Asianet Suvarna News Asianet Suvarna News

ಲಕ್ನೋದ 'ಬುದ್ಧಿವಂತ'ನನ್ನು ಹಿಡಿಯಲು ಪೊಲೀಸರು ಮಾಡಿದ್ರು ಸೂಪರ್‌ ಐಡಿಯಾ!

ಕಳ್ಳರನ್ನು ಹುಡುಕಲು ಪೊಲೀಸರು ಕಳ್ಳರಂತೆ ಕೆಲಸ ಮಾಡಿದ ಉದಾಹರಣೆ ಇದು. ವಿಧವೆ ಹಾಗೂ ವಿಚ್ಛೇದನಕ್ಕೆ ಒಳಗಾದ ಮಹಿಳೆಯರಿಗೆ ಮೋಸ ಮಾಡಿದ ಆರೋಪದಲ್ಲಿ ಲಕ್ನೋ ಪೊಲೀಸ್‌ ಆರೋಪಿಯೊಬ್ಬನನ್ನು ಬಂದಿಸಿದ್ದಾರೆ. ತಾನೊಬ್ಬ ಸಿವಿಲ್‌ ನ್ಯಾಯಾಧೀಶ ಎಂದು ಹೇಳಿಕೊಂಡು ಒಂಟಿ ಮಹಿಳೆಯರಿಗೆ ಆಮಿಷವೊಡ್ಡುತ್ತಿದ್ದ. ಮದುವೆಯಾಗುವ ನೆಪದಲ್ಲಿ ಮಹಿಳೆಯರನ್ನು ದೈಹಿಕವಾಗಿಯೂ ಬಳಸಿಕೊಂಡಿದ್ದ.
 

in Lucknow To catch the judge the police took out a fake advertisement of marriage san
Author
First Published Oct 7, 2022, 11:17 AM IST

ಲಕ್ನೋ (ಅ.7): ವಿಧವೆ ಹಾಗೂ ವಿಚ್ಛೇದನಕ್ಕೆ ಒಳಪಟ್ಟ ಮಹಿಳೆಯರಿಗೆ ವಂಚಿಸಿದ ಆರೋಪದಲ್ಲಿ ಲಕ್ನೋ ಪೊಲೀಸ್‌ ಗುರುವಾರ 'ಬುದ್ಧಿವಂತ'ನನ್ನು ಬಂಧಿಸಿದ್ದಾರೆ. ತಾನೊಬ್ಬ ಸಿವಿಲ್‌ ನ್ಯಾಯಾಧೀಶ ಎಂದು ಹೇಳಿಕೊಳ್ಳುತ್ತಿದ್ದ ಆರೋಪಿ, ಮಹಿಳೆಯರನ್ನು ತನ್ನ ವಂಚನೆಯ ಜಾಲಕ್ಕೆ ಸಿಲುಕಿಸುತ್ತಿದ್ದ. ಒಂಟಿ ಮಹಿಳೆಯರಿಗೆ ಮದುವೆಯ ಆಸೆ ತೋರಿಸಿ, ಅವರಲ್ಲಿದ್ದ ಹಣ ಹಾಗೂ ಚಿನ್ನಾಭರಣವನ್ನು ದೋಚಿಕೊಂಡು ನಾಪತ್ತೆಯಾಗುತ್ತಿದ್ದ. ಇಲ್ಲಿಯವರೆಗೂ ಇದೇ ರೀತಿಯಲ್ಲಿ ಸಾಕಷ್ಟು ಮಹಿಳೆಯರಿಗೆ ಈತ ವಂಚನೆ ಮಾಡಿದ್ದ ಎನ್ನಲಾಗಿದೆ. ಆದರೆ, ಮಹಿಳೆಯೊಬ್ಬಳ ದೂರಿನ ಆಧಾರದಲ್ಲಿ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು, ಪತ್ರಿಕೆಯಲ್ಲಿ 2ನೇ ಮದುವೆಯ ಆಸೆ ಹೊತ್ತ ಮಹಿಳೆಯ ನಕಲಿ ಜಾಹೀರಾತನ್ನು ನೀಡುವ ಮೂಲಕ, ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯ ತೀವ್ರ ವಿಚಾರಣೆ ಮಾಡಿದ ಬಳಿಕ, ಕೆಲವು ಮಹಿಳೆಯರನ್ನು ಈತ ದೈಹಿಕವಾಗಿಯೂ ಬಳಸಿಕೊಂಡಿದ್ದ ಎನ್ನುವ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ವಿಧೆವೆಯಾಗಿರುವ ಅಥವಾ ವಿಚ್ಛೇದನಕ್ಕೆ ಒಳಪಟ್ಟ ಮಹಿಳೆಯರು 2ನೇ ಮದುವೆಯ ಕುರಿತಾಗಿ ಪತ್ರಿಕೆಯನ್ನು ನೀಡುವ ಜಾಹೀರಾತುಗಳನ್ನು ಓದುತ್ತಿದ್ದ ಆರೋಪಿ, ತಾನೊಬ್ಬ ಸಿವಿಲ್‌ ನ್ಯಾಯಾಧೀಶ ಎಂದು ಹೇಳಿಕೊಂಡು ಅಲ್ಲಿದ್ದ ಮೊಬೈಲ್‌ ನಂಬರ್‌ಗೆ ಕರೆ ಮಾಡುತ್ತಿದ್ದ. ಆರೋಪಿಯಾಗಿರುವ ವಿಷ್ಣು ಶಂಕರ್‌ ಗುಪ್ತಾ ಕೆಲವೊಮ್ಮೆ ಸರ್ಕಾರಿ ಉದ್ಯೋಗಿಯಾಗಿರುವ ಮಹಿಳೆಯರು ಹಾಗೂ ವಿಚ್ಛೇದಿನ ಮಹಿಳೆಯರನ್ನು ಗುರಿಯನ್ನಾಗಿ ಮಾಡಿಕೊಂಡು ಅವರಲ್ಲಿದ್ದ ಹಣವನ್ನು ದೋಚುತ್ತಿದ್ದ. 

