Asianet Suvarna News Asianet Suvarna News

ಮೈಸೂರು: ಕುಡಿದ ಮತ್ತಿನಲ್ಲಿ ಬ್ಲೇಡ್‌ನಿಂದ ಕತ್ತು ಕೊಯ್ದು ಗರ್ಭಿಣಿ ಪತ್ನಿ ಕೊಂದ ಗಂಡ..!

ಕುಡಿದ ಮತ್ತಿನಲ್ಲಿ ಬ್ಲೇಡ್‌ನಿಂದ ಕತ್ತು ಕೊಯ್ದು ಶೋಭಾಳನ್ನ ಕೊಲೆ ಮಾಡಿದ್ದಾನೆ. ಗರ್ಭಿಣಿ ಹೆಂಡತಿಯನ್ನ ಕೊಂದ ಮಂಜುನನ್ನ ಪೊಲೀಸರ ವಶಕ್ಕೆ ಪಡೆದಿದ್ದಾರೆ. 

Husband Killed His Wife at Nanjangud in Mysuru grg
Author
First Published Sep 15, 2023, 8:55 AM IST

ಮೈಸೂರು(ಸೆ.15):  ಗರ್ಭಿಣಿ ಪತ್ನಿಯನ್ನ ಪತಿ ಕೊಂದ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ಸಮೀಪದ ಚಾಮಲಾಪುರ ಹುಂಡಿಯಲ್ಲಿ ನಡೆದಿದೆ. ಶೋಭಾ (26) ಎಂಬಾಕೆಯೇ ಮೃತ ದುರ್ದೈವಿ.  

ಮಂಜು (27) ಅಲಿಯಾಸ್ ಮಂಜುನಾಥ್ ಹೆಂಡತಿಯನ್ನೇ ಕೊಲೆಗೈದ ಆರೋಪಿಯಾಗಿದ್ದಾನೆ. ಕುಡಿದ ಮತ್ತಿನಲ್ಲಿ ಬ್ಲೇಡ್‌ನಿಂದ ಕತ್ತು ಕೊಯ್ದು ಶೋಭಾಳನ್ನ ಕೊಲೆ ಮಾಡಿದ್ದಾನೆ. ಗರ್ಭಿಣಿ ಹೆಂಡತಿಯನ್ನ ಕೊಂದ ಮಂಜುನನ್ನ ಪೊಲೀಸರ ವಶಕ್ಕೆ ಪಡೆದಿದ್ದಾರೆ. 

ಗಂಡ ಹೆಂಡತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ತವರು ಮನೆಯಿಮದ ಹಣ ತರುವಂತೆ ಶೋಭಾಳಿಗೆ ಪೀಡಿಸುತ್ತಿದ್ದನು. ಶೋಭಾ ಮಂಜು 8 ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಐದು ವರ್ಷದ ಗಂಡು ಮಗುವಿದ್ದು, ತುಂಬು ಗರ್ಭಿಣಿಯಾಗಿದ್ದ ಶೋಭಾ.

ಚಾಮರಾಜನಗರ: ಹೆಂಡ್ತಿ, ಇಬ್ಬರು ಮಕ್ಕಳನ್ನ ನೇಣು ಬಿಗಿದು ಕೊಲೆ ಮಾಡಿದ್ನಾ ಪಾಪಿ ಗಂಡ..?

ಹೆರಿಗೆಯ ಆರೈಕೆಗಾಗಿ ಶೋಭಾ ತವರು ಮನೆಗೆ ಬಂದಿದ್ದಳು. ತವರು ಮನೆಯಿಂದ ಗಂಡನ ಮನೆಗೆ ಪತ್ನಿ ಬರುತ್ತಿಲ್ಲವೆಂದು ಮಂಜು ಜಗಳ ತೆಗೆದಿದ್ದಾನೆ. ಈ ವೇಳೆ ಬ್ಲೇಡ್‌ನಿಂದ ಕುತ್ತಿಗೆ ಕೊಯ್ದುದಿದ್ದಾನೆ. ತಕ್ಷಣ ಶೋಭಾರನ್ನ ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸದೆ ತುಂಬು ಗರ್ಭಿಣಿ ಶೋಭಾ ಸಾವನ್ನಪ್ಪಿದ್ದಾರೆ. ಈ ಸಂಬಂಧ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Follow Us:
Download App:
  • android
  • ios