Karwar: ಲಾರಿಯಲ್ಲಿ ಅಕ್ರಮ ಸ್ಪಿರಿಟ್ ಸಾಗಾಟ: ಲಕ್ಷಾಂತರ ರೂ. ಮೌಲ್ಯದ ಸ್ವತ್ತು ವಶ
* ಕಾರವಾರದ ಮಾಜಾಳಿ ಚೆಕ್ ಪೋಸ್ಟ್ ಬಳಿ ನಡೆದ ಘಟನೆ
* ಗೋವಾದಿಂದ ಕೇರಳಕ್ಕೆ ವಾಷಿಂಗ್ ಮಷಿನ್ ಸಾಗಿಸುತ್ತಿದ್ದ ಲಾರಿ
* ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ಅಧಿಕಾರಿಗಳ ದಾಳಿ
ಕಾರವಾರ(ಮಾ.17): ವಾಷಿಂಗ್ ಮಷಿನ್ ತುಂಬಿದ ಲಾರಿಯಲ್ಲಿ(Truck) ಅಕ್ರಮವಾಗಿ ಸ್ಪಿರಿಟ್(Spirit) ಸಾಗಿಸುತ್ತಿದ್ದ ವೇಳೆ ದಾಳಿ ಮಾಡಿದ ಅಬಕಾರಿ ಇಲಾಖೆ ಅಧಿಕಾರಿಗಳು ಲಕ್ಷಾಂತರ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ಕಾರವಾರದ(Karwar) ಮಾಜಾಳಿ ಚೆಕ್ ಪೋಸ್ಟ್ ಬಳಿ ಇಂದು(ಗುರುವಾರ) ನಡೆದಿದೆ.
ಗೋವಾದಿಂದ(Goa) ಕೇರಳಕ್ಕೆ(Kerala) ವಾಷಿಂಗ್ ಮಷಿನ್ ಸಾಗಿಸುವ ಲಾರಿಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಸ್ಪಿರಿಟ್ ಸಾಗಿಸುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅಬಕಾರಿ ಡಿಸಿ ವನಜಾಕ್ಷಿ ಅವರ ಮಾರ್ಗದರ್ಶನದಲ್ಲಿ ದಾಳಿ(Raid) ನಡೆಸಲಾಗಿದೆ. ಈ ಸಂದರ್ಭದಲ್ಲಿ ಸಿಬ್ಬಂದಿ, ಲಾರಿ ಹಾಗೂ ಸ್ಪಿರಿಟ್ ವಶಕ್ಕೆ ಪಡೆದಿದ್ದು, ಲಾರಿ ಚಾಲಕ ಪರಾರಿಯಾಗಿದ್ದಾನೆ.
Mangaluru: ಕಾರಿಂಜೇಶ್ವರ ಸುತ್ತ ಅಕ್ರಮ ಕಪ್ಪು ಕಲ್ಲು ಗಣಿಗಾರಿಕೆಗೆ ಜಿಲ್ಲಾಡಳಿತದಿಂದ ಬ್ರೇಕ್
ದಾಳಿಯ ವೇಳೆ 2625 ಲೀಟರ್ ಸ್ಪಿರಿಟ್ ವಶಕ್ಕೆ ಪಡೆಯಲಾಗಿದ್ದು, ಇದರ ಮೌಲ್ಯ 1.80 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಸ್ಪೀರಿಟ್, ವಾಷಿಂಗ್ ಮಷಿನ್, ಲಾರಿ ಎಲ್ಲಾ ಸೇರಿ ಒಟ್ಟು 19 ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಗೋವಾದಿಂದ ವಾಷಿಂಗ್ ಮಷಿನ್ ಸಾಗಿಸುವ ಲಾರಿಯಲ್ಲಿ ಕೇರಳಕ್ಕೆ ಸ್ಪಿರಿಟ್ ತುಂಬಿಕೊಂಡು ಸಾಗಿಸಲಾಗುತ್ತಿತ್ತು ಎಂಬ ಮಾಹಿತಿ ಮೇಲೆ ದಾಳಿ ಮಾಡಲಾಗಿದೆ. ಈ ವೇಳೆ ಲಾರಿಯಲ್ಲಿ ಸುಮಾರು ಹತ್ತು ವಾಷಿಂಗ್ ಮಷಿನ್‌ಗಳಿದ್ದು, ಇದರ ಮಧ್ಯದಲ್ಲಿ ಸ್ಪಿರಿಟ್ ತುಂಬಿದ ಕ್ಯಾನ್ ಇಡಲಾಗಿತ್ತು. ಲಾರಿ ಮಾಜಾಳಿಯ ಚೆಕ್ ಪೋಸ್ಟ್ ಬಳಿ ಬರುತ್ತಿದ್ದಂತೆ ತಪಾಸಣೆ ನಡೆಸಿದ ಅಬಕಾರಿ ಸಿಬ್ಬಂದಿ ಲಾರಿಯಲ್ಲಿ ಸ್ಪಿರಿಟ್ ಇರುವುದನ್ನ ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ.