ಗಂಡನಿಂದ ಬೇರ್ಪಟ್ಟ ಅಥವಾ ಗಂಡ ಇಲ್ಲದ ಮಹಿಳೆಯರು 2ನೇ ಮದುವೆಯಾಗುವ ಆಸೆಯಲ್ಲಿ ಪತ್ರಿಕೆಯಲ್ಲಿ (fake advertisement) ಜಾಹೀರಾತು ನೀಡುತ್ತಿದ್ದರು. ಕೇವಲ ಅಂಥ ಮಹಿಳೆಯರನ್ನು ಮಾತ್ರವೇ ಈತ ಗುರಿ ಮಾಡಿಕೊಳ್ಳುತ್ತಿದ್ದ. ಜಾಹೀರಾತನ್ನು ನೋಡಿ ಅಲ್ಲಿರುವ ಮೊಬೈಲ್‌ ನಂಬರ್‌ಗೆ ಕರೆ ಮಾಡುತ್ತಿದ್ದ ಆರೋಪಿ, ಸಿವಿಲ್‌ ನ್ಯಾಯಾಧೀಶ (Civil Judge  ) ಎಂದು ಹೇಳಿಕೊಂಡು ಅವರ ಜೊತೆ ಮಾತನಾಡಲು ಆರಂಭಿಸುತ್ತಿದ್ದ. ಆಕೆಯನ್ನು ಮದುವೆಯಾಗುವ ಬಗ್ಗೆ ಮಾತನಾಡುತ್ತಿದ್ದ ಆತ ಆಕೆಗೆ ದೈಹಿಕವಾಗಿಯೂ ಕೆಲವೊಮ್ಮೆ ಹಿಂಸೆ ನೀಡುತ್ತಿದ್ದ. ಕೆಲ ದಿನಗಳ ನಂತರ ಅವರಿಂದ ಲಕ್ಷಗಟ್ಟಲೆ ರೂಪಾಯಿ ಹಾಗೂ ಆಭರಣಗಳೊಂದಿಗೆ ನಾಪತ್ತೆಯಾಗುತ್ತಿದ್ದ.

