Bengaluru: ವರದಕ್ಷಿಣೆ ಕಿರುಕುಳ: ಬೆಂಗಳೂರಿನಲ್ಲಿ ಗಂಡನಿಂದಲೇ ಹೆಂಡತಿಯ ಕೊಲೆ!
ಗಂಡನೇ ಹೆಂಡತಿಯ ಕೊಲೆ ಮಾಡಿ ಆತ್ಮಹತ್ಯೆ ಎಂಬುವಂತೆ ಬಿಂಬಿಸಿದ್ದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ರೇಖಾ ಕೊಲೆಯಾದ ಮೃತ ದುರ್ದೈವಿ.
ಬೆಂಗಳೂರು (ಅ.05): ಗಂಡನೇ ಹೆಂಡತಿಯ ಕೊಲೆ ಮಾಡಿ ಆತ್ಮಹತ್ಯೆ ಎಂಬುವಂತೆ ಬಿಂಬಿಸಿದ್ದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ರೇಖಾ ಕೊಲೆಯಾದ ಮೃತ ದುರ್ದೈವಿ. ಯಲಹಂಕ ಉಪನಗರ 3_ನೇ ಹಂತದಲ್ಲಿ ಘಟನೆಯಾಗಿದ್ದು, ಸೈಟ್‌ನ ವಿಚಾರವಾಗಿ ಕೊಲೆ ಮಾಡಿರೋ ಆರೋಪ ಮಾಡಲಾಗಿದೆ. ಕೊಲೆ ಮಾಡಿದ ಬಳಿಕ ಸೀರೆಯಿಂದ ಫ್ಯಾನಿಗೆ ನೇಣು ಹಾಕಿರೋ ಪತಿ . ಕುಟುಂಬಸ್ಥರಿಗೆ ಅನುಮಾನಬಾರದ ಹಾಗೆ ನಾಟಕ ಆಡಲು ಮುಂದಾಗಿದ್ದ.
ಮದುವೆ ಆದಾಗಿನಿಂದಲೂ ಅಭಿರಾಮ್ ಹಣಕ್ಕಾಗಿ ಪೀಡಿಸುತ್ತಾ ಇದ್ದ. ಹಣ, ಒಡವೆ ಕೊಟ್ಟು ಅದ್ದೂರಿಯಾಗಿ ಕುಟುಂಬಸ್ಥರು ಮದುವೆ ಮಾಡಿದ್ದರು. ಆದ್ರೂ ಸೈಟ್ ತಗೋಬೇಕು ತವರು ಮನೆಯಿಂದ ಹಣ ತರುವಂತೆ ಒತ್ತಾಯ ಮಾಡುತ್ತಿದ್ದ. ಇದಕ್ಕೆ ರೇಖಾ ಒಪ್ಪದಿದ್ದಾಗ ಹಲವು ಬಾರಿ ಗಲಾಟೆ ಮಾಡಿ ಹಲ್ಲೆ ಮಾಡಿದ್ದ. ಸದ್ಯ ಮೃತದೇಹ ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಸದ್ಯ ಸಂತೋಷ್‌ನ ಯಲಹಂಕ ನ್ಯೂ ಟೌನ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಮಿಳ್ನಾಡಿನ 40 ಎಂಪಿ ಸೀಟಿಗಾಗಿ ರಾಜ್ಯವನ್ನೇ ಅಡವಿಟ್ಟ ಕಾಂಗ್ರೆಸ್: ಎಚ್.ಡಿ.ರೇವಣ್ಣ
ಅನೈತಿಕ ಸಂಬಂಧಕ್ಕಾಗಿ ಪತಿಯ ಕೊಲೆ: ಕಳೆದ 5 ದಿನದ ಹಿಂದೆ ದೇವಿಮನೆ ಘಟ್ಟ ಪ್ರದೇಶದಲ್ಲಿ ಪುರುಷನ ಮೃತದೇಹ ಪತ್ತೆ ಪ್ರಕರಣವನ್ನು ಕುಮಟಾ ಪೊಲೀಸರು ಭೇದಿಸಿದ್ದಾರೆ. ಇದೊಂದು ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ನಡೆದ ಕೊಲೆ ಪ್ರಕರಣವಾಗಿದ್ದು ಕೊಲೆಗೆ ಕಾರಣವಾದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬದಾಮಿ ತಾಲೂಕಿನ ಹೊಸೂರಿನ ನಿವಾಸಿ ಕುರಿಕಾಯುವ ಕೆಲಸ ಮಾಡುತ್ತಿದ್ದ ಬಶೀರಸಾಬ್ ರಾಜಾಸಾಬ್ ಸಂಕನೂರ (೩೨) ಕೊಲೆಯಾಗಿದ್ದ ವ್ಯಕ್ತಿ.
