ಬೆಂಗಳೂರು (ಆ.30):  ‘ಖ್ಯಾತ ಗಾಯಕ ರಘು ದೀಕ್ಷಿತ್‌ ಡ್ರಗ್ಸ್‌ ತೆಗೆದುಕೊಳ್ಳುತ್ತಾರೆ’ ಎಂದು ಚಿತ್ರೋದ್ಯಮಿ ಪ್ರಶಾಂತ್‌ ಸಂಬರಗಿ ಗಂಭೀರವಾಗಿ ಆರೋಪ ಮಾಡಿದ್ದು, ಇದನ್ನು ರಘು ದೀಕ್ಷಿತ್‌ ಬಲವಾಗಿ ತಳ್ಳಿ ಹಾಕಿದ್ದಾರೆ.

ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಸಂಬರಗಿ ಅವರು, ‘ಮಾದಕ ದ್ರವ್ಯ ಜಾಲ ಒಂದು ರೀತಿಯಲ್ಲಿ ಭಯೋತ್ಪಾದನೆ ಇದ್ದಂತೆ. ಇದಕ್ಕೆ ಕಡಿವಾಣ ಹಾಬೇಕಿದೆ. ಬೆಂಕಿ ಇಲ್ಲದೆ, ಹೊಗೆ ಆಡುವುದಿಲ್ಲ. ಚಿತ್ರರಂಗದಲ್ಲಿ ಕೆಲವರು ಮಾದಕ ವ್ಯಸನಿಗಳಾಗಿದ್ದಾರೆ’ ಎಂದು ನೇರವಾಗಿ ಆರೋಪ ಮಾಡಿ, ‘ರಘು ದೀಕ್ಷಿತ್‌ ಅವರು ಡ್ರಗ್‌ ಸೇವನೆ ಮಾಡುತ್ತಾರೆ’ ಎಂದು ಆರೋಪಿಸಿದ್ದರು.

ಡ್ರಗ್ಸ್‌ ಮಾಫಿಯಾ: ಸಂಗೀತ ನಿರ್ದೇಶಕನ ಮೇಲೆ ಚಿತ್ರೋದ್ಯಮಿಯಿಂದ ಗಂಭೀರ ಆರೋಪ

ಈ ಆರೋಪಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿರುವ ದೀಕ್ಷಿತ್‌, ‘ನನಗೂ ಸಂಬರಗಿ ಅವರಿಗೂ ಯಾವುದೇ ಸಂಬಂಧ ಇಲ್ಲ. ನಾನು ಚಿಕ್ಕ ತಂತ್ರಜ್ಞ. ಹೀಗಾಗಿ ನಾನು ಈಗ ಅವರ ಆರೋಪಕ್ಕೆ ಪ್ರತಿಯಾಗಿ ದ್ವೇಷ ಕಟ್ಟಿಕೊಂಡು ಸಮರ ಮಾಡುವುದಕ್ಕೆ ಸಮಯ ಇಲ್ಲ. ಆ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲ್ಲ. 

ಸ್ಯಾಂಡಲ್‌ವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ ಇಂದ್ರಜಿತ್ ಬಿಚ್ಚಿಟ್ಟ ರಹಸ್ಯ..!..

ನಾನು ಏನು, ನನ್ನ ವ್ಯಕ್ತಿತ್ವ ಎಂಥದ್ದು ಎಂಬುದು ನನ್ನ ಸ್ನೇಹಿತರು ಮತ್ತು ಹತ್ತಿರದವರಿಗೆ ಗೊತ್ತಿದೆ. ಆದರೆ ಆಧಾರ ರಹಿತವಾಗಿ ನನ್ನ ಹೆಸರು ಈ ಪ್ರಕರಣದಲ್ಲಿ ತೆಗೆದಿದ್ದು ಯಾಕೆ? ಯಾರ ಒತ್ತಡ ಮತ್ತು ಯಾವ ಕಾರಣಕ್ಕೆ ನನ್ನ ಹೆಸರು ಹೇಳಿದ್ದಾರೆ ಎಂಬುದನ್ನು ಪ್ರಶಾಂತ್‌ ಅವರೇ ಸ್ಪಷ್ಟನೆ ನೀಡಬೇಕು. ಅದೊಂದೇ ನನ್ನ ಬೇಡಿಕೆ. ಯಾಕೆಂದರೆ ಆರೋಪ ಮಾಡಿದವರೇ ವಿವರಣೆ ನೀಡುವ ಮೂಲಕ ವಾಸ್ತವ ತಿಳಿಸಬೇಕು’ ಎಂದು ಒತ್ತಾಯಿಸಿದ್ದಾರೆ.