Asianet Suvarna News Asianet Suvarna News

ಗೋವಾದಿಂದ 'ಪುಷ್ಪ' ಸಿನಿಮಾ ಸ್ಟೈಲ್‌ನಲ್ಲಿ ಮದ್ಯ ಸಾಗಾಟ; ಗೂಡ್ಸ್ ವಾಹನ ಜಪ್ತಿ

ನೆರೆಯ ಗೋವಾ ರಾಜ್ಯದ ಮದ್ಯವನ್ನು ಅಕ್ರಮವಾಗಿ ಸಿನಿಮೀಯ ರೀತಿಯಲ್ಲಿ ಜಿಲ್ಲೆಯಲ್ಲಿ ಸಾಗಾಟ ಮಾಡುತ್ತಿದ್ದ ವಾಹನದ ಮೇಲೆ ಶನಿವಾರ ಅಬಕಾರಿ ಪೊಲೀಸರು ದಾಳಿ ನಡೆಸಿ ಇಬ್ಬರು ಬಂಧಿಸಿ, ₹ 5 ಲಕ್ಷ ಮೌಲ್ಯದ ಗೋವಾ ಮದ್ಯ ‍ವಶಪಡಿಸಿಕೊಂಡಿದ್ದಾರೆ.

illegal liquor transport from Goa like pushpa cinema style arested accused at belagavi rav
Author
First Published Dec 3, 2023, 4:49 AM IST

ಬೆಳಗಾವಿ (ಡಿ.3) : :ನೆರೆಯ ಗೋವಾ ರಾಜ್ಯದ ಮದ್ಯವನ್ನು ಅಕ್ರಮವಾಗಿ ಸಿನಿಮೀಯ ರೀತಿಯಲ್ಲಿ ಜಿಲ್ಲೆಯಲ್ಲಿ ಸಾಗಾಟ ಮಾಡುತ್ತಿದ್ದ ವಾಹನದ ಮೇಲೆ ಶನಿವಾರ ಅಬಕಾರಿ ಪೊಲೀಸರು ದಾಳಿ ನಡೆಸಿ ಇಬ್ಬರು ಬಂಧಿಸಿ, ₹ 5 ಲಕ್ಷ ಮೌಲ್ಯದ ಗೋವಾ ಮದ್ಯ ‍ವಶಪಡಿಸಿಕೊಂಡಿದ್ದಾರೆ.

ಬೆಳಗಾವಿ ತಾಲೂಕಿನ ಬಹದ್ದೂರವಾಡಿಯ ಶಿವಾಜಿ ಗಲ್ಲಿಯ ನಾಗೇಶ ನಾರಾಯಣ ಪಾಟೀಲ(34), ಸಾಹಿಲ್ ಲಕ್ಷ್ಮಣ ಪಾಟೀಲ(19) ಬಂಧಿತ ಆರೋಪಿಗಳು.

ಬೆಳಗಾವಿ: ಪುಷ್ಪಾ ಸಿನಿಮಾ ಸ್ಟೈಲಲ್ಲಿ ಸಾಗಿಸುತ್ತಿದ್ದ ಅಕ್ರಮ ಮದ್ಯ ವಶ..!

ಶನಿವಾರ ಬೆಳ್ಳಂ ಬೆಳಗ್ಗೆ ಬೆಳಗಾವಿ ತಾಲೂಕಿನ ಬಿಜಗರ್ಣಿ ಗ್ರಾಮದಿಂದ ಕವಳೆವಾಡಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ರಸ್ತೆಗಾವಲು ಹಾಗೂ ವಾಹನ ತಪಾಸಣೆ ಮಾಡುತ್ತಿರುವಾಗ ಅಶೋಕ ಲೇ ಲ್ಯಾಂಡ ಗೂಡ್ಸ್ ವಾಹನದ ಹಿಂದುಗಡೆ ಪಾರ್ಟಿಷನ್ ಮಾಡಿ 9 ವಿವಿಧ ಕಂಪನಿಯ 760 ಬಾಟಲಿಗಳಲ್ಲಿ ಒಟ್ಟು 239.400 ಲೀ ಗೋವಾ ಮದ್ಯವನ್ನು ಮುಚ್ಚಿಟ್ಟುಕೊಂಡು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವಾಗ ಪತ್ತೆಯಾಗಿದೆ. ₹ 5 ಲಕ್ಷ ಮೌಲ್ಯದ ಗೋವಾ ಮದ್ಯ, ₹ 3.30 ಲಕ್ಷ ಕಿಮ್ಮತ್ತಿನ ವಾಹನ ಸೇರಿದಂತೆ ಒಟ್ಟು ₹ 8.50 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಅಬಕಾರಿ ಇಲಾಖೆಯಿಂದ ಭಾರೀ ಮದ್ಯಸಾರ ಬೇಟೆ; ಶಾಸಕ‌ ಸೈಲ್‌ಗೆ ಕಂಟಕವಾಯ್ತಾ ಪ್ರಕರಣದ ಮಧ್ಯ ಪ್ರವೇಶ?

ಅಬಕಾರಿ ಅಪರ ಆಯುಕ್ತ ಡಾ.ವೈ.ಮಂಜುನಾಥ, ಜಂಟಿ ಆಯುಕ್ತ ಫಿರೋಜಖಾನ್ ಕಿಲ್ಲೇದಾರ, ಉಪ ಆಯುಕ್ತ ವನಜಾಕ್ಷಿ ಎಂ ಹಾಗೂ ಅಧಿಕ್ಷಕ ವಿಜಯಕುಮಾರ ಹಿರೇಮಠ ಮಾರ್ಗದರ್ಶನದಲ್ಲಿ ಉಪಅಧಿಕ್ಷಕ ರವಿ ಎಂ .ಮುರಗೋಡ ನೇತೃತ್ವದ ಮಂಜುನಾಥ ಗಲಗಲಿ, ಸುನೀಲ ಪಾಟೀಲ, ಮಹಾದೇವಪ್ಪ ಕಟಗೆನ್ನವರ ತಂಡ ಕಾರ್ಯಚರಣೆ ನಡೆಸಿ ಅಕ್ರಮ ಮದ್ಯ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.

Follow Us:
Download App:
  • android
  • ios