Asianet Suvarna News Asianet Suvarna News

ಕಾಫಿ ನಾಡಲ್ಲಿ ಅಕ್ರಮ ಬಾಂಗ್ಲಾ ನಿವಾಸಿಗಳು ಪತ್ತೆ!

ರಾಜ್ಯದಲ್ಲಿ ಅಕ್ರಮ ಬಾಂಗ್ಲಾ ನಿವಾಸಿಗಳು ಪತ್ತೆ. ಕಳೆದ ಮೂರು ವರ್ಷಗಳಿಂದ ಕಾಫಿನಾಡಿನಲ್ಲಿ ಕೆಲಸ ಮಾಡುತ್ತಿರುವ ನಿವಾಸಿಗಳು? ಎನ್ ಆರ್ ಪುರದ ಸಿಂಸೆ ಬೋವಿ ಕಾಲೋನಿನಲ್ಲಿ ವಾಸವಾಗಿದ್ದ ನಾಲ್ವರು.

Illegal Bangla residents found in Chikkamagaluru
Author
Bangalore, First Published Jul 23, 2022, 3:10 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು ಜು.23: ಕಾಫಿನಾಡು ಚಿಕ್ಕಮಗಳೂರಲ್ಲಿ ಅರಣ್ಯ ಎಷ್ಟಿದ್ಯೋ ಅದಕ್ಕಿಂತ ಜಾಸ್ತಿ ಕಾಫಿತೋಟವಿದೆ. ಪ್ರತಿವರ್ಷ ಕಾಫಿ ಕೆಲಸಕ್ಕೆಂದು ರಾಜ್ಯ-ಹೊರರಾಜ್ಯದ ಸಾವಿರಾರು ಜನ ಬರ್ತಾರೆ. ಹೋಗ್ತಾರೆ. ಆದ್ರೆ, ಅಕ್ರಮವಾಗಿ ಪ್ರವೇಶ ಪಡೆದು ಬಂದಿರೋ ಬಾಂಗ್ಲಾ ನಿವಾಸಿಗಳು ಕಾಫಿನಾಡಲ್ಲೇ ಬೀಡು ಬಿಟ್ಟಿದ್ದಾರೆ. ಬಂದವರು ಹೋಗೇ ಇಲ್ಲ. ಕಾಫಿನಾಡ ರಸ್ತೆಯಲ್ಲಿ ಜನಸಾಮಾನ್ಯರಂತೆ ಓಡಾಡುತ್ತಿದ್ದಾರೆ. ಅವರನ್ನ ಗುರುತಿಸಿರುವ ಪೊಲೀಸ್ ಇಲಾಖೆ ಮರಳಿ ಅವರ ದೇಶಕ್ಕೆ ಕಳುಹಿಸಿ ಕೊಡುವ ನಿಟ್ಟಿನಲ್ಲಿ ಮುಂದಾಗಿದ್ದಾರೆ.

ಜಿಲ್ಲೆಯಲ್ಲಿ ಬಾಂಗ್ಲಾ ನಿವಾಸಿಗಳು ಪತ್ತೆ: ಸಂಘಟನೆಗಳ ಆರೋಪಕ್ಕೆ ಸಾಕ್ಷಿ:

ರಾಜ್ಯದಲ್ಲಿ ಅಕ್ರಮ ಬಾಂಗ್ಲಾದೇಶದ ನಿವಾಸಿಗಳು (Illegal immigration from Bangladesh) ಇರುವ ಬಗ್ಗೆ ಸಾಕಷ್ಟು ಆರೋಪಗಳು ಕೇಳಿಬರುತ್ತಿರುವ ಬೆನ್ನಲ್ಲೇ  ಕಾಫಿನಾಡು ಚಿಕ್ಕಮಗಳೂರಿ(Coffe nadu (Chikkamagaluru)ನಲ್ಲಿ ನಾಲ್ವರು ಅಕ್ರಮ ಬಾಂಗ್ಲಾ ನಿವಾಸಿಗಳು ಪತ್ತೆ ಆಗಿದ್ದಾರೆ.ಜಿಲ್ಲಾ ಪೊಲೀಸ್ ಇಲಾಖೆ Depertment of Police) ನಾಲ್ಕು ಜನ ಬಾಂಗ್ಲಾ ವಲಸಿಗರನ್ನು ಪತ್ತೆ ಹಚ್ಚಿದೆ. ಇನ್ನೂ ಹಲವರು ಇರುವ ಕುರಿತು ಅನುಮಾನ ವ್ಯಕ್ತವಾಗಿದ್ದು, ನಾಲ್ವರನ್ನು ಸುರಕ್ಷಿತ ಪಾಲನೆಯಲ್ಲಿ ಇಟ್ಟು ವಿಚಾರಣೆ (inquiry) ನಡೆಸಲಾಗುತ್ತಿದೆ.

ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಕ್ರಮ: ಸಚಿವ ಆರಗ ಜ್ಞಾನೇಂದ್ರ

ರಾಜ್ಯದ ಮಡಿಕೇರಿ(Madikeri), ಹಾಸನ(Hassan) ಚಿಕ್ಕಮಗಳೂರಿ(Chikkamagaluru)ನ ಕಾಫಿ ಎಸ್ಟೇಟ್‌(coffee estate)ಗಳಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ನೆಲೆಸಿದ್ದಾರೆ ಎಂಬ ಆರೋಪ ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಇದರ ಬೆನ್ನಲ್ಲೆ ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ(Narasimharajapur)ದಲ್ಲಿ ನಾಲ್ಕು ಜನ ಬಾಂಗ್ಲಾ ವಲಸಿಗರು ನೆಲೆಸಿರುವುದು ದೃಢಪಟ್ಟಿದೆ. ಜಿಲ್ಲೆಯ ಎನ್.ಆರ್.ಪುರ(N.R.pura) ತಾಲೂಕಿನ ಸಿಂಸೆಯ ಬೋವಿ ಕಾಲೋನಿಯಲ್ಲಿ ನೆಲೆಸಿದ್ದ ನಾಲ್ವರು ಬಾಂಗ್ಲಾ ನಿವಾಸಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪಶ್ವಿಮ ಬಂಗಾಲದ‌ ಮೂಲಕ ಜಿಲ್ಲೆಗೆ:

ನಕಲಿ ದಾಖಲೆ(Fake Documents)ಗಳನ್ನು ಸೃಷ್ಠಿಮಾಡಿಕೊಂಡಿರುವ ಅಕ್ರಮ ಬಾಂಗ್ಲಾ ನಿವಾಸಿಗಳು ಜಿಲ್ಲೆಗೆ ಆಗಮಿಸಿ ಮೂರು ವರ್ಷಗಳೇ ಕಳೆದಿದೆ.‌ಎನ್ ಆರ್ ಪುರದಲ್ಲಿ ಎಲ್ಲಾರಂತೆ ಕೂಲಿ ಕೆಲಸವಾದ ಗಾರೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು.  ಜಿಲ್ಲೆಗೆ ಕೂಲಿ ಕೆಲಸಕ್ಕಾಗಿ ಪಶ್ಚಿಮ ಬಂಗಾಳದ ಮೂಲಕ ಆಗಮಿಸಿದ್ದು, ರಹುಲ್, ಅಬ್ದುಲ್, ಮೋಮಿನ್ ಅಲಿ, ಸಲೀಂ ಅಕ್ರಮವಾಗಿ ನೆಲೆಸಿದ್ದರು ಎಂದು ತಿಳಿದುಬಂದಿದೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲಿಲನೆ ನಡೆಸಿದ್ದಾರೆ.ಈ ವೇಳೆ ಇವರು ಬಾಂಗ್ಲಾದೇಶದ ಪ್ರಜೆಗಳು ಎಂದು ತಿಳಿದುಬಂದಿದೆ. ಎನ್.ಆರ್.ಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಜಿಲ್ಲೆಯೊಂದರಲ್ಲೇ ಸುಮಾರು ಐದು ಸಾವಿರಕ್ಕೂ ಅಧಿಕ ಅಕ್ರಮ ಬಾಂಗ್ಲಾ ನಿವಾಸಿಗಳು ಕಾಫಿತೋಟದಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಅವರಿಂದ ಮುಂದೊಂದು ದಿನ ದೊಡ್ಡ ಅನಾಹುತ ಸಂಭವಿಸೋ ಮೊದಲು ಸರ್ಕಾರ ಕೂಡಲೇ ಅವರನ್ನ ಪತ್ತೆ ಮಾಡಬೇಕೆಂದು  ಹಿಂದೂ ಪರ ಸಂಘನೆಗಳು  ಜಿಲ್ಲಾಡಳಿತಕ್ಕೆ ಒತ್ತಾಯವನ್ನು ಮಾಡಿದ್ದಾರೆ.

