Asianet Suvarna News Asianet Suvarna News

ಕುಡಿಯಲು ಹಣ ಕೊಡದ್ದಕ್ಕೆ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಹೊಡೆದು ಕೊಂದ ಪಾಪಿ!

ಕುಡಿಯುದಕ್ಕೆ ಹಣ ಕೊಡಲಿಲ್ಲವೆಂದು ಪತ್ನಿಯನ್ನೇ ಹೊಡೆದು ಕೊಂದಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಚಿಕ್ಕ ಉಪ್ಪೇರಿ ಗ್ರಾಮದಲ್ಲಿ ನಡೆದಿದೆ. ಸುನೀತಾ (28)ಹತ್ಯೆಯಾದ ಮಹಿಳೆ, ಪತಿ ಬಸವರಾಜ್ ಕೊಲೆಗೈದ ಆರೋಪಿ. 2015ರಲ್ಲಿ ಪರಸ್ಪರ ಪ್ರೀತಿಸಿ ಲಿಂಗಸಗೂರು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಯಾಗಿದ್ದ ದಂಪತಿ.

husband killed his wife for not paying money for drink at raichur rav
Author
First Published Nov 27, 2023, 12:19 PM IST

ರಾಯಚೂರು (ನ.27): ಕುಡಿಯುದಕ್ಕೆ ಹಣ ಕೊಡಲಿಲ್ಲವೆಂದು ಪತ್ನಿಯನ್ನೇ ಹೊಡೆದು ಕೊಂದಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಚಿಕ್ಕ ಉಪ್ಪೇರಿ ಗ್ರಾಮದಲ್ಲಿ ನಡೆದಿದೆ.

ಸುನೀತಾ (28)ಹತ್ಯೆಯಾದ ಮಹಿಳೆ, ಪತಿ ಬಸವರಾಜ್ ಕೊಲೆಗೈದ ಆರೋಪಿ. 2015ರಲ್ಲಿ ಪರಸ್ಪರ ಪ್ರೀತಿಸಿ ಲಿಂಗಸಗೂರು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಯಾಗಿದ್ದ ದಂಪತಿ. ಪ್ರೀತಿಸಿ ಮದುವೆಯಾಗಿದ್ದ ದಂಪತಿಗಳು, ಮದುವೆಯಾಗಿ‌ ಕೆಲ ದಿನಗಳ ಕಾಲ ಮಾತ್ರ ಸುಖಸಂಸಾರ ನಡೆಸಿದ್ದಾರೆ. ಕುಡಿತದ ಚಟಕ್ಕೆ ದಾಸನಾಗಿದ್ದ ಆರೋಪಿ ಬಸವರಾಜ್, ಕುಡಿದು ಬಂದು ದಿನನಿತ್ಯ ಪತ್ನಿಯೊಂದಿಗೆ ಗಲಾಟೆ ಮಾಡುತ್ತಿದ್ದ. ಕುಡಿಯುವುದಕ್ಕೆ ಹಣ ನೀಡುವಂತೆ ಪೀಡಿಸುತ್ತಿದ್ದ ಪತಿರಾಯ. ಎಷ್ಟು ದಿನಾಂತ ಕೊಟ್ಟಾಳು? ಕೂಲಿ ಮಾಡಿ ಕೂಡಿಟ್ಟ ಹಣವೆಲ್ಲ ಗಂಡ ಬಸವರಾಜನ ಕುಡಿತಕ್ಕೆ ಹೋಗುತ್ತಿದ್ದರಿಂದ ಸಂಸಾರ ನಡೆಸುವುದೇ ಕಷ್ಟವಾಗಿದೆ. 

ರಾಷ್ಟ್ರೀಯ ರನ್ನಿಂಗ್ ರೇಸ್ ಸೋಲು; ಪುತ್ತೂರಿನ ವಿದ್ಯಾರ್ಥಿನಿ ಆತ್ಮಹತ್ಯೆ !

ಎಂದಿನಂತೆ ನಿನ್ನೆ ಸಂಜೆಯೂ ಸಹ ಜಮೀನಿನಲ್ಲಿ ಬೆಳೆಗೆ ನೀರು ಕಟ್ಟುವಾಗ ಇಬ್ಬರ ನಡುವೆ ಗಲಾಟೆಯಾಗಿದೆ. ಜಮೀನಿನಲ್ಲಿ ಕುಡಿಯುವುದಕ್ಕೆ ಹಣ ಕೊಡುವಂತೆ ಪತ್ನಿಯೊಂದಿಗೆ ಜಗಳಕ್ಕಿಳಿದಿರುವ ಪತಿ. ಈ ವೇಳೆ ಹಣ ಕೊಡಲು ಒಪ್ಪದ್ದಕ್ಕೆ ಇಬ್ಬರ ನಡುವೆ ಜಮೀನಿನಲ್ಲಿ ಜಗಳವಾಗಿದೆ ಈ ವೇಳೆ ಕೋಪಗೊಂಡು ಪತ್ನಿಯನ್ನ ಹತ್ಯೆ ಮಾಡಿರುವ ಆರೋಪಿ ಬಸವರಾಜ್

ಸದ್ಯ ಪ್ರಕರಣ ಸಂಬಂಧ ಲಿಂಗಸಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಖದೀಮರು ಹೇಗೆಲ್ಲ ವಂಚನೆ ಮಾಡ್ತಾರೆ ನೋಡಿ; ಸಾಲ ಕೊಡಿಸೋದಾಗಿ ನಂಬಿಸಿ ಉದ್ಯಮಿಗೆ ಬರೋಬ್ಬರಿ ₹2.40 ಕೋಟಿ ಟೋಪಿ!

Follow Us:
Download App:
  • android
  • ios