ಗದಗ(ಡಿ.26): ಅನೈತಿಕ ಸಂಬಂಧದ ಶಂಕೆಯ ಹಿನ್ನಲೆಯಲ್ಲಿ ಪತಿ ತನ್ನ ಪತ್ನಿಯನ್ನೇ ಕೊಲೆ ಮಾಡಿದ ಘಟನೆ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಇಂದು(ಶನಿವಾರ) ನಡೆದಿದೆ. ರೇಖಾ ಹಳ್ಳಿಕೇರಿ ಎಂಬಾಕೆಯೇ ಕೊಲೆಯಾದ ದುರ್ದೈವಿ ಮಹಿಳೆಯಾಗಿದ್ದಾಳೆ. 

ಪರಶುರಾಮ ಹಳ್ಳಿಕೇರಿ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಲಕ್ಕುಂಡಿ ಗ್ರಾಮದ ಹೊರವಲಯದ ಹಳ್ಳದಲ್ಲಿ ಕುರಿ ಕಾಯಲು ತೆರಳಿದ್ದ ವೇಳೆಯಲ್ಲಿ ಪತ್ನಿ ರೇಖಾ ಹಳ್ಳಿಕೇರಿ ಮೇಲೆ ಪತಿ ಪರಶುರಾಮ ಹಳ್ಳಿಕೇರಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ.

ಪತಿ-ಪತ್ನಿ ಕಲಹ: ಅಳಿಯನ ಕೊಲೆಯಲ್ಲಿ ಅಂತ್ಯ

ಪತಿ ಹಲ್ಲೆ ಮಾಡಿದ್ದರಿಂದ ಪತ್ನಿ ರೇಖಾ ಹಳ್ಳಿಕೇರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಪರಶುರಾಮ ಹಾಗೂ ರೇಖಾ ದಂಪತಿಗಳಿಗೆ ಎರಡು ಸಣ್ಣ ಮಕ್ಕಳು ಇವೆ ಎಂದು ತಿಳಿದು ಬಂದಿದೆ. ಈ ಸಂಬಂಧ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.