Vijayanagara| ಎತ್ತಿನ ಬಂಡಿಯಲ್ಲಿ ಅಕ್ರಮ ಮರಳು ಸಾಗಾಟ..!

*   ಕಣ್ಮುಚ್ಚಿ ಕುಳಿತ ಅಧಿಕಾರಿಗಳು
*   ಹರವಿಯಲ್ಲಿ ಅಕ್ರಮ ಮರಳು ಸಾಗಾಟ ಅವ್ಯಾಹತ
*   ಎತ್ತಿನ ಬಂಡಿಗಳ ಮೂಲಕ ಮರಳು ಲೂಟಿ 

Illegal Sand Shipping on Bullock Cart at Huvina Hadagali in Vijayanagara grg

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ(ನ.14):  ತಾಲೂಕಿನಲ್ಲಿ 7 ಮರಳು ಸ್ಟಾಕ್‌ಯಾರ್ಡ್‌ಗಳಲ್ಲಿ ಬೇಡಿಕೆಗೆ ತಕ್ಕಷ್ಟು ಮರಳು(Sand) ಸಂಗ್ರಹ ಇಲ್ಲ. ಜತೆಗೆ ಕೆಲವು ಸ್ಟಾಕ್‌ಯಾರ್ಡ್‌ಗಳು(Stockyard) ನಿಯಮಗಳನ್ನು ಉಲ್ಲಂಘನೆ ಮಾಡಿರುವ ಹಿನ್ನೆಲೆ ಬಂದ್‌ ಆಗಿವೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಎತ್ತಿನ ಬಂಡಿಗಳ ಮೂಲಕ ತುಂಗಭದ್ರಾ ನದಿಯಲ್ಲಿ(Tungabhadra River) ಮರಳು ಲೂಟಿ ಮಾಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.

ತುಂಗಭದ್ರಾ ನದಿ ತೀರದ ವ್ಯಾಪ್ತಿಯಲ್ಲಿನ ಹಕ್ಕಂಡಿ, ಕಂದಗಲ್‌ಪುರ, ಬ್ಯಾಲಹುಣ್ಸಿ- 2, ಬನ್ನಿಮಟ್ಟಿ- 3 ಸೇರಿದಂತೆ ಒಟ್ಟು 7 ಮರಳು ಸ್ಟಾಕ್‌ಯಾರ್ಡ್‌ಗಳಲ್ಲಿ ಬೇಡಿಕೆಗೆ ತಕ್ಕಂತೆ ಗುಣಮಟ್ಟದ ಮರಳು ಲಭ್ಯತೆ ಇಲ್ಲ. ಜತೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ(Department of Mines and Geology) ಸರಿಯಾಗಿ ರಾಜಸ್ವಧನ ಸಂದಾಯ ಮಾಡದಿರುವ ಹಿನ್ನೆಲೆ ಕೆಲ ಸ್ಟಾಕ್‌ಯಾರ್ಡ್‌ಗಳಲ್ಲಿ ಮರಳು ಸಾಗಾಣಿಗೆ ಪಾಸ್‌(Pass) ನೀಡಿಲ್ಲ. ಈವರೆಗೂ ಮರಳು ಸಾಗಾಣೆಯನ್ನು ಬಂದ್‌ ಮಾಡಲಾಗಿದೆ.

ಗಣಿ ಸಚಿವರ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆಗೆ ಬೀಳುವುದೇ ಕಡಿವಾಣ..!

ಈ ವ್ಯವಸ್ಥೆಯ ಲಾಭ ಪಡೆಯುತ್ತಿರುವುದು ನದಿತೀರದ(Bank of River) ಹರವಿಯಲ್ಲಿ. ಇಲ್ಲಿ ಹಾಡಹಗಲೇ ಎತ್ತಿನಬಂಡಿಗಳ ಮೂಲಕ ಮರಳು ಲೂಟಿಯಾಗುತ್ತಿದೆ. ಕೆಲವು ರೈತರು(Farmers) ನದಿಯಲ್ಲಿ(River) ಮರಳನ್ನು ತೆಗೆದು ಎತ್ತಿನ ಬಂಡಿಗಳ ಮೂಲಕ ಅದನ್ನು ತಮ್ಮ ಕಣಗಳಲ್ಲಿ ಅಕ್ರಮವಾಗಿ(Illegal) ಸಂಗ್ರಹಿಸುತ್ತಾರೆ. ಅಲ್ಲದೇ ರಾತ್ರಿ ವೇಳೆ ಹಾವೇರಿ(Haveri) ಕಡೆಯಿಂದ ಗ್ರಾಮಕ್ಕೆ ಬರುವ ಮರಳು ದಂಧೆಕೋರರಿಗೆ(Sanda Mafia) ಮಾರಾಟ ಮಾಡುತ್ತಿದ್ದಾರೆ. ಗುಣಮಟ್ಟದ ಮರಳು ಸಂಗ್ರಹವಾಗಿರುವ ಹಿನ್ನೆಲೆ ಹೆಚ್ಚು ಬೆಲೆಗೆ ಮರಳು ಮಾರಾಟ ನಡೆಯುತ್ತಿದೆ.

