಚೆಯೇ ಕಣ್ಣು ಮುಚ್ಚಿದ ಕಂದಮ್ಮ!

ಬೆಂಗಳೂರಿನ ಮಲ್ಲೇಶ್ವರಂ ಕೆಸಿ ಜನರಲ್ ಆಸ್ಪತ್ರೆ ವೈದ್ಯರ ಎಡವಟ್ಟು, ಬೇಜವಾಬ್ದಾರಿತನ, ಬಡರೋಗಗಳಿಂದ ಲಂಚಕ್ಕೆ ಬೇಡಿಕೆ ಒಂದಾ ಎರಡಾ ಇಲ್ಲಿನ ಅವ್ಯವಸ್ಥೆಗೆ ಎಷ್ಟೋ ಜೀವಗಳು ಬಲಿಯಾಗಿವೆ. ಇದೀಗ ಅವುಗಳ ಸಾಲಿಗೆ ಮತ್ತೊಂದು ಘಟನೆ ನಡೆದಿದೆ. ವೈದ್ಯರ ಎಡವಟ್ಟಿನಿಂದ ಜಗತ್ತಿಗೆ ಬರುವ ಮೊದಲೇ ಕಂದಮ್ಮ ಕಣ್ಮುಚ್ಚಿದ ದುರ್ಘಟನೆ ನಡೆದುಹೋಗಿದೆ.

Infant dies due to negligence of KC General Hospital doctors malleshwaram bengaluru rav
Author
First Published Dec 18, 2023, 12:12 PM IST

ಬೆಂಗಳೂರು (ಡಿ.18): ಬೆಂಗಳೂರಿನ ಮಲ್ಲೇಶ್ವರಂ ಕೆಸಿ ಜನರಲ್ ಆಸ್ಪತ್ರೆ ವೈದ್ಯರ ಎಡವಟ್ಟು, ಬೇಜವಾಬ್ದಾರಿತನ, ಬಡರೋಗಗಳಿಂದ ಲಂಚಕ್ಕೆ ಬೇಡಿಕೆ ಒಂದಾ ಎರಡಾ ಇಲ್ಲಿನ ಅವ್ಯವಸ್ಥೆಗೆ ಎಷ್ಟೋ ಜೀವಗಳು ಬಲಿಯಾಗಿವೆ. ಇದೀಗ ಅವುಗಳ ಸಾಲಿಗೆ ಮತ್ತೊಂದು ಘಟನೆ ನಡೆದಿದೆ. ವೈದ್ಯರ ಎಡವಟ್ಟಿನಿಂದ ಜಗತ್ತಿಗೆ ಬರುವ ಮೊದಲೇ ಕಂದಮ್ಮ ಕಣ್ಮುಚ್ಚಿದ ದುರ್ಘಟನೆ ನಡೆದುಹೋಗಿದೆ.

ಖಾಸಗಿ ಆಸ್ಪತ್ರೆಯಲ್ಲಿ ಲಕ್ಷಾಂತರ ರೂ. ಖರ್ಚು ಮಾಡುವ ಶಕ್ತಿಯಿಲ್ಲದೆ ಚೊಕ್ಕಸಂದ್ರದ ದೇವಿಕಾ ಎಂಬ ತುಂಬು ಗರ್ಭಿಣಿಯ ಮಹಿಳೆಯನ್ನು ಕೆಎಸ್ ಜನರಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಗರ್ಭಿಣಿಗೆ ಒಂಭತ್ತು ತಿಂಗಳು ಭರ್ತಿಯಾಗಿದ್ದರೂ  ಹನ್ನೆರಡು ದಿನದ ಬಳಿಕ ಡೇಲಿವರಿ ಡೇಟ್ ಕೊಟ್ಟಿರುವ ಆಸ್ಪತ್ರೆ ವೈದ್ಯರು. ಬಳಿಕ ಗರ್ಭಿಣಿ ಡೇಟ್ ಮೀರಿದೆ ನಾರ್ಮಲ್ ಡೆಲಿವೆರಿ ಬೇಡ ಸಿಜರಿಯನ್ ಮಾಡಿ ಅಂತಾ ಕುಟುಂಬಸ್ಥರು ಮನವಿ ವೈದ್ಯರ ಬಳಿ ಮನವಿ ಮಾಡಿಕೊಂಡಿದ್ದಾರೆ.ಆದರೆ ಅದಕ್ಕೆ ಒಪ್ಪದ ಆಸ್ಪತ್ರೆಯವರು,

