ನೇಣು ಬಿಗಿದ ಸ್ಥಿತಿಯಲ್ಲಿ ಐಐಎಂ ವಿದ್ಯಾರ್ಥಿ ಶವ ಪತ್ತೆ: ಕೊಲೆ ಎಂದು ಶಂಕಿಸಿದ ಪೋಷಕರು..!
ವಿದ್ಯಾರ್ಥಿಯು ತನ್ನ ಕೋಣೆಯ ಒಳಗಿನಿಂದ ಪ್ರತಿಕ್ರಿಯೆ ನೀಡುತ್ತಿಲ್ಲ, ಬಾಗಿಲು ತೆಗೆಯುತ್ತಿಲ್ಲ ಎಂದು ಕೆಲವು ವಿದ್ಯಾರ್ಥಿಗಳು ತಿಳಿಸಿದ್ದರು ಎಂದು ಕಾಲೇಜಿನ ಉದ್ಯೋಗಿಗಳು ಹೇಳಿದ್ದಾರೆ. ನಂತರ, ರಾತ್ರಿ 11.20ರ ಸುಮಾರಿಗೆ ಸಿಬ್ಬಂದಿ ಬಾಗಿಲು ಒಡೆದ ಬಳಿಕ ಅವರ ಶವ ಪತ್ತೆಯಾಗಿದೆ ಎಂದು ಪ್ರವೀಣ್ ಕುಮಾರ್ ಸಿಂಗ್ ಹೇಳಿದ್ದಾರೆ.
ಇತ್ತೀಚೆಗೆ ವಿದ್ಯಾರ್ಥಿಗಳ ಅನುಮಾನಾಸ್ಪದ ಸಾವು ಪ್ರಕರಣಗಳು, ಆತ್ಮಹತ್ಯೆಯ ಕೇಸ್‌ಗಳು ಹೆಚ್ಚಾಗುತ್ತಲೇ ಇದೆ. ಇದಕ್ಕೆ ಮತ್ತೊಂದು ಸೇರ್ಪಡೆ ಐಐಎಂ ವಿದ್ಯಾರ್ಥಿಯ ಸಾವು. ಹೌದು, ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ರಾಂಚಿಯ ವಿದ್ಯಾರ್ಥಿಯೊಬ್ಬರ ಶವ ಆತನ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಹಾಗೂ ಆತನ ಎರಡೂ ಕೈಗಳನ್ನು ಕಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹಾಸ್ಟೆಲ್‌ನ ಐದನೇ ಮಹಡಿಯ ಕೊಠಡಿಯಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿಯ ಶವ ಸಿಕ್ಕಿದೆ. 22 ವರ್ಷದ ವಿದ್ಯಾರ್ಥಿ ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ ಎಂದು ಜಾರ್ಖಂಡ್ ಪೊಲೀಸ್ ಅಧಿಕಾರಿಗಳು ಮಂಗಳವಾರ ಮಾಹಿತಿ ನೀಡಿದ್ದಾರೆ.
ಮೃತ ವಿದ್ಯಾರ್ಥಿಯನ್ನು (Died Student) ಉತ್ತರ ಪ್ರದೇಶದ (Uttar Pradesh) ವಾರಾಣಸಿ (Varanasi) ಮೂಲದ ಶಿವಂ ಪಾಂಡೆ (Shivam Pandey) ಎಂದು ಗುರುತಿಸಲಾಗಿದೆ. ಐಐಎಂ ಸಂಸ್ಥೆಯ (IIM Institute) ಸಿಬ್ಬಂದಿ ಈ ಘಟನೆ ಗಮನಕ್ಕೆ ಬಂದ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತ ವಯುವಕನ ದೇಹವನ್ನು ಮರಣೋತ್ತರ ಪರೀಕ್ಷೆಗೆ (Autopsy) ಕಳುಹಿಸಲಾಗಿದ್ದು, ನಂತರ ಈ ಘಟನೆಯ ಬಗ್ಗೆ ಪೊಲೀಸರು (Police) ವಿದ್ಯಾರ್ಥಿಯ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ, ಪೊಲೀಸರು ಈ ವಿಷಯವನ್ನು ತನಿಖೆ ಮಾಡುತ್ತಿದ್ದಾರೆ ಮತ್ತು ಕೊಲೆ ಹಾಗೂ ಆತ್ಮಹತ್ಯೆ ಸೇರಿದಂತೆ ಎಲ್ಲಾ ದೃಷ್ಟಿಕೋನಗಳಿಂದ ಕೇಸ್ ನಡೆಸುತ್ತಿದ್ದಾರೆ. ಆದರೆ, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ತನಿಖೆ ಮುಂದುವರಿಯಲು ಸಾಧ್ಯ ಎಂದೂ ಪೊಲೀಸರು ಹೇಳಿದ್ದಾರೆ.
