Tumakuru: ಗಂಡನಿಂದಲೇ ಹೆಂಡತಿ ಮಗು ಕೊಲೆ: ದೇವಸ್ಥಾನದ ಹಣ ಕದ್ದಿದ್ದಕ್ಕೆ ಕುಟುಂಬಕ್ಕೆ ತಟ್ಟಿತ್ತೆ ಶಾಪ
ಗಂಡನೇ ತನ್ನ ಹೆಂಡತಿ ಹಾಗೂ ನಾಲ್ಕು ವರ್ಷದ ಮಗುವಿಗೆ ಹಾರೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ ಭೀಕರ ಘಟನೆ ಮುಂಜಾನೆ ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ಮಾವಿನಹಳ್ಳಿ ಗ್ರಾಮದಲ್ಲಿ ನಡೆದಿದೆ.
ವರದಿ: ಮಹಂತೇಶ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ತುಮಕೂರು
ತುಮಕೂರು (ಅ.19): ಗಂಡನೇ ತನ್ನ ಹೆಂಡತಿ ಹಾಗೂ ನಾಲ್ಕು ವರ್ಷದ ಮಗುವಿಗೆ ಹಾರೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ ಭೀಕರ ಘಟನೆ ಮುಂಜಾನೆ ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ಮಾವಿನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮುಂಜಾನೆ ಪತ್ನಿ ಕಾವ್ಯ(25) ಪುತ್ರ ಜೀವನ್ ಮೇಲೆರಗಿದ ಆರೋಪಿ ಮೋಹನ್ ಅಲಿಯಾಸ್ ಸ್ವಾಮಿ (33) ಕೈ ಸಿಕ್ಕ ಹಾರೆಯಿಂದ ತನ್ನ ಪತ್ನಿ ಮಗುವಿನ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿದ್ದಾನೆ.
ರಕ್ತಸಿಕ್ತ ವಾಗಿ ಮನೆಯಲ್ಲಿ ಬಿದ್ದಿದ್ದ ಶವ ಕಂಡು ಇಡೀ ಗ್ರಾಮವೇ ಬೆಚ್ಚಿ ಬಿದ್ದಿದೆ. ಆರೋಪಿ ಸ್ವಾಮಿ ಪರಾರಿ ಆಗುವ ಮುನ್ನ ಸ್ಥಳೀಯರೇ ಹಿಡಿದು ಕಟ್ಟಿ ಹಾಕಿ ಚೇಳೂರು ಪೊಲೀಸರಿಗೆ ಒಪ್ಪಿಸಿದ್ದಾರೆ. ಗ್ರಾಮದಲ್ಲಿ ಅರ್ಚಕ ವೃತ್ತಿ ಮಾಡುತ್ತಿದ್ದ ಆರೋಪಿ ಕಳೆದ 6 ವರ್ಷದ ಹಿಂದೆ ಮಾವಿನಹಳ್ಳಿ ಗ್ರಾಮದ ಕರಿಯಮ್ಮ ದೇವಸ್ಥಾನದಲ್ಲಿ ಪೂಜೆ ಮಾಡ್ತಿದ ಆರೋಪಿ ಮೋಹನ್, ಕಳೆದ ಐದಾರು ವರ್ಷಗಳ ಹಿಂದೆ ಆ ದೇವಸ್ಥಾನದಲ್ಲಿ ಹಣ ಕದ್ದು ಸಿಕ್ಕಿಬಿದಿದ್ದ, ಗ್ರಾಮಸ್ಥರೆಲ್ಲಾ ಸೇರಿ ಆತನ ಬಳಿ ಮುಚ್ಚಳಿಕೆ ಪತ್ರ ಬರೆಸಿಕೊಂಡು ಪೊಲೀಸರಿಂದ ಬಿಡಿಸಿಕೊಂಡು ಬಂದಿದ್ರು.
ಕೆಪಿಟಿಸಿಎಲ್ ಕೇಸಲ್ಲಿ ಬೇಲ್ ಪಡೆದು ಹೊರಬಂದವ ಪಿಎಸ್‌ಐ ಕೇಸಲ್ಲಿ ಸೆರೆ!
ಅಂದಿನಿಂದ ಮೋಹನ್ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ, ಮದುವೆ ಮಾಡಿದ್ರೆ ತನ್ನ ಮಗ ಸರಿಹೋಗಬಹುದು ಅಂದುಕೊಂಡು ಮೋಹನ್‌ಗೆ ಮದುವೆ ಮಾಡಿಸಿದ್ದ ಮೋಹನ್ ತಂದೆ. ಮದುವೆಯಾದ್ರು ಸಹ ಮಾನಸಿಕ ಅಸ್ವಸ್ಥನಂತೆ ಆಡುತ್ತಿದ್ದ ಮೋಹನ್, ಪತ್ನಿ ಜೊತೆ ಹಾಗಾಗ ಜಗಳ ಮಾಡ್ತಿದ್ದ, ಹೀಗಾಗಿ ಮೋಹನ್ ಪತ್ನಿ 15 ದಿನ ಗಂಡನ ಮನೆಯಲ್ಲಿದ್ರೆ ಇನ್ನ 15 ದಿನ ತವರು ಮನೆಯಲ್ಲಿ ಇರ್ತಿದ್ದರು. ನಿನ್ನೆ ಕಾವ್ಯ ತವರು ಮನೆ ಚಿಕ್ಕನಾಯಕನಹಳ್ಳಿ ಯಿಂದ ಗಂಡನ ಮನೆಗೆ ಬಂದಿದ್ದರು.
ಛೇ ಇದೆಂಥಾ ಮೋಸ: ಮದುವೆ ಮಾಡಿಸುವ ನೆಪದಲ್ಲಿ ಕರೆತಂದು ಪ್ರೇಮಿಗಳ ಕೊಲೆ
ಇಂದು ಬೆಳ್ಳಂಬೆಳಗ್ಗೆ ಸುಖಾಸುಮ್ಮನೆ ಪತ್ನಿ ಜೊತೆ ಗಲಾಟೆ ತೆಗೆದಿದ್ದ ಮೋಹನ್, ಗಲಾಟೆ ವಿಕೋಪಕ್ಕೆ ತಿರುಗಿ ಪತ್ನಿ ಹಾಗೂ ಮಗುವಿಗೆ ಹಾರೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಅಲ್ಲದೆ ತಪ್ಪಿಸಿಕೊಂಡು ಓಡಿ ಹೋಗಲು ಯತ್ನಿಸಿದ ಮೋಹನ್‌ನನ್ನು ಗ್ರಾಮಸ್ಥರೇ ಹಗ್ಗದಿಂದ ಕೈ ಕಾಲು ಕಟ್ಟಿ ಹಾಕಿ ಪೊಲೀಸರಿಗೆ ಹಿಡಿದು ಒಪ್ಪಿಸಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿರುವ ಚೇಳೂರು ಪೊಲೀಸರು, ತನಿಖೆ ಮುಂದುವರೆಸಿದ್ದಾರೆ.