ಶೀಲ ಶಂಕಿಸಿ ಪತ್ನಿಯ ಕತ್ತು ಸೀಳಿ ಕೊಲೆಗೈದ ಗಂಡ| ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮಡ್ಲಾಕನಹಳ್ಳಿ ಗ್ರಾಮದಲ್ಲಿ ನಡೆದ ಘಟನೆ| ಈ ಸಂಬಂಧ ಹೊಸಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು| 

ಕೂಡ್ಲಿಗಿ(ಸೆ.03): ಶೀಲ ಶಂಕಿಸಿ ಪತ್ನಿಯ ಕತ್ತು ಸೀಳಿ ಕೊಲೆಗೈದಿರುವ ಘಟನೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮಡ್ಲಾಕನಹಳ್ಳಿ ಗ್ರಾಮದಲ್ಲಿ ನಿನ್ನೆ(ಬುಧವಾರ) ಜರುಗಿದೆ. ವನಜಾಕ್ಷಿ(20) ಎಂಬುವರೇ ಕೊಲೆ​ಯಾದ ಮಹಿ​ಳೆಯಾಗಿದ್ದಾಳೆ. 

ವನ​ಜಾಕ್ಷಿಯನ್ನು ಸಂಡೂರು ತಾಲೂಕಿನ ತೊಣಸಿಗೆರೆ ಗ್ರಾಮದ ತಿಪ್ಪೇಶಿ ಎಂಬುವನೊಂದಿಗೆ 5 ತಿಂಗಳ ಹಿಂದೆ ಮದುವೆ ಮಾಡಿಕೊಡಲಾಗಿತು. ಇತ್ತೀಚೆಗೆ ನಾಗರ ಪಂಚಮಿ ಹಬ್ಬಕ್ಕೆಂದು ತವರೂರು ಮಡ್ಲಾಕನಹಳ್ಳಿಗೆ ಪತಿಯೊಂದಿಗೆ ಬಂದಿದ್ದರು. ನಂತರ ಪತ್ನಿಯ ಶೀಲದ ಬಗ್ಗೆ ಅನುಮಾನ ಪಟ್ಟ ಗಂಡ ತಿಪ್ಪೇಶಿ ಬುಧವಾರ ಮನೆಯಲ್ಲಿ ಎಲ್ಲರು ಜಮೀನಿಗೆ ಹೋದಾಗ ಹೆಂಡತಿಯೊಂದಿಗೆ ಜಗಳವಾಡಿ ನಂತರ ಕತ್ತಿಯಿಂದ ಕತ್ತುಸೀಳಿ ಕೊಲೆಗೈದು ಪರಾರಿಯಾಗಿದ್ದಾನೆ. 

ಹಸಿರಾಗುತ್ತಿದೆ ತುಂಗಭದ್ರಾ ಜಲಾಶಯದ ನೀರು

ಈ ಸಂಬಂಧ ತಾಲೂಕಿನ ಹೊಸಹಳ್ಳಿ ಪೊಲೀಸ್‌ ಠಾಣೆಯಲ್ಲಿ ಮೃತಳ ತಂದೆ ವೀರಣ್ಣ ನೀಡಿದ ದೂರಿನಂತೆ ಬುಧವಾರ ಪ್ರಕರಣ ದಾಖಲಾಗಿದೆ.