ಗೋಕಾಕ: ಮಾರಕಾಸ್ತ್ರದಿಂದ ಕೊಚ್ಚಿ ಪತ್ನಿ ಕೊಲೆ, ಕಾರಣ?
* ಪದೇ ಪದೇ ಜಗಳವಾಡುತ್ತಿದ್ದ ಗಂಡ-ಹೆಂಡತಿ
* ಆರೋಪಿ ಪುಂಡಲೀಕ ಕೊತ್ತಲನ ಬಂಧನ
* ಈ ಕುರಿತು ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಗೋಕಾಕ(ಸೆ.01): ಹೊಲಕ್ಕೆ ಜಾನುವಾರುಗಳಿಗೆ ಮೇವು ತರಲು ಹೋದ ಹೆಂಡತಿ ತಡಮಾಡಿದ್ದಕ್ಕೆ ಗಂಡ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಘಟನೆ ತಾಲೂಕಿನ ಬೆಣಚಿನಮರ್ಡಿ ಗ್ರಾಮದಲ್ಲಿ ಸೋಮವಾರ ಜರುಗಿದೆ.
ನಿಂಗವ್ವ ಪುಂಡಲೀಕ ಕೊತ್ತಲ(45) ಕೊಲೆಯಾದ ಪತ್ನಿ. ನಿಂಗವ್ವ ಹಾಗೂ ಪತಿ ಪುಂಡಲೀಕ ನಡುವೆ ಕಳೆದ ಕೆಲ ವರ್ಷಗಳಿಂದ ವೈಮನಸ್ಸು ಉಂಟಾಗಿತ್ತು. ಹೀಗಾಗಿ ಪದೇ ಪದೇ ಜಗಳವಾಡುತ್ತಿದ್ದರು. ಸೋಮವಾರ ಮಧ್ಯಾಹ್ನ ಮೃತ ನಿಂಗವ್ವ ಜಾನುವಾರುಗಳಿಗೆ ಮೇವು ತರಲು ಹೊಲಕ್ಕೆ ಹೋಗಿದ್ದಳು. ಮೇವು ತರಲು ತಡವಾದ್ದರಿಂದ ಪತಿ ಪುಂಡಲೀಕ ಹೊಲಕ್ಕೆ ಹೋಗಿದ್ದು, ಪತ್ನಿ ನಿಂಗವ್ವ ಮೇವು ತರುತ್ತಿರುವುದನ್ನು ಕಂಡು ಇಷ್ಟೇಕೆ ತಡ ಮಾಡಿದ್ದಿಯಾ? ಎಂದು ಪ್ರಶ್ನಿಸಿದ್ದಾನೆ. ಪತಿ ಹಾಗೂ ಪತ್ನಿ ನಡುವೆ ವಾಕ್ಸಮರ ನಡೆದು ಪತ್ನಿ ನಿಂಗವ್ವಳನ್ನು ಮೇವು ತರಲು ಬಳಸುವ ಮಾರಕಾಸ್ತ್ರದಿಂದ ಕೊಚ್ಚಿ ಪತಿ ಪುಂಡಲೀಕ ಕೊಲೆ ಮಾಡಿದ್ದಾನೆ.
ಯುವಕನಿಗೆ ಆಂಟಿಯ ಕಾಮದ ರುಚಿ, ಹೈವೇ ರಸ್ತೆ: ಇಂಟ್ರಸ್ಟಿಂಗ್ ತನಿಖೆಯ ಕಹಾನಿ
ಈ ಕುರಿತು ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಪುಂಡಲೀಕ ಕೊತ್ತಲನನ್ನು ಬಂಧಿಸಿರುವದಾಗಿ ಪಿಎಸ್‌ಐ ನಾಗರಾಜ ಖಿಲಾರೆ ತಿಳಿಸಿದ್ದಾರೆ.