ಹೆಂಡತಿ ಮೇಲಿನ ಅನೈತಿಕ ಸಂಬಂಧದ ಶಂಕೆ.. ಪತ್ನಿ ಕತ್ತು ಕೊಯ್ದು ಭೀಕರ ಕೊ*: ಪತಿಯಿಂದ ಆತ್ಮಹ*ಗೆ ಯತ್ನ

ಗಂಡ ಹೆಂಡತಿ ಮತ್ತು 4 ವರ್ಷದ ಮಗು. ಸುಂದರವಾದ ಸಂಸಾರ..ದಂಪತಿ ತರಕಾರಿ ಹಾಗೂ ಸೊಪ್ಪು ವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ರು. ಆದ್ರೆ ಪತಿಗೆ ಪತ್ನಿ ಮೇಲೆ ಅನೈತಿಕ ಸಂಬಂಧದ ಅನುಮಾನ ಮೂಡಿದ್ದು ಘನಘೋರವೇ ನಡೆದು ಹೋಗಿದೆ. 

Husband Killed Wife Over Immoral Relationship At Bengaluru gvd

ಕಿರಣ್.ಕೆ.ಎನ್. ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು

ಬೆಂಗಳೂರು (ನ.06): ಗಂಡ ಹೆಂಡತಿ ಮತ್ತು 4 ವರ್ಷದ ಮಗು. ಸುಂದರವಾದ ಸಂಸಾರ. ದಂಪತಿ ತರಕಾರಿ ಹಾಗೂ ಸೊಪ್ಪು ವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ರು. ಆದ್ರೆ ಪತಿಗೆ ಪತ್ನಿ ಮೇಲೆ ಅನೈತಿಕ ಸಂಬಂಧದ ಅನುಮಾನ ಮೂಡಿದ್ದು ಘನಘೋರವೇ ನಡೆದು ಹೋಗಿದೆ. ರಸ್ತೆ ಮಧ್ಯೆ ಹೆಣವಾಗಿ ಬಿದ್ದುರುವ ಮಹಿಳೆ. ದೇಹದ ಸುತ್ತ ಹರಿದಿರುವ ರಕ್ತದ ಕೋಡಿ..ರಸ್ತೆಯುದ್ದಕ್ಕೂ ಚಿಮ್ಮಿರೊ ನೆತ್ತರು. ಮಹಿಳೆ‌ ಮೃತದೇಹ ಪಕ್ಕದಲ್ಲಿ ಕೂತಿರುವ ವ್ಯಕ್ತಿ ಕತ್ತಿನಿಂದ ಸೋರುತ್ತಿರುವ ರಕ್ತ..ಮೃತದೇಹದ ಸುತ್ತ ನೆರೆದಿರುವ ಪೊಲೀಸರು.. ಇದೆಲ್ಲವೂ ಇಲ್ಲಿ ನಡೆದಿರೊ ಭೀಕರತೆಯನ್ನೇ ಬಿಚ್ಚಿಡುತ್ತಿದೆ.

ನವೆಂಬರ್ 5 ರಂದು ರಾತ್ರಿ 9.30 ರಿಂದ 9.45 ರ ಸಮಯ..ಜೀವನ ಭೀಮಾಮಗರದ ಕುಳ್ಳಪ್ಪ ಕಾಲೋನಿಯ ರಸ್ತೆ. ಈ ರಸ್ತೆಯಲ್ಲಿ ಘನಘೋರವೇ ನಡೆದುಹೋಗಿತ್ತು. ಮಹಿಳೆಯೊಬ್ಬಳನ್ನ ವ್ಯಕ್ತಿ ಕತ್ತು ಕೊಯ್ದು ಭೀಕರವಾಗಿ ಕೊಂದು ತಾನು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಇದನ್ನ ಕಂಡ ಸ್ಥಳೀಯರು ಅಕ್ಷರಶಃ ಬೆಚ್ಚಿಬಿದ್ದಿದ್ರು. ಅಷ್ಟಕ್ಕು ಹೀಗೆ ಹೆಣವಾಗಿ ಬಿದ್ದವಳ ಹೆಸರು ಸಂಗೀತ. ಇನ್ನೂ ಈತ ನಾಗರಾಜ್ ಇಬ್ಬರು ಬೇರಾರು ಅಲ್ಲಾ ಪತಿ ಹಾಗೂ ಪತ್ನಿ. ಒಟ್ಟಿಗೆ ಸಂಸಾರ ಮಾಡಿಕೊಂಡಿದ್ದವರ ಮಧ್ಯೆ ದ್ವೇಷ ಬಿತ್ತಿದ್ದೇ ಅನೈತಿಕ ಸಂಬಂಧದ ಅನುಮಾನ..