ಪ್ರತಿ ಘಟನೆಯ ಬಳಿಕವೂ ಆರೋಪಿ (Vishnu Shankar Gupta) ತಕ್ಷಣವೇ ತನ್ನ ಮೊಬೈಲ್‌ನಲ್ಲಿದ್ದ ಸಿಮ್‌ ತೆಗೆದು ಅಜ್ಞಾತ ಸ್ಥಳದಲ್ಲಿ ಎಸೆಯುತ್ತಿದ್ದ. ಆ ಬಳಿಕ ಇದೇ ರೀತಿಯ ಇನ್ನೊಂದು ಮಹಿಳೆಯರನ್ನು ಹುಡುಕಲು ಆರಂಭಿಸುತ್ತಿದ್ದ. ಕೆಲವು ಮಹಿಳೆಯರು ಈ ಕುರಿತಾಗಿ ದೂರು ನೀಡಿದ್ದರೂ, ಪೊಲೀಸರಿಗೆ (lucknow) ಮಾತ್ರ ಈ ಆರೋಪಿಯನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಇದಕ್ಕಾಗಿ ಪೊಲೀಸರು ಕಳ್ಳನನ್ನು ಹುಡುಕಲು ಕಳ್ಳನ ರೀತಿಯಲ್ಲಿಯೇ ಯೋಚನೆ ಮಾಡಲು ಆರಂಭಿಸಿದ್ದಾರೆ. ಅದಕ್ಕಾಗಿ ಅವರು ಪತ್ರಿಕೆಗೆ 2ನೇ ಮದುವೆಯಾಗುವ ಆಸೆ ಹೊತ್ತ ಮಹಿಳೆಯ ನಕಲಿ ಜಾಹೀರಾತನ್ನು ನೀಡಿದ್ದರು. ವಿಷ್ಣು ಶಂಕರ್‌ ಇದೊಂದು ತಪ್ಪು ಮಾಡಲು ಎಂದು ಕಾಯುತ್ತಿದ್ದ ಪೊಲೀಸರಿಗೆ, ಯಶಸ್ಸು ಸಿಕ್ಕಿತ್ತು. ಜಾಹೀರಾತನ್ನು ಓದಿದ್ದ ವಿಷ್ಣು ಶಂಕರ್‌, ಆ ನಂಬರ್‌ಗೆ ಕರೆ ಮಾಡಿದ್ದ. ಆ ಬಳಿಕ ಬಹಳ ಎಚ್ಚರಿಕೆಯಲ್ಲಿ ಕಾರ್ಯನಿರ್ವಹಿಸಿದ ಪೊಲೀಸರು ಒಂಚೂರು ಅನುಮಾನ ಬರದಂತೆ ಆರೋಪಿಯನ್ನು ಹುಡುಕಿ ಬಂಧಿಸಲು ಯಶಸ್ವಿಯಾಗಿದ್ದಾರೆ. 

BENGALURU: ಪ್ಯಾನ್‌ಕಾರ್ಡ್‌ ಅಪ್‌ಡೇಟ್‌ ಹೆಸರಲ್ಲಿ 4 ಲಕ್ಷ ಎಗರಿಸಿದ ವಂಚಕ

ಈ ಕುರಿತಾಗಿ ಮಾತನಾಡಿರುವ ಡಿಸಿಪಿ ಅಪರ್ಣಾ ರಜತ್‌ ಕೌಶಿಕ್‌, ವಿಷ್ಣು ಶಂಕರ್‌ ಗುಪ್ತಾ ಕಾನ್ಪುರ ನಿವಾಸಿ. ಕಾನೂನು ವ್ಯಾಸಂಗ ಮಾಡಿದ್ದಾರೆ. ವಕೀಲಿಕೆಯನ್ನು ಮಾಡದೇ ಇದ್ದರೂ, ನ್ಯಾಯಾಧೀಶ ಎಂದು ಹೇಳಿಕೊಳ್ಳುತ್ತಿದ್ದ. ನಕಲಿ ನ್ಯಾಯಾಧೀಶಕಾಗಿ ಒಂಟಿ ಮಹಿಳೆಯರನ್ನು ದರೋಡೆ ಮಾಡುವ ವಿಧಾನವನ್ನು ಕಂಡುಕೊಂಡಿದ್ದಾರೆ. ಇದುವರೆಗೂ ಸಾಕಷ್ಟು ಮಹಿಳೆಯರಿಗೆ ಇದೇ ರೀತಿಯಲ್ಲಿ ವಿಷ್ಣು ಶಂಕರ್‌ ಮೋಸ ಮಾಡಿದ್ದು, ಸದ್ಯ ಆರೋಪಿಯಿಂದ 4 ಲಕ್ಷ ರೂಪಾಯಿ ಹಾಗೂ ಅಪಾರ ಪ್ರಮಾಣದ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Belagavi: ಡಬಲ್ ಮರ್ಡರ್‌ಗೆ ಬೆಚ್ಚಿಬಿದ್ದ ಸುಳೇಭಾವಿ: ಪೊಲೀಸ್ ಬಿಗಿ ಬಂದೋಬಸ್ತ್!

ವಿಷ್ಣು ವಿರುದ್ಧ ಸಾಕಷ್ಟು ಕೇಸ್: ವಿಷ್ಣು ಶಂಕರ್‌ ಗುಪ್ತಾ ವಿರುದ್ಧ ಈಗಾಗಲೇ 5 ಕೇಸ್‌ಗಳನ್ನು ದಾಖಲಿಸಲಾಗಿದೆ. ಈತನ ವಿರುದ್ಧ ಅಪಹರಣ ಮಾಡಿ ವಂಚನೆ ಮತ್ತು ನಕಲಿ ದಾಖಲೆಗಳನ್ನು ನ್ಯಾಯಾಲಯದ ಆರೋಪಗಳಿವೆ. ಈತನಿಂದ ಹಲವು ಬಗೆಯ ಸೀಲುಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿ ಒಂದು ಸರ್ಕಾರಿ ಮುದ್ರೆಯೂ ಆಗಿದೆ.

Follow Us:
Download App:
  • android
  • ios