ಅಕ್ರಮ ಮರಳು ದಂಧೆಯ ಮೇಲೆ ದಾಳಿ: 8 ಕಬ್ಬಿಣದ ತೆಪ್ಪಗಳ ವಶ
ಹೂವಿನಹಡಗಲಿ: ತಾಲೂಕಿನ ಬ್ಯಾಲಹುಣ್ಸಿ ಗ್ರಾಮದ ತುಂಗಭದ್ರಾ ನದಿ(Tungabhadra River) ತೀರದಲ್ಲಿ ಕಬ್ಬಿಣದ ತೆಪ್ಪಗಳ ಮೂಲಕ, ಅಕ್ರಮವಾಗಿ ಮರಳು(Sand) ಸಾಗಣೆ ಮಾಡುತ್ತಿದ್ದವರ ಮೇಲೆ ಪೊಲೀಸರು(Police) ದಾಳಿ ಮಾಡಿದ ಘಟನೆ ಮಾ.10 ರಂದು ನಡೆದಿತ್ತು.
ಬೇಸಿಗೆ ಬಂದ ಕಾರಣ ನದಿಯಲ್ಲಿನ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದ ಗದಗ(Gadag) ಜಿಲ್ಲೆಯ ಅಕ್ರಮ ಮರಳು ದಂಧೆಕೋರರು, ಕಬ್ಬಿಣದ ತೆಪ್ಪಗಳನ್ನು ಬಳಸಿಕೊಂಡು ಮರಳು ಸಾಗಣೆ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಆಧಾರದ ಮೇಲೆ ಹರಪನಹಳ್ಳಿ ಡಿವೈಎಸ್ಪಿ ಹಾಲಮೂರ್ತಿ ರಾವ್ ಹಾಗೂ ಹೂವಿನಹಡಗಲಿ(Huvinahadagali) ಸಿಪಿಐ ರಮೇಶ ಕುಲಕರ್ಣಿ ಇವರ ಮಾರ್ಗದರ್ಶನದಲ್ಲಿ ಹಿರೇಹಡಗಲಿ ಠಾಣೆಯ ಪಿಎಸ್‌ಐ ದಾದವಲಿ ಹಾಗೂ ಇವರ ಸಿಬ್ಬಂದಿ ದಾಳಿ(Raid) ಮಾಡಿದ್ದರು.
Tumakuru: ಹಾಡಹಗಲೇ ನಡೆಯುತ್ತೆ ಮಣ್ಣು ಮಾಫಿಯಾ: ಪ್ರಶ್ನಿಸಿದವರಿಗೆ ಜೀವಬೆದರಿಕೆ
ದಾಳಿ ವೇಳೆ ತಲಾ 10 ಸಾವಿರ ಮೌಲ್ಯದ 8 ಕಬ್ಬಿಣದ ತೆಪ್ಪಗಳನ್ನು ವಶಕ್ಕೆ ಪಡೆಯಲಾಗಿದೆ. ಕಬ್ಬಿಣದ ತೆಪ್ಪಗಳ ಮೂಲಕ ಮರಳು ಸಂಗ್ರಹಿಸುತ್ತಿದ್ದ ಕಾರ್ಮಿಕರ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಗದಗ ಜಿಲ್ಲೆಯ ಭಾಗದಲ್ಲಿ ನದಿ ತೀರದಲ್ಲಿ ಮರಳಿನ ಲಭ್ಯತೆ ಇಲ್ಲದ ಕಾರಣ ಹೂವಿನಹಡಗಲಿ ಗಡಿ ಭಾಗದಲ್ಲಿ ಅತಿ ಹೆಚ್ಚು ಮರಳು ಸಂಗ್ರಹವಾಗಿದ್ದು ಆ ಮರಳಿನ ಲೂಟಿಗೆ ಮುಂದಾಗಿದ್ದರು.
ನದಿಯಲ್ಲಿ ಗದಗ ಜಿಲ್ಲೆಯ ಜೀತು ಪಾಟೀಲ್ ಎಂಬುವರು ಮರಳನ್ನು ಕಬ್ಬಿಣದ ತೆಪ್ಪಗಳ ಮೂಲಕ ಸಾಗಾಣಿಕೆ ಮಾಡಲು ಕೆಲ ಕೂಲಿ ಕಾರ್ಮಿಕರನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆಂಬ ಮಾಹಿತಿ ಇದ್ದು, ಮರಳು ಅಕ್ರಮ ದಂಧೆಯ ಮೇಲೆ ದಾಳಿಗೆ ಪೊಲೀಸರು ಮುಂದಾಗುತ್ತಿದಂತೆಯೇ ಕಬ್ಬಿಣದ ತೆಪ್ಪದಲ್ಲಿದ್ದ ಆರೋಪಿಗಳು ತೆಪ್ಪಗಳನ್ನು ನೀರಿನಲ್ಲಿ ಬಿಟ್ಟು ನದಿಯಲ್ಲಿ ಈಜಿಕೊಂಡು ಪರಾರಿಯಾಗಿದ್ದಾರೆ. ಜೀತು ಪಾಟೀಲ್ ಎಂಬುವ ವ್ಯಕ್ತಿ ಮೇಲೆ ಹಿರೇಹಡಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.