*  ಆಂಧ್ರ-ತೆಲಂಗಾಣದಿಂದ ಅಕ್ರಮ ಮದ್ಯ ಸಾಗಾಟ*  ರಾಯಚೂರಿಗೆ ಕಂಟಕವಾಗಿದೆ ಆಂಧ್ರ-ತೆಲಂಗಾಣ*  ರೈಲಿನಲ್ಲಿ ತಂದು ಮಾರಾಟ ಮಾಡುವಾಗ ಸಿಗಿಬಿದ್ದ ಧುರುಳರು 

ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್

ರಾಯಚೂರು(ಏ.09): ಬಿಸಿಲುನಾಡು ರಾಯಚೂರು(Raichur) ಜಿಲ್ಲೆಯಲ್ಲಿ ದಿನೇ ದಿನೇ ಬಿಸಿಲು ಹೆಚ್ಚಾಗುತ್ತಿದೆ. ಬಿಸಿಲು ಹೆಚ್ಚಾದಂತೆ ರಾಯಚೂರು ಸಿಟಿಯಲ್ಲಿ ಸಿಎಚ್ ಪೌಡರ್‌ ಮಾರಾಟ ದಂಧೆಯೂ ಜೋರಾಗಿ ನಡೆದಿದೆ. ಇಂತಹ ದಂಧೆ ಕಡಿವಾಣ ಹಾಕಲು ಅಬಕಾರಿ ಇಲಾಖೆ ಪೊಲೀಸರು(Police) ಹಗ್ಗಲು ಮತ್ತು ರಾತ್ರಿ ಗಸ್ತು ತಿರುಗಿದ್ರು. ದಂಧೆಕೋರರು ಮಾತ್ರ ಕಳ್ಳ ಮಾರ್ಗದ ಮುಖಾಂತರ ರಾಯಚೂರು ಸಿಟಿಗೆ ಎಂಟ್ರಿ ಕೊಟ್ಟು, ಸಿಎಚ್ ಪೌಡರ್‌ ಮಿಶ್ರಿತ ಹೆಂಡ ಮಾರಾಟ ಮಾಡುವುದು ಮಾತ್ರ ನಿಲ್ಲಿಸುತ್ತಿಲ್ಲ. 

ಇಷ್ಟು ದಿನಗಳ ಕಾಲ ಬೈಕ್, ಕಾರು, ಬುಲೇರೋ ವಾಹನಗಳನ್ನ ಬಳಸಿ ಅಕ್ರಮ ಸೇಂಧಿ ಸಾಗಾಟ ಮಾಡುತ್ತಿದ್ರು. ಇದಕ್ಕೆ ಅಬಕಾರಿ ಪೊಲೀಸರು ಕಡಿವಾಣ ಹಾಕಿದ್ದಾರೆ. ಹೀಗಾಗಿ ಕೆಲ ದಂಧೆಕೋರರು ನದಿಯಲ್ಲಿ ತೆಪ್ಪದ ಮೂಲಕವೂ ಅಕ್ರಮ ಸೇಂದಿ ತಂದುಕೊಂಡು ಬಂದು ಲಾಕ್ ಆಗಿದ್ರು. ಆದ್ರೀಗ ಮತ್ತೊಂದೆಜ್ಜೆ ಮುಂದೆ ಹೋಗಿರೋ ದಂಧೆಕೋರರು ಆಂಧ್ರ(Andhra Pradesh) ಮತ್ತು ತೆಲಂಗಾಣದಿಂದ(Telangana) ಬರುವ ರೈಲುಗಳಲ್ಲಿ(Railway) ಸಿಎಚ್ ಪೌಂಡರ್ ಸಾಗಾಟ ದಂಧೆ ನಡೆಸಿದ್ರು. ಕೂಲಿಕಾರ್ಮಿಕರ ವೇಷದಲ್ಲಿ ಚೀಲಗಳಲ್ಲಿ ಅಕ್ರಮ ಸೇಂಧಿಯ ಬಾಟಲ್ಗಳನ್ನು ತೆಗೆದುಕೊಂಡು ಬಂದು ಮಾರಾಟ ಮಾಡಿ ಹೋಗುತ್ತಿದ್ರು. ರೈಲ್ವೆ ನಿಲ್ದಾಣದಲ್ಲಿ ಟಿಕೆಟ್ ಚೆಕ್ ಮಾಡುವಾಗ ಸಿಎಚ್ ಪೌಂಡರ್ ಸೇಂಧಿ ಸಮೇತ ರಾಯಚೂರು ರೈಲ್ವೇ ನಿಲ್ದಾಣದಲ್ಲಿ ದಂಧೆಕೋರರು ರೆಡ್ ಆ್ಯಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