ಚಾಮರಾಜನಗರ: ಡಾಕ್ಟರ್ಸ್‌ ನಿರ್ಲಕ್ಷ್ಯಕ್ಕೆ ಬಾಲಕ ಸಾವು, ವೈದ್ಯರ ವಿರುದ್ಧ ಎಫ್‌ಐಆರ್‌

ಕುಟುಂಬಸ್ಥರ ವಿರೋಧದ ನಡುವೆ ನಾರ್ಮಲ್ ಡೆಲಿವರಿಗೆ ರೆಡಿ ಮಾಡಿರುವ ಸಿಬ್ಬಂದಿ. ಬಳಿಕ ಕೊನೆಗೆ ನಾರ್ಮಲ್ ಆಗಲ್ಲ ಸಿಜರಿಯನ್ ಮಾಡ್ತೀವಿ ಅಂತಾ ಉಲ್ಟಾ ಮಾಡಿದ ವೈದ್ಯರು. ನಾರ್ಮಲ್ ಡೆಲಿವರಿ ಮಾಡ್ತೇವೆ ಅಂದವರು ಅವರೇ, ಮತ್ತೆ ಸಿಜರಿಯನ್ ಮಾಡ್ತೇವೆ ಎಂದವರು ಕೊನೆಗೆ ಮಗು ಗಲೀಜು ನೀರು ಕುಡಿದು ಸತ್ತು ಹೋಗಿದೆ ಎಂದು ಕುಟುಂಬಸ್ಥರಿಗೆ ತಿಳಿಸಿರುವ ವೈದ್ಯರು. ಮಗು ಸಾವಿನ ಸುದ್ದಿ ಕೇಳಿ ಶಾಕ್ ಗೆ ಒಳಗಾಗಿರುವ ಕುಟುಂಬ.

ಮಗು ಮೃತಪಟ್ಟ ವಿಷಯ ಇನ್ನೂ ಕೂಡ ತಾಯಿಗೆ ತಿಳಿಸದ ಕುಟುಂಬಸ್ಥರು.  ಆಸ್ಪತ್ರೆಯ ಆವರಣದಲ್ಲಿ ದೇವಿಕಾ ಅವರ ತಾಯಿ ಕಣ್ಣೀರು. ಲಂಚ ಲಂಚ ಅಂತಾರೆ ಸಾಯ್ತಾರೆ. ನಾವು ಮೊದಲೇ ಕರೆದುಕೊಂಡು ಬಂದರೂ ನಾರ್ಮಲ್ ಡೆಲಿವರಿ ಮಾಡದೇ  ವಿಳಂಬ ಮಾಡಿದ್ದಾರೆ. ವೈದ್ಯರು ಲಂಚ ಕೊಡದಿದ್ದಕ್ಕೆ ವಿಳಂಬ ಮಾಡಿದ್ದಾರೆ. ಅನ್ಯಾಯವಾಗಿ ಮಗುವನ್ನು ಕೊಂದಿದ್ದಾರೆ ಎಂದು ತಾಯಿ ಅಳಲು. ಆಸ್ಪತ್ರೆ ಎದುರುಗಡೆ ಕುಟುಂಬಸ್ಥರು ಪ್ರತಿಭಟನೆ. ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕುಟುಂಬಸ್ಥರು.

ಯ್ಯೋ ಮಗಳೇ.. ವೈದ್ಯರ ನಿಲ್ಷಕ್ಷ್ಯಕ್ಕೆ ಪ್ರಾಣ ಬಿಟ್ಟ 17ರ ಹರೆಯದ ಹುಡುಗಿ

ಒಂಬತ್ತು ತಿಂಗಳು ತುಂಬಿ ಎಂಟು ದಿನಗಳಾದ್ರೂ ಡೆಲಿವರಿ ಆಗಿರಲಿಲ್ಲ. ಕೆಸಿ ಜನರಲ್ ನವರು ಡಿಸೆಂಬರ್ 8ಕ್ಕೆ ಡಿಲವರಿ ಡೇಟ್ ಕೊಟ್ಟಿದ್ದರು. 10ನೇ ತಾರೀಖು ಬಂದ್ರೂ ಡೆಲವರಿ ಮಾಡಲಿಲ್ಲ. ಭಾನುವಾರ ಬಂದುಬಿಡಿ ಡೆಲವರಿ ಮಾಡ್ತೇವೆ ಅಂತ ಹೇಳಿದ್ರು. ನಿನ್ನೆ ಗರ್ಭಿಣಿಯನ್ನ ದಾಖಲು ಮಾಡಿಕೊಂಡಿದ್ರು. ಆದ್ರೆ ಮಗುವನ್ನ ಸಾಯಿಸಿದ್ದಾರೆ. ಮಗು ಬಗ್ಗೆ ಕೇಳಿದ್ರೆ ಹೊಟ್ಟೆಯಲ್ಲೆ ನಿಮ್ಮ ಮಗು ಸಾವನ್ನಪ್ಪಿದೆ. ನಾವೇನು ಮಾಡೋಕಾಗಲ್ಲ ಅಂತ ಹೇಳಿದ್ರು. ಹೊಟ್ಟೆಯಲ್ಲೇ ಮಗು ಗಲೀಜು ನೀರು ಕುಡಿದು ಮೃತಪಟ್ಟಿದೆ ಎಂದು ಆಸ್ಪತ್ರೆಯವರು ಹೇಳ್ತಿದ್ದಾರೆ. ಆದರೆ ನಾವು ಬಂದ ಸಮಯಕ್ಕೆ ಡೆಲಿವರಿ ಮಾಡಿದ್ರೆ ಮಗು ಉಳಿತಿತ್ತು. ಅವರು ನಿರ್ಲಕ್ಷ್ಯ ಮಾಡಿದ್ದಾರೆ. ನಮ್ಮ ಮಗುವಿನ ಸಾವಿಗೆ ನೇರವಾಗಿ ಕೆಸಿ ಜನರಲ್ ಆಸ್ಪತ್ರೆಯವರೇ ಕಾರಣ ಎಂದು ಆರೋಪಿಸಿದ ಮೃತ ಮಗುವಿನ ಅಜ್ಜಿ.

Follow Us:
Download App:
  • android
  • ios