ಅಪ್ರಾಪ್ತ ಬಾಲಕನೊಂದಿಗೆ ಪರಾರಿಯಾದ ಎದುರು ಮನೆಯ ಆಂಟಿ!
ಗುಡಿವಾಡದ ಗುಡಿಮನೆಪೇಟೆಯಲ್ಲಿ ಸೋಮವಾರ 14 ವರ್ಷದ ಬಾಲಕನ ಅಪಹರಣ ಪ್ರಕರಣ ಸಂಚಲನ ಮೂಡಿಸಿದೆ. ಎದುರು ಮನೆಯ 35 ವರ್ಷದ ಮಹಿಳೆ ಹುಡುಗನ ಜೊತೆ ಪರಾರಿಯಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಹೈದರಾಬಾದ್ (ಜುಲೈ 26): ಆಂಧ್ರಪ್ರದೇಶದ ಗುಡುವಾಡ ಪಟ್ಟಣದ ಗುಡ್‌ಮೆನ್ ಪೇಟಾ ಎನ್ನುವ ಕಾಲೋನಿಯಲ್ಲಿ ಅಪಹರಣ ಪ್ರಕರಣವೊಂದು ವರದಿಯಾಗಿದೆ. 35 ವರ್ಷದ ಮಹಿಳೆ ಹಾಗೂ ಆಕೆಯ ಎದುರು ಮನೆಯ 15 ವರ್ಷ ವಯಸ್ಸಿನ ಅಪ್ರಾಪ್ತ ಬಾಲಕ ಇಬ್ಬರೂ ನಾಪತ್ತೆಯಾಗಿದ್ದಾರೆ. ಅಕ್ಕಪಕ್ಕದ ಊರುಗಳನೆಲ್ಲಾ ಹುಡುಕಾಟ ನಡೆಸಿದರೂ ಇವರಿಬ್ಬರೂ ಪತ್ತೆಯಾಗಿಲ್ಲ. ಮೊದಲಿಗೆ 15 ವರ್ಷದ ಹುಡುಗ ನಾಪತ್ತೆಯಾಗಿದ್ದಾನೆ. ಆ ಬಳಿಕ ಮಹಿಳೆ ಕೂಡ ನಾಪತ್ತೆಯಾಗಿದ್ದಾಳೆ. ಹಾಗಾಗಿ 35 ವರ್ಷದ ಮಹಿಳೆಯ ಮೇಲೆ ಅಪ್ರಾಪ್ತ ಬಾಲಕನ ಅಪಹರಣ ಪ್ರಕರಣ ದಾಖಲು ಮಾಡಲಾಗಿದೆ. 8ನೇ ತರಗತಿಯಲ್ಲಿ ಓದುತ್ತಿದ್ದ ಹುಡುಗ, ಮಹಿಳೆಯೊಂದಿಗೆ ಸಂಬಂದ ಹೊಂದಿದ್ದ ಎಂದು ಅಂದಾಜು ಮಾಡಲಾಗಿದ್ದು, ಅದೇ ಕಾರಣಕ್ಕೆ ಇಬ್ಬರೂ ನಾಪತ್ತೆಯಾಗಿರಬಹುದು ಎಂದು ಶಂಕಿಸಲಾಗದೆ. ಜುಲೈ 10 ರಂದು ಆರೋಪಿ ಮತ್ತು ಎರಡು ಮಕ್ಕಳ ತಾಯಿ ಸ್ವಪ್ನಾ ಮತ್ತು ಆಕೆಯ ಎದುರಿನ ಮನೆಯಲ್ಲಿ ವಾಸಿಸುವ ಹುಡುಗ ನಾಪತ್ತೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು. ಆರಂಭದಲ್ಲಿ, ಹುಡುಗನ ಮನೆಯವರು ಅವನು ಸ್ನೇಹಿತನ ಮನೆಗೆ ಹೋಗಿರಬಹುದು ಎಂದು ಭಾವಿಸಿದ್ದರು. ಸ್ವಪ್ನಾ ಅವರ ಪತಿಯೂ ಆಕೆ ಕಾಣೆಯಾಗಿದ್ದಾಳೆ ಎಂದು ಹೇಳಿದ್ದರಿಂದ ಬಾಲಕನ ಮನೆಯವರು ಅನುಮಾನಗೊಂಡು ನಾಪತ್ತೆ ದೂರು ದಾಖಲಿಸಿದ್ದರು.
ಚರ್ಚೆಗೆ ಕಾರಣವಾದ ಪ್ರಕರಣ: "ನಾವು ಅವರ ಸ್ಥಳವನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ ಮತ್ತು ಹುಡುಗ ಮತ್ತು ಮಹಿಳೆಯನ್ನು ಹುಡುಕಲು ವಿಶೇಷ ತಂಡಗಳನ್ನು ರಚಿಸಿದ್ದೇವೆ" ಎಂದು ಪೊಲೀಸರು ಹೇಳಿದ್ದಾರೆ. ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ಅಪಹರಣ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಹಣಕ್ಕಾಗಿ ಬಾಲಕನನ್ನು ಅಪಹರಿಸಲಾಗಿದೆಯೇ ಅಥವಾ ಬೇರೆ ಕಾರಣಕ್ಕಾಗಿ ಅಪಹರಣ ಮಾಡಲಾಗಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪತಿ ಮತ್ತು ಎರಡು ಮಕ್ಕಳಿರುವ ವಿವಾಹಿತ ಮಹಿಳೆ ಬಾಲಕನನ್ನು ಅಪಹರಿಸಿದ ಘಟನೆ ಸಾಕಷ್ಟು ಚರ್ಚೆಗ ಕಾರಣವಾಗಿದೆ.