ಇದನ್ನು ಓದಿ: Accident Death: ರಾಜ್ಯದ ವಿವಿಧೆಡೆ ಪ್ರತ್ಯೇಕ ಅಪಘಾತ: ವಿದ್ಯಾರ್ಥಿನಿ ಸೇರಿ ಮೂವರ ಮನಕಲಕುವ ಸಾವು
ಆದರೆ, ಈ ಪ್ರಕರಣ ಸಂಬಂಧ ಮೃತ ವಿದ್ಯಾರ್ಥಿಯ ಕುಟುಂಬವು ಕೊಲೆ ಮಾಡಿ ಆತ್ಮಹತ್ಯೆ ಎಂಬಂತೆ ಬಿಂಬಿಸಿದ್ದಾರೆ ಎಂದು ಆರೋಪಿಸಿದ್ದು, ಪ್ರಕರಣದ ತನಿಖೆಗಾಗಿ ಪೊಲೀಸರು ಎಸ್‌ಐಟಿ ರಚಿಸುವಂತೆ ಸೂಚಿಸಿದರು. ಕಣ್ಗಾವಲು ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳ ಮೂಲಕವೂ ಪೊಲೀಸರು ಸುಳಿವುಗಳನ್ನು ಸಂಗ್ರಹಿಸುತ್ತಿದ್ದಾರೆ. ಇನ್ನು, ಶಿವಂ ಪಾಂಡೆ ಐಐಎಂ ವಿದ್ಯಾರ್ಥಿ ಎಂಬುದನ್ನು ರಾಂಚಿ ಎಸ್‌ಎಸ್‌ಪಿ ಕೌಶಲ್ ಕಿಶೋರ್ ಖಚಿತಪಡಿಸಿದ್ದಾರೆ.
ಈ ಘಟನೆ ಬಗ್ಗೆ ಮಾಹಿತಿ ನೀಡಿದ ಡಿಎಸ್ಪಿ ಪ್ರವೀಣ್ ಸಿಂಗ್, ಭಾನುವಾರ ರಾತ್ರಿಯಿಂದ ವಿದ್ಯಾರ್ಥಿ ಖಿನ್ನತೆಗೆ ಒಳಗಾಗಿದ್ದ ಎಂದು ತಿಳಿಸಿದ್ದಾರೆ. ಸೋಮವಾರ ಹಾಸ್ಟೆಲ್ ಆವರಣದಲ್ಲಿ ಆತ ಕಾಣಿಸುತ್ತಿರಲಿಲ್ಲ. ಕೆಲವು ವಿದ್ಯಾರ್ಥಿಗಳು ಶಿವಂ ಪಾಂಡೆ ಹಾಸ್ಟೆಲ್ ರೂಂನೊಳಗೆ ಬೀಗ ಹಾಕಿಕೊಂಡು ಹೊರಗೆ ಬರುತ್ತಿಲ್ಲ ಎಂದು ಸಿಬ್ಬಂದಿಗೆ ಮಾಹಿತಿ ನೀಡಿದ ನಂತರ, ಬಾಗಿಲು ಒಡೆದ ನಂತರ ಶಿವಂ ಪಾಂಡೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅಲ್ಲದೆ, ಆತನ ಕೈಗಳನ್ನು ಕಟ್ಟಲಾಗಿತ್ತು ಎಂದು ಉನ್ನತ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: Shivamogga: ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಬ್ಬ ವಿದ್ಯಾರ್ಥಿ ಬಲಿ
