Asianet Suvarna News Asianet Suvarna News

ದೆಹಲಿಯಲ್ಲಿ ಮತ್ತೊಂದು ಭೀಭತ್ಸ ಕೃತ್ಯ: ಕುಟುಂಬದ ನಾಲ್ವರನ್ನು ಕೊಂದ ಮಾದಕ ವ್ಯಸನಿ..!

ಆರೋಪಿ ನಿರುದ್ಯೋಗಿಯಾಗಿದ್ದು, ಆತ ಮಾದಕ ವ್ಯಸನಿಯಾಗಿದ್ದ. ಈ ಹಿನ್ನೆಲೆ ಮನೆಯಲ್ಲಿ ಜಗಳವಾಡಿ ಮನೆಯ ನಾಲ್ವರು ಸದಸ್ಯರನ್ನು ಕೊಂದಿದ್ದಾನೆ ಎಂದು ಹೇಳಲಾಗಿದೆ. 

back from rehab drug addict kills all family members in delhis palam ash
Author
First Published Nov 23, 2022, 3:20 PM IST

ರಾಷ್ಟ್ರ ರಾಜಧಾನಿಯಲ್ಲಿ ಕೆಲ ದಿನಗಳ ಹಿಂದೆ ಬೆಳಕಿಗೆ ಬಂದ ಶ್ರದ್ಧಾ ವಾಕರ್‌ ಭೀಕರ ಹತ್ಯೆ ಪ್ರಕರಣವನ್ನೇ ಜನರು ಇನ್ನೂ ಮರೆತಿಲ್ಲ. ಈ ನಡುವೆ, ದೆಹಲಿಯಲ್ಲಿ ಮತ್ತೊಂದು ಭೀಭತ್ಸ ಕೃತ್ಯ ಬೆಳಕಿಗೆ ಬಂದಿದೆ.  ತನ್ನದೇ ಕುಟುಂಬದ ನಾಲ್ವರನ್ನು ಮಾದಕ ವ್ಯಸನಿಯೊಬ್ಬ ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ. 25 ವರ್ಷದ ವ್ಯಕ್ತಿ ನೈರುತ್ಯ ದೆಹಲಿಯ ಪಾಲಮ್‌ ಪ್ರದೇಶದಲ್ಲಿ ತನ್ನ ತಂದೆ, ತಾಯಿ, ಸಹೋದರಿ ಹಾಗೂ ಅಜ್ಜಿಯನ್ನು ಇರಿದು ಕೊಂದಿದ್ದಾರೆ ಎಂದು ಹೇಳಲಾಗಿದೆ. ಮಾದಕ ವ್ಯಸನ ಅಭ್ಯಾಸ ಬಿಡಿಸಲು ಆತನನ್ನು ಮಾದಕ ವ್ಯಸನ ಚಟ ಬಿಡಿಸಲು ಪುನಶ್ಚೇತನ ಕೇಂದ್ರಕ್ಕೆ ಕಳಿಸಲಾಗಿತ್ತು. ಅಲ್ಲಿಂದ ಇತ್ತೀಚೆಗೆ ಆತ ಮನೆಗೆ ವಾಪಸಾದ ಬಳಿಕ ವಿವಾದವೊಂದರ ಸಂಬಂಧ ತನ್ನ ಕುಟುಂಬದವರನ್ನೇ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.   

ದೆಹಲಿಯ ತಮ್ಮ ನಿವಾಸದಲ್ಲಿ ಕುಟುಂಬದ ಎಲ್ಲ ನಾಲ್ವರೂ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಮೃತಪಟ್ಟವರನ್ನು 42 ವರ್ಷದ ದಿನೇಶ್‌ ಕುಮಾರ್‌, 40 ವರ್ಷದ ದರ್ಶನ್‌ ಸೈನಿ, ಅಜ್ಜಿ ದೀವಾನೋ ದೇವಿ (75) ಹಾಗೂ ಮಗಳು ಊರ್ವಶಿ (22) ಎಂದು ಗುರುತಿಸಲಾಗಿದೆ. ಆರೋಪಿ ನಿರುದ್ಯೋಗಿಯಾಗಿದ್ದು, ಆತ ಮಾದಕ ವ್ಯಸನಿಯಾಗಿದ್ದ ಹಾಗೂ ಇತ್ತೀಚೆಗಷ್ಟೇ ಮಾದಕ ವ್ಯಸನ ಚಟ ಬಿಡಿಸಲು ಕೇಂದ್ರವೊಂದಕ್ಕೆ ಕಳಿಸಲಾಗಿತ್ತು ಎಂದು ಆತನ ಕುಟುಂಬದ ಸದಸ್ಯರು ಹೇಳಿದ್ದಾರೆ. 

