ಬೆಂಗಳೂರು, [ಡಿ.21]: ಬೆಂಗಳೂರಿನ ಬಾಗಲಗುಂಟೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿ.19ರಂದು ಕರ್ತವ್ಯ ನಿರತ ಮಹಿಳಾ ಕಂಡಕ್ಟರ್​ ಮೇಲೆ ನಡೆದಿದ್ದ ಆ್ಯಸಿಡ್​ ದಾಳಿಗೆ ಅಸಲಿ ಕಾರಣ ಬಯಲಾಗಿದೆ. 

ಮಹಿಳಾ ಕಂಡಕ್ಟರ್ ಮೇಲೆ ಆ್ಯಸಿಡ್​ ದಾಳಿಯ ಹಿಂದೆ ಮೈದುನ-ಅತ್ತಿಗೆಯ ಲವ್​ ಕಹಾನಿ ಇದೆ ಎನ್ನುವುದು ಮೇಲ್ನೋಟಕ್ಕೆ ತಿಳಿದುಬಂದಿದೆ.

ರಾಜ್ಯದಲ್ಲಿ ಮತ್ತೆ ಆ್ಯಸಿಡ್‌ ದಾಳಿ : ಬೆಳ್ಳಂಬೆಳಗ್ಗೆ ಬೆಂಗಳೂರಲ್ಲಿ ಪೈಶಾಚಿಕ ಕೃತ್ಯ

ಡಿ.16ರಂದು ಬಾಗಲಗುಂಟೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಕರ್ತವ್ಯ ನಿರತ ಕಂಡಕ್ಟರ್​ ಇಂದಿರಾ ಬಾಯಿ ಎನ್ನುವವರ ಮೇಲೆ ಸ್ಕೂಟರ್​ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಆ್ಯಸಿಡ್​ ದಾಳಿ ನಡೆಸಿದ್ದರು.  ಪರಿಣಾಮ ಮುಖ, ಕೈ ಸೇರಿದಂತೆ ಇನ್ನಿತರ ಭಾಗಗಳಲ್ಲಿ ಗಾಯಗಳಾಗಿದ್ದು, ಸದ್ಯಕ್ಕೆ ಇಂದಿರಾ ಬಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆ್ಯಸಿಡ್​ ದಾಳಿ ಹಿಂದೆ ಲವ್ ಕಹಾನಿ
ಹೌದು...ಕಂಡಕ್ಟರ್ ಮೇಲಿನ ಆ್ಯಸಿಡ್​ ದಾಳಿ ಹಿಂದೆ ಪ್ರೇಮ್ ಕಹಾನಿ ಇದೆ. ಈ ಪ್ರಕರಣದ ಕಾರಣ ಏನು ಎಂದು ತನಿಖೆ ಶುರು ಮಾಡಿದ ಪೊಲೀಸರಿಗೆ ಇದು ಮೈದುನನೇ ನಡೆಸಿದ ಕೃತ್ಯ ಎಂಬ ಸಂಗತಿ ಬಯಲಾಗಿದೆ.

ಪೀಣ್ಯಾದ 9ನೇ ಡಿಪೋದ ಬಿಎಂಟಿಸಿ ಬಸ್ ಕಂಡಕ್ಟರ್ ಆಗಿ ಇಂದಿರಾಬಾಯಿ ಕರ್ತವ್ಯ ನಿರ್ವಹಿಸುತ್ತಿದ್ದರು, ಇವರ ಜತೆ ಅದೇ ಡಿಪೋದಲ್ಲಿ ಇಂದಿರಾಬಾಯಿ ಮೈದುನ ಅರುಣ್​ [ಇಂದಿರಾಬಾಯಿ ತಂಗಿ ಗಂಡ] ಕೂಡ ಡ್ರೈವರ್ ಆಗಿದ್ದ. 

ಕೆಲವೊಮ್ಮೆ ಒಂದೇ ಬಸ್​ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇವರಿಬ್ಬರ ನಡುವೆ ಅಕ್ರಮ ಸಂಬಂಧ ಕೂಡ ಇತ್ತು. ಆದರೆ, ಇತ್ತೀಚೆಗೆ ಇಂದಿರಾ ಬಾಯಿ ಆರೋಪಿ ಮೈದುನ ಅರುಣ್​ನನ್ನು ಬಿಟ್ಟು ಬೇರೊಬ್ಬನ ಜತೆ ಅಕ್ರಮ ಸಂಬಂಧ ಬೆಳಸಿದ್ದಳು. ಇದೇ ಕೋಪಕ್ಕೆ ಅರುಣ್​ ಇಂದಿರಾಬಾಯಿ ಮೇಲೆ ಆ್ಯಸಿಡ್​ ದಾಳಿ ಮಾಡಿದ್ದಾನೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.