ಪೊಲೀಸರು(Police) ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ಬಂದಾಗ, ನಾವು ಬಡವರು ಇತ್ತೀಚೆಗೆ ಸುರಿದ ಮಳೆಗೆ(Rain) ಮನೆ ಬಿದ್ದು ಹೋಗಿದೆ. ಆ ಮನೆ ಕಟ್ಟಲು ಮರಳು ತೆಗೆದುಕೊಂಡು ಹೋಗುತ್ತಿದ್ದೇವೆಂದು ಹೇಳುತ್ತಾರೆ. ರೈತರ ಕಣಗಳಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಯೊಂದನ್ನು ಅಧಿಕಾರಿಗಳಿಗೆ ತೋರಿಸಿ ಮರಳು ಸಂಗ್ರಹಿಸುತ್ತಾರೆ. ಆದರೆ ಹಾವೇರಿ ಜಿಲ್ಲೆಯ ಭಾಗಕ್ಕೆ ರಾತ್ರಿ ವೇಳೆ ಲಾರಿಯೊಂದಕ್ಕೆ 30 ಸಾವಿರದಂತೆ ಮಾರಾಟ ಮಾಡುತ್ತಿದ್ದಾರೆ.

ಹರವಿಯಲ್ಲಿ ನಿತ್ಯ ನದಿಯಲ್ಲಿ 15ಕ್ಕೂ ಹೆಚ್ಚು ರೈತರ ಎತ್ತಿನ ಬಂಡಿಗಳು ನೀರಿನಲ್ಲಿನ ಮರಳನ್ನು ಬಂಡಿಗಳಲ್ಲಿ ತುಂಬಿಕೊಂಡು ಸಾಗಾಣಿಕೆ ಮಾಡುತ್ತಿದ್ದಾರೆ. ಅಲ್ಲಿನ ಮರಳನ್ನು ರಕ್ಷಣೆ ಮಾಡಬೇಕೆಂಬ ಉದ್ದೇಶದಿಂದ ಪೊಲೀಸ್‌ ಇಲಾಖೆ ಸಶಸ್ತ್ರ ಮೀಸಲು ಪೊಲೀಸ್‌ ವಾಹನದ ಜತೆಗೆ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜನೆ ಮಾಡಿದ್ದರೂ ಮರಳು ಲೂಟಿ(Loot) ಮಾತ್ರ ನಿಂತಿಲ್ಲ.

ಮಂಗಳೂರು: ಡಿಸಿಪಿ ಕಾರಿನ ಮೇಲೆಯೇ ಲಾರಿ ಹತ್ತಿಸಲು ಮರಳು ಕಳ್ಳರ ಯತ್ನ..!

ಹರವಿ ಭಾಗದ ಗುಣಮಟ್ಟದ ಮರಳನ್ನು ಇಲ್ಲಿ ಎತ್ತಿನ ಬಂಡಿಗಳ ಮೂಲಕ ಲೂಟಿ ಮಾಡಿದರೆ, ಅತ್ತ ಹಾವೇರಿ ಜಿಲ್ಲೆಯ ಮರಳು ಅಕ್ರಮ ದಂಧೆಕೋರರು ಕಬ್ಬಿಣದ ತೆಪ್ಪ ಮೂಲಕ ಲೂಟಿಗೆ ನಿಂತಿದ್ದಾರೆ. ಹರವಿ ಭಾಗದಲ್ಲಿ ಮರಳು ಲೂಟಿಯನ್ನು ತಡೆಯಲು ಪೊಲೀಸ್‌ ಡಿಆರ್‌(Police DR) ವಾಹನ ಜತೆಗೆ ಸಿಬ್ಬಂದಿ ನಿಯೋಜನೆ ಮಾಡಿದ್ದರೂ ಲೂಟಿ ಮಾತ್ರ ನಿಂತಿಲ್ಲ. ಈ ಕುರಿತು ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಅಂತ ಹೆಸರು ಹೇಳಲು ಇಚ್ಛಿಸದ ವ್ಯಕ್ತಿ ತಿಳಿಸಿದ್ದಾರೆ. 

ಹರವಿ ಗ್ರಾಮದಲ್ಲಿ ಅಕ್ರಮವಾಗಿ ಮರಳು ಸಾಗಾಟ ಹಾಗೂ ಲೂಟಿ ಮಾಡುತ್ತಿದ್ದರೆ ಅಂಥವರ ಮೇಲೆ ಮುಲಾಜಿಲ್ಲದೇ ಸರ್ಕಾರದ(Government of Karnataka) ನಿರ್ದೆಶನದಂತೆ ಕ್ರಮ ಕೈಗೊಳ್ಳುತ್ತೇವೆ. ಹರವಿ ಗ್ರಾಮದ ನದಿ ತೀರದ ಹರವಿ ಸೇರಿದಂತೆ ಇತರೆ ಕಡೆಗಳಲ್ಲಿ ಭೇಟಿ ನೀಡಿ ಪರಿಶೀಲನೆ ಮಾಡುತ್ತೇವೆ ಅಂತ ಹೂವಿನಹಡಗಲಿ ತಹಸೀಲ್ದಾರ್‌(Tahashildar) ಎ.ಎಚ್‌. ಮಹೇಂದ್ರ(N Mahendra) ಹೇಳಿದ್ದಾರೆ. 
 

Latest Videos
Follow Us:
Download App:
  • android
  • ios