ಗದಗದ ಗಜೇಂದ್ರಗಡದ ಮುಸಿಗೇರಿ ನಿವಾಸಿಗಳಾದ ಪರಶುರಾಮ ಹನುಮಪ್ಪ ಮಾದರ(೨೩), ಬಸವರಾಜ (ಆದೇಶ) ಸಂಗಪ್ಪ ಕುಂಬಾರ(೩೫), ಬಾದಾಮಿಯ ತೆಮಿನಾಳದ ರವಿ ದಾನಪ್ಪ ಮಾದರ(೨೨), ಕೊಲೆಯಾದ ಬಶೀರಸಾಬನ ಪತ್ನಿ ರಾಜಮಾ ಬಸೀರಸಾಬ ಸಂಕನೂರ (೨೭) ಬಂಧಿತ ಆರೋಪಿಗಳು. ಬಶೀರಸಾಬ್‌ನ ಪತ್ನಿ ರಾಜಮಾ ಮತ್ತು ಆರೋಪಿ ಪರಶುರಾಮ ಮಧ್ಯೆ ಅನೈತಿಕ ಸಂಬಂಧವೇ ಕೊಲೆಗೆ ಕಾರಣ. ಇವರಿಬ್ಬರು ಸಂಚು ರೂಪಿಸಿ, ಪರಶುರಾಮನ ದೊಡ್ಡಮ್ಮನ ಮಗ ರವಿ ಮಾದರ ಹಾಗೂ ಮಂಗಳೂರಿನಲ್ಲಿದ್ದ ಸ್ನೇಹಿತ ಬಸವರಾಜ(ಆದೇಶ)ನ ಸಹಾಯ ಪಡೆದುಕೊಂಡಿದ್ದಾರೆ.
Haveri: ಸರ್ಕಾರಿ ಬಸ್ ಏರಿದ ಆಂಜನೇಯ: 30 ಕಿಲೋ ಮೀಟರ್ ಪ್ರಯಾಣಿಸಿದ ಕೋತಿ!
ಬಶೀರಸಾಬನಿಗೆ ಮಂಗಳೂರಿಗೆ ಕರೆದುಕೊಂಡು ಹೋಗಿ ಬೀಚ್ ಸುತ್ತಾಡಿಸಿ, ಬಳಿಕ ಮರಳಿ ಬರುವಾಗ ದೇವಿಮನೆ ಘಾಟ್‌ನ ಮಾಸ್ತಿಮನೆ ಕ್ಷೇತ್ರಪಾಲ ದೇವಸ್ಥಾನದ ಹತ್ತಿರ ಇಳಿದಿದ್ದಾರೆ. ದೇವಸ್ಥಾನದ ಹಿಂದುಗಡೆ ಹೋಗಿ ಅಲ್ಲಿ ಬಶೀರಸಾಬ್‌ನಿಗೆ ಸರಾಯಿ ಕುಡಿಸಿ ಪರಶುರಾಮ ಮತ್ತು ರವಿ ಸೇರಿಕೊಂಡು ಕಟ್ಟಿಗೆ ಬಡಿಗೆಯಿಂದ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿ ದೇವಸ್ಥಾನದ ಹಿಂದುಗಡೆ ಬಿಸಾಡಿ ಹೋಗಿರುವುದಾಗಿ ತನಿಖೆ ನಡೆಸಿದ ಕುಮಟಾ ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗದ ಮುಂದೆ ಹಾಜರುಪಡಿಸಲಾಗಿದೆ.