Drug Bust: ಬೆಂಗ್ಳೂರಲ್ಲಿ ಪೊಲೀಸರ ಭರ್ಜರಿ ಭೇಟೆ: 38 ಕೋಟಿ ಡ್ರಗ್ಸ್‌ ಜಪ್ತಿ

ಏನಿದು ಸಿಎಚ್ ಪೌಂಡರ್: 

ಕ್ಲೋರೈಡ್ ಹೈಡ್ರೇಟ್ ಪೌಡರ್‌ (Chloride Hydrate Powder) ಇದು ನಿಷೇಧಿತ ಪೌಂಡರ್, ಇದು ಕೇವಲ ಫ್ರಾಮಾ ಕಂಪನಿಗಳಲ್ಲಿ ಬಳಕೆ ಮಾಡುವ ವಸ್ತು. ಈ ಪೌಡರ್‌ ಸೇವನೆಯಿಂದ ಮನುಷ್ಯನಿಗೆ ನಿದ್ದೆ ಬರುತ್ತೆ, ಜೊತೆಗೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ, ಆದ್ರೂ ಸಹ ಇಂತಹ ಅಪಾಯಕಾರಿ ಪೌಡರ್‌ ಆಂಧ್ರ ಮತ್ತು ತೆಲಂಗಾಣದಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಾರೆ. ಇದನ್ನ ದಂಧೆಕೋರರು ತೆಗೆದುಕೊಂಡು ಬಂದು ರಾಯಚೂರು ಸಿಟಿಯಲ್ಲಿ ಸಿಎಚ್ ಪೌಂಡರ್ ಮತ್ತು ಸುಣ್ಣ ಸೇರಿಸಿ ಸೇಂಧಿ ಮಾಡಿ ಮಾರಾಟ ಮಾಡುತ್ತಾರೆ.

ಯಾರು ಈ ಸೇಂಧಿ ಸೇವನೆ ಮಾಡುತ್ತಾರೆ:

ರಾಯಚೂರು ಜಿಲ್ಲೆಯ ಕೆಲವು ಕಡೆ ದುಡಿಯುವ ಕೂಲಿ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದೆ. ಕೂಲಿ ಕಾರ್ಮಿಕರಿಗೆ ಟಾರ್ಗೆಟ್ ಮಾಡುವ ದಂಧೆಕೋರರು 10ರೂಪಾಯಿಗೆ ಒಂದು ಲೀಟರ್ ಕಲಬೆರಿಕೆ ಸೇಂದಿ ಮಾರಾಟ ಮಾಡುತ್ತಾರೆ. ಇದು ಹತ್ತಾರು ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿರುವ ದಂಧೆಯಾಗಿದೆ. ಈ ಸೇಂಧಿ ಸೇವನೆ ಮಾಡಿದ ನೂರಾರು ಯುವಕರು 30 ವಯಸ್ಸಿಗೆ ಮದುಕರಂತೆ ಆಗಿ ನಾನಾ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಒಂದು ಸಲ ಈ ಅಕ್ರಮ ಸೇಂಧಿ ಸೇವನೆ ಮಾಡಿದ್ರೆ ನಿತ್ಯವೂ ಸೇಂಧಿ ಸೇವನೆ ಮಾಡಲು ಕೂಲಿ ಕಾರ್ಮಿಕರು ಕೆಲಸ ಬಿಟ್ಟು ಸೇಂಧಿ ಇರುವ ಕಡೆಗೆ ಹೋಗಿ ಸೇಂಧಿ ಸೇವಿಸಿ ಬರುತ್ತಾರೆ.

Gadag: ಚಲಿಸುತ್ತಿದ್ದ ಬೈಕ್‌ನ ಸೈಡ್ ಪ್ಯಾಕೆಟ್‌ನಿಂದ 10 ಲಕ್ಷ ರೂ. ಹಣ ಎಗರಿಸಿದ ಕಳ್ಳರು

ರೈಲ್ವೆ ನಿಲ್ದಾಣದಲ್ಲಿ ದಂಧೆಕೋರರು ಸಿಕ್ಕಿದ್ದು ಹೇಗೆ?