ಹಾಸ್ಟೆಲ್ ಆವರಣಕ್ಕೆ ಭೇಟಿ ನೀಡಿದ ರಾಂಚಿ ಡಿಎಸ್ಪಿ ಪ್ರವೀಣ್ ಕುಮಾರ್ ಸಿಂಗ್ ಅವರು, ವಾರಾಣಾಸಿ ಮೂಲದ ಎರಡನೇ ವರ್ಷದ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿ ಸೋಮವಾರ ರಾತ್ರಿ 11.20 ರ ಸುಮಾರಿಗೆ ಶವವಾಗಿ ಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದಾರೆ. ವಿದ್ಯಾರ್ಥಿಯು ತನ್ನ ಕೋಣೆಯ ಒಳಗಿನಿಂದ ಪ್ರತಿಕ್ರಿಯೆ ನೀಡುತ್ತಿಲ್ಲ, ಬಾಗಿಲು ತೆಗೆಯುತ್ತಿಲ್ಲ ಎಂದು ಕೆಲವು ವಿದ್ಯಾರ್ಥಿಗಳು ತಿಳಿಸಿದ್ದರು ಎಂದು ಕಾಲೇಜಿನ ಉದ್ಯೋಗಿಗಳು ಹೇಳಿದ್ದಾರೆ. ನಂತರ, ರಾತ್ರಿ 11.20ರ ಸುಮಾರಿಗೆ ಸಿಬ್ಬಂದಿ ಬಾಗಿಲು ಒಡೆದ ಬಳಿಕ ಅವರ ಶವ ಪತ್ತೆಯಾಗಿದೆ ಎಂದು ಪ್ರವೀಣ್ ಕುಮಾರ್ ಸಿಂಗ್ ಹೇಳಿದ್ದಾರೆ.
ಆದರೆ, ಇದು ಆತ್ಮಹತ್ಯೆಯಲ್ಲ, ಕೊಲೆ ನಡೆದಿರಬಹುದು ಎಂದು ಮೃತ ವಿದ್ಯಾರ್ಥಿಯ ಕುಟುಂಬಸ್ಥರು ಆರೋಪಿಸಿದ್ದು, ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಕೋರಿದ್ದಾರೆ. ಶವ ಪತ್ತೆಯಾದಾಗ ಅವನ ಕೈಗಳನ್ನು ಕಟ್ಟಲಾಗಿತ್ತು ಎಂದು ಬೆಳಕಿಗೆ ಬಂದಿದೆ. ಜನವರಿ 15 ರಂದು ನಾವು ಮಾತನಾಡುವಾಗ ಅವನು ಸಾಮಾನ್ಯವಾಗೇ ಮಾತನಾಡಿದ್ದಾನೆ. ನಮಗೆ ನಿಷ್ಪಕ್ಷಪಾತ ತನಿಖೆ ಬೇಕು ಎಂದು ಅವರು ಹೇಳಿದರು. ಈ ಮಧ್ಯೆ, ಈ ಪ್ರಕರಣದ ಬಗ್ಗೆ ತನಿಖೆ ನಡೆಸಲು ಎಸ್‌ಐಟಿ ರಚಿಸಲಾಗಿದೆ ಎಂದು ರಾಂಚಿ ಗ್ರಾಮಾಂತರ ಎಸ್‌ಪಿ ನೌಶಾದ್ ಆಲಂ ಹೇಳಿದ್ದಾರೆ.
ಇದನ್ನೂ ಓದಿ: Kodagu: ನೇಣಿಗೆ ಶರಣಾದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