ಇದನ್ನು ಓದಿ: Shraddha murder Case: ಪಾಲಿಗ್ರಾಫ್‌ ಪರೀಕ್ಷೆಗೆ ಒಳಗಾದ ಅಫ್ತಾಬ್ ಪೂನಾವಾಲಾ
 
ಅವರ ಮನೆಯ ಶೌಚಾಲಯದಲ್ಲಿ ಎರಡು ಮೃತದೇಹಗಳು ಪತ್ತೆಯಾಗಿದ್ದರೆ, ಬೆಡ್‌ರೂಂಗಳಲ್ಲಿ ಮತ್ತೆರಡು ಮೃತದೇಹಗಳು ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ನವೆಂಬರ್ 22 ರಂದು ರಾತ್ರಿ 10.30ಕ್ಕೆ ಪಿ.ಎಸ್‌. ಪಲಮ್‌ ಪ್ರದೇಶಕ್ಕೆ ಪೊಲೀಸರಿಗೆ ಕರೆ ಬಂದಿತ್ತು. ಅವರು ಸ್ಥಳಕ್ಕೆ ಬಂದಾಗ, ಕುಟುಂಬದ ನಾಲ್ವರು ಸದಸ್ಯರು ಮನೆಯೊಂದರಲ್ಲಿ ಮೃತಪಟ್ಟಿದ್ದರು. ಅಲ್ಲದೆ, ಆರೋಪಿ ತಪ್ಪಿಸಿಕೊಳ್ಳಲು ಪ್ರಯತ್ನಪಟ್ಟಿದ್ದು, ಆದರೆ, ಸಂಬಂಧಿಕರು ಹಾಗೂ ಕರೆ ಮಾಡಿದ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು ಎಂದೂ ಪೊಲೀಸ್‌ ಅಧಿಕಾರಿ ಮಾಹಿತಿ ನೀಡಿದ್ದಾರೆ. 

ಈ ಸಂಬಂಧ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ ದೆಹಲಿ ಪೊಲೀಸರು, ಕೇಶವ್ ತಾಯಿ, ಸಹೋದರಿ, ತಂದೆ ಹಾಗೂ ಆತನ ಅಜ್ಜಿಯನ್ನು ಪಾಲಮ್‌ ಪ್ರದೇಶದ ಮನೆಯಲ್ಲಿ ಇರಿದು ಕೊಲೆ ಮಾಡಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಸ್ನೇಹಿತನ ಕೊಂದು ಠಾಣೆಗೆ ಶವ ಸಮೇತ ಠಾಣೆಗೆ ಬಂದ..!

ಈ ಪ್ರಕರಣ ಸಂಬಂಧ ಐಪಿಸಿ ಸೆಕ್ಷನ್‌ 302 ಅಡಿ ಕೇಸ್‌ ದಾಖಲಿಸಲಾಗಿದೆ ಹಾಗೂ ಈ ಸಂಬಂಧ ತನಿಖೆ ಮುಂದುವರಿದಿದೆ. ಕುಟುಂಬ ಸದಸ್ಯರ ನಡುವೆ ಜಗಳವೇ ಅಪರಾಧಕ್ಕೆ ಮುಖ್ಯ ಕಾರಣ ಎಂದು ಆರಂಭಿಕ ತನಿಖೆಯಲ್ಲಿ ತಿಳಿದುಬಂದಿದೆ. ಆರೋಪಿ ನಿರುದ್ಯೋಗಿಯಾಗಿದ್ದ ಕಾರಣಕ್ಕೆ ಜಗಳ ನಡೆಯುತ್ತಿತ್ತು ಎಂದೂ ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ. 

ಕಾಲ್‌ ಸೆಂಟರ್‌ ಉದ್ಯೋಗಿ ಶ್ರದ್ಧಾ ವಾಕರ್‌ ಹತ್ಯೆ ಪ್ರಕರಣ ಸಹ ದೆಹಲಿಯಲ್ಲಿ ನಡೆದಿತ್ತು. ಮೆಹ್ರೌಲಿ ಪ್ರದೇಶದ ಅಫ್ತಾಬ್‌ ಹಾಗೂ ಶ್ರದ್ಧಾ ವಾಸಿಸುತ್ತಿದ್ದ ಅಪಾರ್ಟ್‌ಮೆಂಟ್‌ನಲ್ಲಿ ಈ ಹತ್ಯೆ ನಡೆದಿತ್ತು. ಮೇ ತಿಂಗಳಲ್ಲೇ ಬರ್ಬರ ಹತ್ಯೆ ನಡೆದಿದ್ದರೂ 6 ತಿಂಗಳ ಬಳಿಕ  ಅಂದರೆ ನವೆಂಬರ್‌ನಲ್ಲಿ ಬೆಳಕಿಗೆ ಬಂದಿದೆ. ಸದ್ಯ, ಆರೋಪಿಯ ಪಾಲಿಗ್ರಾಫ್‌ ಪರೀಕ್ಷೆ ನಡೆಸಲಾಗಿದೆ. 

ಇದನ್ನೂ ಓದಿ: ಗೋಣಿ ಚೀಲದಲ್ಲಿ ಪತ್ನಿ ಮೃತದೇಹ: ಕೊಲೆ ಮಾಡಿ ಪತಿ ಪರಾರಿ!

Follow Us:
Download App:
  • android
  • ios