ತೆಲಂಗಾಣದ ಕೃಷ್ಣಾ ರೈಲ್ವೇ ನಿಲ್ದಾಣದಿಂದ ರಾಯಚೂರಿಗೆ ತರಲಾಗುತ್ತಿದ್ದ ಅಕ್ರಮ ಸೇಂಧಿ ಬರ್ತಿರೋದರ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಅಬಕಾರಿ ಅಧಿಕಾರಿಗಳಿಗೆ ರಾಯಚೂರು ರೈಲ್ವೇ ನಿಲ್ದಾಣದಲ್ಲಿ ಭಾರೀ ಪ್ರಮಾಣದ ಅಕ್ರಮ ಸೇಂದಿ ಸಿಕ್ಕಿದೆ. ಅಕ್ರಮ ಸೇಂದಿ ಮಾರಾಟ ಮಾಡಲು ತಂದಿದ್ದು ಐದು ಜನ ಆರೋಪಿಗಳ ಸಮೇತ 80 ಸಾವಿರ ಮೌಲ್ಯದ 250 ಲೀಟರ್ ಅಕ್ರಮ ಸೇಂಧಿ ಜಪ್ತಿ ಮಾಡ್ಕೊಂಡಿದ್ದಾರೆ. ಅನುಮಾನವೇ ಬಾರದಂತೆ ಬಾಟಲ್ಗಳಲ್ಲಿ ಹೆಂಡ ತುಂಬಿ ಅಕ್ರಮವಾಗಿ ತರಲಾಗುತ್ತು. ಅಕ್ರಮ ಸೇಂದಿ ತಂದು ಮಾರಾಟ ಮಾಡ್ತಿದ್ದ ಆರೋಪಿಗಳು ರಾಯಚೂರಿನ ರಾಗಿಮಾನಗಡ್ಡ, ಸ್ಟೇಷನ್ ಏರಿಯಾದ ಆನಂದಮ್ಮ, ತಾಯಮ್ಮ, ಸುಬ್ಬಲಕ್ಷ್ಮೀ, ರಾಮಾಂಜನೇಯಾ,ರಾಜು ಎಂದು ಗುರುತಿಸಲಾಗಿದೆ. ಇನ್ನೊಂದು ಆಘಾತಕಾರಿ ಅಂಶವೆಂದ್ರೆ ಈ ಸುಬ್ಬಲಕ್ಷ್ಮೀ, ರಾಮಾಂಜನೇಯಾ,ರಾಜು ಈಗಾಗಲೇ ತಲಾ ಎರಡೆರಡು ಪ್ರಕರಣಗಳಲ್ಲಿ ಸಿಕ್ಕಿ ಬಿದ್ದು, ಶಿಕ್ಷೆ ಅನುಭವಿಸಿದ್ರೂ ಇನ್ನೂ ತಮ್ಮ ದಂಧೆ ಬಿಟ್ಟಿಲ್ಲ.

ಒಟ್ಟಿನಲ್ಲಿ ಬೇಸಿಗೆಯಲ್ಲಿ ಈ ಹೆಂಡ ಕುಡುದ್ರೆ ದೇಹ ತಂಪಾಗುತ್ತೆ ಅನ್ನೋ ಹುಚ್ಚುತನದಲ್ಲಿರೋ ಜನ, ಜೀವ ಹಾಗೂ ಜೀವನ ಹಾಳಾಗುತ್ತೆ ಅನ್ನೋದನ್ನೇ ಮರೆತು ಅಕ್ರಮ ಸೇಂದಿ ಸೇವನೆಗೆ ಬಲಿಯಾಗುತ್ತಿದ್ದಾರೆ. ಸದ್ಯ ಎಲ್ಲಾ ಮಾರ್ಗಗಳು ಬಂದ್ ಆದ್ಮೇಲೆ ರೈಲನ್ನ ಬಳಕೆ ಮಾಡಿಕೊಂಡು ಬಡ ಜನರ ಜೀವನ ಹಾಳು ಮಾಡಲು ಹೊರಟಿದ್ದ ಮನೆಹಾಳರನ್ನ ಪೊಲೀಸರು ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಆದಷ್ಟು ರಾಯಚೂರು ಜಿಲ್ಲಾಡಳಿತ ಇಂತಹ ಅಕ್ರಮ ಸೇಂಧಿ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ಜನರನ್ನ ಈ ಚಟದಿಂದ ಹೊರತರಲು ಮುಂದಾಗಬೇಕಿದೆ.