ಹೌದು ಗಂಡ ಹೆಂಡತಿ ಇಬ್ಬರು ತರಕಾರಿ ಹಾಗೂ ಸೊಪ್ಪು ವ್ಯಾಪಾರ ಮಾಡಿಕೊಂಡಿದ್ರು. ದಂಪತಿಗೆ ನಾಲ್ಕು ವರ್ಷದ ಗಂಡು ಮಗು ಕೂಡ ಇದೇ ಹೀಗಿರಬೇಕಾದರೆ ಇತ್ತೀಚೆ ಪತ್ನಿ ಸಂಗೀತಾ ಮೇಲೆ ಪತಿ ನಾಗರಾಜ್ ಗೆ ಅನೈತಿಕ ಸಂಬಂಧದ ಅನುಮಾನ ಮೂಡಿದೆ ಇದೇ ವಿಚಾರವಾಗಿ ಆಗಾಗ ಗಲಾಟೆ ಕೂಡ ಆಗ್ತಾ ಇತ್ತು. ಆದ್ರೆ ನವಂಬರ್ 5 ರಂದು ತಮ್ಮ ಮುರುಗೇಶ್ ಪಾಳ್ಯ ಮನೆಯಿಂದ ಕುಳ್ಳಪ್ಪ ಕಾಲೋನಿಯ ತಮ್ಮ ಸಂಬಂಧಿಕರ ಮನೆಗೆ ಪತಿ ಪತ್ನಿ ಇಬ್ಬರು ಬಂದಿದ್ದಾರೆ. ಈ ವೇಳೆ ಮನೆಯಲ್ಲಿ ಶೌಚಾಲಯ ಇಲ್ಲದ ಕಾರಣ. ದೂರದಲ್ಲಿದ್ದ ಶೌಚಾಲಯಕ್ಕೆ ಪತ್ನಿ ಹೋಗಿ ವಾಪಸ್ಸಾಗಿದ್ದಾಳೆ ಅಷ್ಟೇ ಅಲ್ಲೇ ಮೃಗದಂತೆ ಎರಗಿದ ಪತಿ ನಾಗರಾಜ್ ಪತ್ನಿ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ.  ಆಕೆ ಪ್ರತಿರೋಧ ಒಡ್ಡಿದ್ದು ಮುಂಗೈ ಕಟ್ ಆಗಿದೆ.

ಮನುಷ್ಯತ್ವ ಇರುವ ಭಾವ ಜೀವಿಗಳಿಗಷ್ಟೇ ಕಣ್ಣೀರು ಬರುತ್ತೆ: ನಿಖಿಲ್ ಕುಮಾರಸ್ವಾಮಿ

ಬಳಿಕ ಪತಿಯನ್ನ ನೆಲಕ್ಕೆ ಕೆಡೆವಿ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿ ಬಳಿಕ ತಾನು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿ ಮೃತದೇಹ ಪಕ್ಕದಲ್ಲೇ ಕೂತಿದ್ದ ಸ್ಥಳಕ್ಕೆ ಬಂದ ಜೀವನ್ ಭೀಮಾನಗರ ಪೊಲೀಸರು ಆತನನ್ನ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಕೊಡಿಸಲಾಗ್ತಿದೆ..ಮೃತ ಸಂಗೀತ ಮೃತದೇಹವನ್ನು ಸಿ.ವಿ.ರಾಮನ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.. ಅದೇನೇ ಹೇಳಿ ಪತಿ ಪತ್ನಿ ಅಂದಮೇಲೆ ಗಲಾಟೆ ಸಾಮಾನ್ಯ ಆದ್ರೆ ಅದೇ ಗಲಾಟೆ ಕೊಲೆ ಹಂತಕ್ಕೆ ಹೋಗಿದ್ದು ನಿಜಕ್ಕು ವಿಪರ್ಯಾಸ. ತಾಯಿ ಸಾವನ್ನಪ್ಪಿದ್ದು ತಂದೆ ಜೈಲುಪಾಲಾದ್ರೆ ಏನು ಅರಿಯದ ನಾಲ್ಕು ವರ್ಷದ ಕಂದ ಅನಾಥವಾಗಿರೋದು ದುರಂತ.

Latest Videos
Follow Us:
Download App:
  • android
  • ios