ಮದುವೆ ನೆಪದಲ್ಲಿ ಕಿಡ್ನಾಪ್ ಆಗಿರಬಹುದು: ಪೊಲೀಸರು ಹಲವು ಕೋನಗಳಲ್ಲಿ ತನಿಖೆ ನಡೆಸುತ್ತಿದ್ದು, ಪ್ರಕರಣದ ನಿಗೂಢತೆಯನ್ನು ಭೇದಿಸಲು ಯತ್ನಿಸುತ್ತಿದ್ದಾರೆ. ಮದುವೆ ನೆಪದಲ್ಲಿ ಬಾಲಕನನ್ನು ಕರೆದುಕೊಂಡು ಹೋಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಟು ಟೌನ್ ಸಿಐ ದುರ್ಗರಾವ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮೇಲಾಗಿ ಬಾಲಕನ ಬಗ್ಗೆ ಮಾಹಿತಿ ನೀಡಿದವರಿಗೆ ಸೂಕ್ತ ಬಹುಮಾನ ನೀಡುವುದಾಗಿ ಬಾಲಕನ ಪೋಷಕರು ತಿಳಿಸಿದ್ದಾರೆ.
ಪಕ್ಕದೂರಿನವನ ಜತೆ ಹೆಂಡತಿ ಚಕ್ಕಂದ; ಬೇಸತ್ತು ಗಂಡ ನೇಣಿಗೆ ಶರಣು
ಇಬ್ಬರ ನಡುವೆ ಅಫೇರ್ ಸಾಧ್ಯತೆ ಹೆಚ್ಚು: 15 ವರ್ಷದ ಬಾಲಕನನ್ನು ಸ್ವಪ್ನಾ ಚಾನು ಹೆಸರಿನ ಮಹಿಳೆ ಪ್ರೀತಿ ಮಾಡುತ್ತಿದ್ದಳು. ಜುಲೈ 19 ರಂದು ಇಬ್ಬರೂ ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಆರಂಭದಲ್ಲಿ ಬಹುಶಃ ಮಹಿಳೆ ಮನೆಯನ್ನು ತೊರೆದಿರಬಹುದು ಎಂದು ಅಂದಾಜು ಮಾಡಿದ್ದರು. ಆದರೆ, ಬಾಲಕ ಕೂಡ ಕಾಣದೇ ಇದ್ದಾಗ ಆತಂಕ ವ್ಯಕ್ತಪಡಿಸಿದ್ದರು. ಆರೆ, ಇವರಿಬ್ಬರ ನಡುವೆ ಇರುವ ಸಂಬಂಧ ಎಂಥದ್ದು ಎನ್ನುವುದು ಇನ್ನೂ ನಿಖರವಾಗಿ ತಿಳಿದಿಲ್ಲ. ಹಣಕ್ಕಾಗಿ ಈ ರೀತಿ ಮಾಡಿದ್ದಾಳೆಯೇ, ಅಥವಾ ಹುಡುಗನ ಮೇಲಿನ ಆಸೆಗಾಗಿ ಮಾಡಿದ್ದಾಳೆಯೇ ಎನ್ನುವುದು ತಿಳಿದಿಲ್ಲ.
Mangaluru: ಕುಡಿದು ಮೋಜು-ಮಸ್ತಿ: ಭಜರಂಗದಳದಿಂದ ವಿದ್ಯಾರ್ಥಿಗಳ ಪಬ್ ಪಾರ್ಟಿಗೆ ಅಡ್ಡಿ
ಪೊಲೀಸರು ಹೇಳುವ ಪ್ರಕಾರ, ಹಾಗೇನಾದರೂ ಹಣಕ್ಕಾಗಿ ಆಕೆ ಈ ಕೆಲಸ ಮಾಡಿದ್ದರೆ ಈಷ್ಟರಲ್ಲಿಯಾಗಲೇ ಕುಟುಂಬದವರಿಗೆ ಫೋನ್ ಕಾಲ್ ಬಂದಿರಬೇಕಿತ್ತು. ಆದರೆ, ಈವರೆಗೂ ಹಣಕ್ಕೆ ಬೇಡಿಕೆ ಇಟ್ಟಿರುವಂಥ ಯಾವುದೇ ಕರೆ ಬಂದಿಲ್ಲ. ಹಾಗಾಗಿ ಹಣಕ್ಕಾಗಿ ಅಪಹರಣವಾಗಿರುವ ಸಾಧ್ಯತೆಯನ್ನು ಪೊಲೀಸರು ಬಹುತೇಕ ತಳ್ಳಿ ಹಾಕಿದ್ದಾರೆ. ಅಫೇರ್ ಇದ್ದ ಕಾರಣಕ್ಕೆ ಹೀಗೆ ಮಾಡಿರಬಹುದು ಎನ್ನುವ ಸಾಧ್ಯತೆಯನ್ನು ಪೊಲೀಸರು ನಂಬಿದ್ದು, ಈ ಪ್ರಕರಣ ಭೇದಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹಿಂದೆ ಕೂಡ ತನಗಿಂತ ಕಿರಿಯ ವಯಸ್ಸಿನವರೊಂದಿಗೆ ಮಹಿಳೆ ಪರಾರಿಯಾದ ಪ್ರಕರಣಗಳಿದ್ದರೂ, ಈ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂಥ ಘಟನೆಯಾಗಿರುವುದು ಇದೇ ಮೊದಲು ಎನ್ನಲಾಗಿದೆ.