ಬೆಂಗಳೂರು(ನ. 20)  ಬಿಡದಿ ಸ್ವಾಮೀಜಿ ನಿತ್ಯಾನಂದನಿಗೆ ಒಂದಾದ ಮೇಲೆ ಒಂದು ಕಂಟಕ ಎದುರಾಗುತ್ತಲಿದೆ. ನಿತ್ಯಾನಂದ ಆಶ್ರಮದಲ್ಲಿ ಯುವತಿಯರನ್ನು  ಒತ್ತೆಯಾಳಾಗಿ ಇರಿಸಿಕೊಂಡ ಪ್ರಕರಣದಕ್ಕೆ ಸಂಬಂಧಿಸಿ ಇಬ್ಬರು ನಿತ್ಯಾನಂದ ಶಿಷ್ಯೆಯರನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ. ಇದೇ ಸಂದರ್ಭದಲ್ಲಿ ವಿದೇಶಿ ಮಹಿಳೆಯೊಬ್ಬರು ಹಂಚಿಕೊಂಡ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ವಿದೇಶದಲ್ಲಿ ತಲೆಮರೆಸಿಕೊಂಡಿರುವ ಎ1 ಆರೋಪಿ ಸ್ವಾಮಿ ನಿತ್ಯಾನಂದ ಹೊರತುಪಡಿಸಿ 2ನೇ ಆರೋಪಿ ಸಾದ್ವಿ ಮಾಪ್ರಾಣಪ್ರಿಯ ಅಲಿಯಾಸ್ ಹರಿಣಿ ಚನ್ನಪ್ಪ, 3ನೇ ಆರೋಪಿ ನಿತ್ಯಾತತ್ವಪ್ರಿಯ ಅಲಿಯಾಸ್ ರವಿರಿದ್ದಿಕರಣ್ ಎಂಬುವರನ್ನು ಬಂಧಿಸಲಾಗಿದೆ.

ನಿತ್ಯಾನಿಗೆ ಶಿಷ್ಯನಿಂದಲೇ ಡಿಚ್ಚಿ

ಇನ್ನೊಂದು ಕಡೆ ವಿದೇಶಿ ಮಹಿಳೆಯೊಬ್ಬರು  ಶೇರ್ ಮಾಡಿಕೊಂಡಿರುವ ವಿಡಿಯೋ ಸದ್ದು ಮಾಡುತ್ತಿದೆ. ಕಾಮಿ ಸ್ವಾಮೀಜಿ ನಿತ್ಯಾನಂದ ನನ್ನ ಬ್ರೇನ್ ವಾಶ್ ಮಾಡುವ ಬಗ್ಗೆಯೂ ಹೇಳಿಕೊಂಡಿದ್ದಾರೆ.

ಜೆನ್ಯೂನನ್ ಎಂಬ ಮಹಿಳೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನಿತ್ಯಾನಂದನ ಆಶ್ರಮದಲ್ಲಿ ಅನೇಕ ವರ್ಷಗಳಿಂದ ಇದ್ದ ನಾಣು ಯಾವ ಕಾರಣಕ್ಕೆ ಆಶ್ರಮ ತೊರೆಯಬೇಕಾಯಿತು ಎಂಬುದನ್ನು ಹೇಳಿಕೊಂಡಿದ್ದಾರೆ. ಕೆನಡಾದಲ್ಲಿ ನಿತ್ಯಾನಂದ ನಡೆಸಿದ ಕರ್ಮಕಾಂಡಗಳ ಬಗ್ಗೆಯೂ ಹೇಳಿದ್ದಾರೆ.

ನಿತ್ಯಾನಂದ ಯಾವ ರೀತಿ ವ್ಯಕ್ತಿಗಳ ಮನಸ್ಸಿನ ಮೇಲೆ ಪರಿಣಾಮ ಬೀರಿ ಅವರನ್ನು ಸಮಾಜಘಾತುಕರನ್ನಾಗಿ ಸಿದ್ಧ ಮಾಡುತ್ತಾನೆ ಎಂಬುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ನಿತ್ಯಾನಂದ ಮತ್ತು ರಂಜಿತಾ ಪ್ರಕರಣದ ಬಗ್ಗೆಯೂ ಮಾತನಾಡಿದ್ದಾರೆ.

ದೇವರ ಹೆಸರಿನಲ್ಲಿ ನಿತ್ಯಾನಂದ ಮಾಡುವ ಆಟಾಟೋಪಗಳೇನು? ಜನರ ಮೇಲೆ ಪರಿಣಾಮ ಬೀರಲು ಆತ ಅನುಸರಿಸುವ ತಂತ್ರಗಳೇನು ಎಂಬುದನ್ನು ವಿದೇಶಿ ಮಹಿಳೆ ತೆರೆದಿಟ್ಟಿದ್ದು ಈಗ ಮತ್ತೆ ಸುದ್ದಿಯಾಗುತ್ತಿದೆ.

ಈಕ್ವೆಡಾರ್ ನಲ್ಲಿ ನಿತ್ಯಾನಂದ ಅಡಗಿ ಕುಳಿತಿದ್ದಾನೆ ಎನ್ನಲಾಗಿದೆ.  ಆಶ್ರಮದ ವಿರುದ್ಧ ಕೇಸ್ ದಾಖಲಾದರೂ ವಿದೇಶಕ್ಕೆ ನಿತ್ಯಾ ಹಾರಿದ್ದಾನೆ.  ಕಳೆದ ವರ್ಷ ನೇಪಾಳಕ್ಕೆ ತೆರಳಿ ಅಲ್ಲಿಂದ ನಕಲಿ ಪಾಸ್ ಪೋರ್ಟ್ ಮೂಲಕ ಪರಾರಿಯಾಗಿದ್ದಾನೆ ಎನ್ನಲಾಗಿದೆ.