Asianet Suvarna News Asianet Suvarna News

ಬೆಂಗಳೂರು ಆಯ್ತು ಹೈದರಾಬಾದ್..  ಮುಸ್ಲಿಂ ಯುವತಿಗೆ ಡ್ರಾಪ್ ಕೊಡ್ತಿದ್ದವನ ಮೇಲೆ ದಾಳಿ

* ಹೈದರಾಬಾದ್ ನಲ್ಲಿ ಬೆಂಗಳೂರಿನ ರೀತಿಯದ್ದೇ ಪ್ರಕರಣ
* ಮುಸ್ಲಿಂ ಯುವತಿಯೊಂದಿಗೆ ಬೈಕ್ ನಲ್ಲಿ ಇದ್ದವನ ಮೇಲೆ ದಾಳಿ
* ಕಾಲೇಜಿನ ಕೆಲಸಕ್ಕೆಂದು ಬಂದವರ ಮೇಲೆ ಹಲ್ಲೆಗೆ ಮುಂದಾದ ತಂಡ

Hyderabad mob targets Hindu man, burqa-clad woman on bike mah
Author
Bengaluru, First Published Sep 28, 2021, 9:48 PM IST
  • Facebook
  • Twitter
  • Whatsapp

ಹೈದರಾಬಾದ್(ಸೆ. 28)   ಬೆಂಗಳೂರಿನದ್ದೇ(Bengaluru) ರೀತಿಯ ಪ್ರಕರಣ ಹೈದರಾಬಾದ್(Hyderabad) ನಿಂದ ವರದಿಯಾಗಿದೆ. ಬುರ್ಖಾ ಧರಿಸಿದ್ದ ಮಹಿಳೆಗೆ ಡ್ರಾಪ್ ಕೊಡುತ್ತಿದ್ದ ಹಿಂದು ಯುವಕನ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ.  ಸೋಶಿಯಲ್ ಮೀಡಿಯಾದಲ್ಲಿ(Social Media)  ವಿಡಿಯೋ ವೈರಲ್ ಆದ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಂಗಳೂರಿನ ರೀತಿಯದ್ದೇ ಪ್ರಕರಣ.  ಬುರ್ಖಾ ಧರಿಸಿದ್ದ ಮಹಿಳೆಗೆ  ಬೈಕ್ ನಲ್ಲಿ ಡ್ರಾಪ್ ಕೊಡುತ್ತಿದ್ದ ಯುವಕನನ್ನು ತಡೆದ ತಂಡ ಪ್ರಶ್ನೆ ಮಾಡಿದೆ. ನಾವಿಬ್ಬರು ಗೆಳೆಯರು ಎಂದು ಬೈಕ್ ನಲ್ಲಿ ಇದ್ದವರು ಹೇಳಿದರು ದುಷ್ಕರ್ಮಿಗಳು ಅವರನ್ನು ಅಚಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಬೆಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ..

ನಾವಿಬ್ಬರೂ ಆಂಧ್ರ ಪ್ರದೇಶದವರು ಈ ನಗಗರದಲ್ಲಿ ವಾಸವಿಲ್ಲ ಎಂದು ಹೇಳಿದರೂ  ತಂಡ ಮಾತ್ರ ಕೇಳಿಲ್ಲ. ನಾಂಪಲ್ಲಿ ಪೋಲಿಸ್ ಸ್ಟೇಷನ್  ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಪುರುಷ ಮತ್ತು ಮಹಿಳೆ ನಗರದ ಕಾಲೇಜಿಗೆ ಕೆಲಸವೊಂದರ ನಿಮಿತ್ತ ತೆರಳಿದ್ದರು.  ಮಹಿಳೆಯ ಎಂಬಿಎ ಪ್ರವೇಶಕ್ಕಾಗಿ ಹೈದರಾಬಾದ್‌ಗೆ ಬಂದಿದ್ದರು. ಸುಮಾರು 22 ವರ್ಷ ವಯಸ್ಸಿನ ಇಬ್ಬರೂ ದೂರು ನೀಡಲು ನಿರಾಕರಿಸಿದ್ದಾರೆ ಎಂದು  ಪೊಲೀಸ್ ಅಧಿಕಾರಿ ಖಲೀಲ್ ಪಾಷಾ ತಿಳಿಸಿದ್ದಾರೆ.

ಬೈಕ್ ನಲ್ಲಿ ಇದ್ದ ಯುವಕ ಕೇಸರಿ ಬಣ್ಣದ ರಿಬ್ಬನ್ ಹಾಕಿಕೊಂಡಿದ್ದ ಕಾರಣ ದುಷ್ಕರ್ಮಿಗಳ ತಂಡ ಏಕಾಏಕಿ ನುಗ್ಗಿರಬಹುದು.  ಒಬ್ಬರಿಗೊಬ್ಬರು ತಾಗಿಕೊಳ್ಳುವಂತೆ ಯಾವ ಕಾರಣಕ್ಕೆ ಕುಳಿತುಕೊಂಡಿದ್ದೀರಿ ಎಂದು ದುಷ್ಕರ್ಮಿಗಳುದ ದಾಳಿ ಮಾಡಿ ಪ್ರಶ್ನೆ ಮಾಡಿದ್ದಾರೆ.

ಭಾನುವಾರ ಈ ಘಟನೆ ನಡೆದಿದೆ.  ನಾವು ವೀಡಿಯೊದಿಂದ ವಿವರಗಳನ್ನು ಸಂಗ್ರಹಿಸಿದ್ದೇವೆ. ಇದು ಸೂಕ್ಷ್ಮ ವಿಚಾರವಾದ್ದರಿಂದ ಹೆಚ್ಚಿನ ಮಾಹಿತಿ ಬಿಟ್ಟುಕೊಡಲು ಸಾಧ್ಯವಿಲ್ಲ. ನಾವು ಎಲ್ಲಾ ಕೋನಗಳಿಂದ ತನಿಖೆ ಮಾಡುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

 

 

Follow Us:
Download App:
  • android
  • ios