ಅಕ್ರಮ ಬಾಂಗ್ಲಾ ವಲಸಿಗರಿಗೆ ನಕಲಿ ದಾಖಲೆ ಪತ್ರ ನೆರವು; ಮಾಜಿ ಕೌನ್ಸಿಲರ್ ಅರೆಸ್ಟ್!

ಮಲೆನಾಡಿನಲ್ಲಿ ಆಶ್ರಯ:

ರಾಜ್ಯದ ಮಲೆನಾಡು(Malenadu) ಪ್ರದೇಶಗಳಾದ ಮಡಿಕೇರಿ, ಹಾಸನ, ಚಿಕ್ಕಮಗಳೂ ರಿನ ಕಾಫಿ ತೋಟಗಳಲ್ಲಿ ಇನ್ನೂ ಹಲವು ಮಂದಿ ನೆಲೆಸಿದ್ದಾರೆ ಎಂಬ ಅನುಮಾನ ವಿಚಾರಣೆ ವೇಳೆಯಲ್ಲಿ ಮಾಹಿತಿ ಹೊರಬಂದಿದೆ. ನಕಲಿ ಆಧಾರ್ ಕಾರ್ಡ್(Fake adhar card) ಸೃಷ್ಟಿಸಿಕೊಂಡಿರುವುದು ಸಹ ತಿಳಿದುಬಂದಿದ್ದು ಅಧಾರ್ ಕಾರ್ಡ್ ವಶಕ್ಕೆ ತೆಗೆದುಕೊಳ್ಳಲಾಗಿದೆ. ಮಲೆನಾಡಿನ ಬೆಟ್ಟಗುಡ್ಡಗಳ ನಡುವಿನ ಕಾಫಿತೋಟಗಳಲ್ಲಿ ಯಾರಿಗೂ ಅನುಮಾನ ಬರಲಾರದು ಎಂಬ ಹಿನ್ನೆಲೆಯಲ್ಲಿ ತೋಟಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಶಂಕೆ ವ್ಯಕ್ತವಾಗಿದೆ. ಜತೆಗೆ ಬೆಂಗಳೂರಿ(Banglore)ನಲ್ಲಿಯೂ ಇವರ ತಂಡದ ಹಲವರು ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಸಿ ಅನುಮಾನವ ಪೊಲೀಸರಿಗೆ ವಿಚಾರಣೆ ವೇಳೆ ತಿಳಿದುಬಂದಿದೆ.ಒಟ್ಟಾರೆ, ಒಂದೆಡೆ ಅಕ್ರಮ ಬಾಂಗ್ಲಾ ಪ್ರಜೆಗಳು. ಅವರಿಂದ ಸ್ಥಳಿಯರಿಗೂ ಕೂಲಿ ಸಿಗ್ತಿಲ್ಲ. ಬಂದವರು ವಾಪಸ್ಸೂ ಹೋಗ್ತಿಲ್ಲ.ಮಲೆನಾಡಿನಲ್ಲಿ ಪತ್ತೆಯಾಗಿರೋ ನಾಲ್ಕು  ಮೂರು ವರ್ಷದಿಂದ ಇಲ್ಲೇ ಇದ್ದಾರೆಂಬ ಮಾಹಿತಿ ಇದೆ.  ಹಾಗಾಗಿ, ಸರ್ಕಾರ ಹಾಗೂ ಜಿಲ್ಲಾಡಳಿತ ನಿಜಕ್ಕೂ ಸೂಕ್ಷ್ಮವಾಗಿ ಯೋಚಿಸಬೇಕಾದ ಸಂಗತಿ ಇದು. ಮುಂದೊಂದು ದಿನ ಕಾಫಿನಾಡನಲ್ಲಿ ಮತ್ತೊಂದು ಅನಾಹುತ ಜರುಗುವ ಮುನ್ನ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕಾದ ಅನಿವಾರ್ಯತೆ ಬಹಳಷ್ಟಿದೆ.

Follow Us:
Download App:
  • android
  • ios