20 ರುಪಾಯಿಗಾಗಿ ಉಂಟಾದ ಜಗಳದ ವೇಳೆ 3 ಗ್ರಾಹಕರು, ರಸ್ತೆ ಬದಿ ಇಡ್ಲಿ ಮಾರುವ ವೀರೇಂದ್ರ ಯಾದವ್| ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮೀರಾ ರಸ್ತೆಯಲ್ಲಿ ಘಟನೆ
ಮುಂಬೈ(ಫೆ.07): 20 ರುಪಾಯಿಗಾಗಿ ಉಂಟಾದ ಜಗಳದ ವೇಳೆ 3 ಗ್ರಾಹಕರು, ರಸ್ತೆ ಬದಿ ಇಡ್ಲಿ ಮಾರುವ ವೀರೇಂದ್ರ ಯಾದವ್ (26) ಎಂಬ ವ್ಯಕ್ತಿಯನ್ನೇ ಕೊಂದಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮೀರಾ ರಸ್ತೆಯಲ್ಲಿ ನಡೆದಿದೆ.
ಶುಕ್ರವಾರ ಬೆಳಿಗ್ಗೆ ಇಡ್ಲಿ ಅಂಗಡಿಗೆ ಬಂದ ಮೂವರು ಗ್ರಾಹಕರು ಬಾಕಿ ಇರುವ 20 ರು. ನೀಡುವಂತೆ ಕೇಳಿದ್ದಾರೆ. ಮಾಲಿಕ ಮತ್ತು ಗ್ರಾಹಕರ ನಡುವೆ ಮಾತಿಗೆ ಮಾತು ಬೆಳೆದು ಅದು ಜಗಳವಾಗಿ ಮಾರ್ಪಟ್ಟಿದೆ. ಈ ವೇಳೆ ಮೂವರು ಗ್ರಾಹಕರು, ಮಾಲಿಕ ವಿರೇಂದ್ರ ಯಾದವ್‌ನನ್ನು ಬಲವಾಗಿ ತಳ್ಳಿದ್ದಾರೆ.
ಕೆಳಗೆ ಬಿದ್ದ ಮಾಲಿಕ ಯಾದವ್ ತಲೆಗೆ ಪೆಟ್ಟು ಬಿದ್ದು ತೀವ್ರ ಗಾಯಗೊಂಡಿದ್ದ. ಅಂಗಡಿಯಲ್ಲಿದ್ದ ಇತರರು ಆಸ್ಪತ್ರೆಗೆ ಕೊಂಡೊಯ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಕೊಲೆ ಪ್ರಕರಣದಲ್ಲಿ ಮೂವರು ಅಪರಿಚಿತರ ವಿರುದ್ಧ ನಯಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
