Asianet Suvarna News Asianet Suvarna News

ಬೆಳಗಾವಿ: ಪುಷ್ಪಾ ಸಿನಿಮಾ ಸ್ಟೈಲಲ್ಲಿ ಸಾಗಿಸುತ್ತಿದ್ದ ಅಕ್ರಮ ಮದ್ಯ ವಶ..!

ಕ್ಯಾಂಟರ್‌ನಲ್ಲಿ ಐದು ಅಡಿ ಅಗಲದ ಪ್ರತ್ಯೇಕ ಕಂಪಾರ್ಟ್‌ಮೆಂಟ್‌ ಮಾಡಿ ಅದಕ್ಕೆ ಶೆಟರ್‌ ವ್ಯವಸ್ಥೆ ಮಾಡಲಾಗಿತ್ತು. ಈ ಮೂಲಕ ಯಾರಿಗೂ ಸಣ್ಣ ಸುಳಿವೂ ಸಿಗದಂತೆ ಮದ್ಯ ಸಾಗಣೆಗೆ ತಂತ್ರ ರೂಪಿಸಲಾಗಿತ್ತು.

Illegal Liquor Seized in Belagavi grg
Author
First Published Nov 25, 2023, 11:01 AM IST

ಬೆಳಗಾವಿ(ನ.25):  ಪುಷ್ಪಾ ಸಿನಿಮಾ ಮಾದರಿಯಲ್ಲಿ ಗೋವಾದಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಮದ್ಯ ಸಾಗಣೆ ಮಾಡುತ್ತಿದ್ದ ವಾಹನ ಮೇಲೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು, ಒಬ್ಬನನ್ನು ಬಂಧಿಸಿ, 25 ಲಕ್ಷ ರು. ಮೌಲ್ಯದ ಮದ್ಯ‍ ವಶಕ್ಕೆ ತೆಗೆದುಕೊಂಡಿದ್ದಾರೆ.

ಬಿಹಾರ ರಾಜ್ಯದ ಬಂಗಾ ಬಝಾರ್ ನಿವಾಸಿ ಸುಭೋದ ರಾಮನಾಥ ಮಹತೊ (49) ಬಂಧಿತ ಆರೋಪಿ. ಕ್ಯಾಂಟರ್‌ನಲ್ಲಿ ಅಕ್ರಮವಾಗಿ ಗೋವಾ ಮದ್ಯ ಸಾಗಣೆ ಮಾಡುತ್ತಿರುವ ಕುರಿತು ಮಾಹಿತಿ ಕಲೆ ಹಾಕಿದ್ದ ಅಬಕಾರಿ ಅಧಿಕಾರಿಗಳು ಬೆಳಗ್ಗೆ 4.30ರ ಸುಮಾರಿಗೆ ಖಾನಾಪುರ ತಾಲೂಕಿನ ಕಣಕುಂಬಿ ಚೆಕ್‌ ಪೊಸ್ಟ್‌ನಲ್ಲಿ ವಾಹನ ತಡೆದು ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕ್ಯಾಂಟರ್‌ನಲ್ಲಿ ಐದು ಅಡಿ ಅಗಲದ ಪ್ರತ್ಯೇಕ ಕಂಪಾರ್ಟ್‌ಮೆಂಟ್‌ ಮಾಡಿ ಅದಕ್ಕೆ ಶೆಟರ್‌ ವ್ಯವಸ್ಥೆ ಮಾಡಲಾಗಿತ್ತು. ಈ ಮೂಲಕ ಯಾರಿಗೂ ಸಣ್ಣ ಸುಳಿವೂ ಸಿಗದಂತೆ ಮದ್ಯ ಸಾಗಣೆಗೆ ತಂತ್ರ ರೂಪಿಸಲಾಗಿತ್ತು.

ಹಾಲಿ, ಮಾಜಿ ಶಾಸಕರ ನಡುವೆ ಮದ್ಯಸಾರ ಫೈಟ್: ಲಿಕ್ಕರ್ ಪ್ರಕರಣದ ಹಿಂದಿರುವ ಕೈ ಯಾರದ್ದು..?

ಇದನ್ನು ಪತ್ತೆ ಹಚ್ಚಿರುವ ಅಬಕಾರಿ ಅಧಿಕಾರಿಗಳು ವಾಹನದಲ್ಲಿದ್ದ 90 ರಟ್ಟಿನ ಪೆಟ್ಟಿಗೆಯಲ್ಲಿ 50 ಎಂಎಲ್ ಅಳತೆಯ ಬ್ಲೆಂಡರ್ಸ್ ಸ್ಪ್ರೈಡ್ ವಿಸ್ಕಿ ಬಾಟಲಿಗಳು, 04 ಪ್ಲಾಸ್ಟಿಕ್ ಕ್ಯಾನ್‌ ನಲ್ಲಿ 80ಲೀ ಬ್ಲೆಂಡ್ ವಿಸ್ಕಿ, ಒಂದು ಚೀಲದಲ್ಲಿ ರಾಯಲ್ ಸ್ಪ್ಯಾಗ್ ವಿಸ್ಕಿಯ ಕ್ಯಾಪ್‌ ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಸೆಪ್ಟೆಂಬರ್‌ ತಿಂಗಳಲ್ಲಿ ಇದೇ ರೀತಿ ಲಾರಿಯಲ್ಲಿ ಫ್ಲೈವುಡ್ ಹಲಗೆಗಳ ನಡುವೆ ಸಾಗಿಸುತ್ತಿದ್ದ 25 ಲಕ್ಷ ರು.ಗೂ ಹೆಚ್ಚು ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿತ್ತು. 

ಅಬಕಾರಿ ಅಪರ ಆಯುಕ್ತ ಡಾ. ವೈ.ಮಂಜುನಾಥ, ಜಂಟಿ ಆಯುಕ್ತ ಫಿರೋಜ್‌ ಖಾನ್‌ ಕಿಲ್ಲೇದಾರ್‌, ಉಪಾಯುಕ್ತೆ ವನಜಾಕ್ಷಿ ಎಂ, ಅಬಕಾರಿ ಅಧೀಕ್ಷಕ ವಿಜಯಕುಮಾರ್‌ ಹಿರೇಮಠ, ಅಬಕಾರಿ ಉಪ ಅಧೀಕ್ಷಕ ರವಿ ಮುರಗೋಡ ಮಾರ್ಗದರ್ಶನದಲ್ಲಿ ಖಾನಾಪೂರ ಅಬಕಾರಿ ವಲಯದ ಅಬಕಾರಿ ನಿರೀಕ್ಷಕ ಮಲ್ಲೇಶ ಉಪ್ಪಾರ, ಮಂಜುನಾಥ ಗಲಗಲಿ, ಕಣಕುಂಬಿ ತನಿಖಾ ಠಾಣೆಯಅಬಕಾರಿ ನಿರೀಕ್ಷಕ ಬಾಳಗೌಡ ಪಾಟೀಲ, ಕರೆಪ್ಪ ಹೊಳೆನ್ನವರ ಇತರರು ದಾಳಿಯಲ್ಲಿ ಪಾಲ್ಗೊಂಡಿದ್ದರು.

Follow Us:
Download App:
  • android
  • ios