Asianet Suvarna News Asianet Suvarna News

ಕೌಟುಂಬಿಕ ದೌರ್ಜನ್ಯದ ದೂರು ಹಿಂಪಡೆಯಲು ನಕಾರ: ಪತ್ನಿಗೆ ಟಾಯ್ಲೆಟ್ ಕ್ಲೀನರ್ ಕುಡಿಸಿದ ಪತಿ

ಪತಿ ತಮ್ಮ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾನೆ ಎಂದು 32 ವರ್ಷದ ಮಹಿಳೆ ಆರೋಪಿಸಿದ್ದಾರೆ. ರಾನಿಪ್ ಪೊಲೀಸ್ ಠಾಣೆಯಲ್ಲಿ, ಘಟನೆಯ ಬಗ್ಗೆ ಎಫ್‌ಐಆರ್ ದಾಖಲಿಸಲಾಗಿದೆ, ಇದರಲ್ಲಿ ಮಹಿಳೆ ತನ್ನ ಪತಿ ತನ್ನ ನಗ್ನ ಛಾಯಾಚಿತ್ರಗಳನ್ನು ಕ್ಲಿಕ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. 

Husband forces wife to drink toilet cleaner for not withdrawing domestic violence complaint against him in Ahmedabad mnj
Author
Bengaluru, First Published Aug 8, 2022, 6:37 PM IST

ಅಹಮದಾಬಾದ್ (ಆ. 08):  ತನ್ನ ವಿರುದ್ಧ ದಾಖಲಾದ ಕೌಟುಂಬಿಕ ಹಿಂಸಾಚಾರದ ದೂರನ್ನು ಹಿಂಪಡೆಯಲು ನಿರಾಕರಿಸಿದ ಪತ್ನಿಗೆ  ಪತಿ ಟಾಯ್ಲೆಟ್ ಕ್ಲೀನರ್ (ಹಾರ್ಪಿಕ್) ಕುಡಿಯುವಂತೆ ಒತ್ತಾಯಿಸಿದ ಭೀಕರ ಘಟನೆ ಗುಜರಾತಿನ ಅಹಮದಾಬಾದ್‌ನಲ್ಲಿ ನಡೆದಿದೆ. ಪತಿ ತನ್ನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾನೆ ಎಂದು 32 ವರ್ಷದ ಮಹಿಳೆ ಆರೋಪಿಸಿದ್ದಾರೆ. ಈ ಸಂಬಂಧ ರಾನಿಪ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಅಲ್ಲದೇ ಪತಿ ತಮ್ಮ ನಗ್ನ ಛಾಯಾಚಿತ್ರಗಳನ್ನು ಕ್ಲಿಕ್ ಮಾಡಿದ್ದಾರೆ ಎಂದು ಪತ್ನಿ ಆರೋಪಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. 

ದಂಪತಿಗಳಿಬ್ಬರಿಗೂ ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಪರಿಚಯವಾಗಿತ್ತು ಮತ್ತು ಮಹಿಳೆ ಕಳೆದ ವರ್ಷ ಆರೋಪಿಯನ್ನು ವಿವಾಹವಾಗಿದ್ದರು. ವೈವಾಹಿಕ ವಿವಾದಗಳ ಕಾರಣದಿಂದ ಮಹಿಳೆ ತಮ್ಮ ಹಿಂದಿನ ಪತಿಗೆ ವಿಚ್ಛೇದನ ನೀಡಿದ್ದರು. ಮಹಿಳೆ ತಮ್ಮ ಹಿಂದಿನ ಮದುವೆಯಿಂದ ಈಗಾಗಲೇ ಮಗುವನ್ನು ಹೊಂದಿದ್ದರು. ಅವರನ್ನು 2009 ರಲ್ಲಿ ವಿವಾಹವಾಗಿದ್ದರು. ವಿಚ್ಛೇದನದ ನಂತರ, ಮಹಿಳೆ ತಮ್ಮ 11 ವರ್ಷದ ಮಗುವಿನ ಪಾಲನೆ ಮುಂದುವರೆಸಿದ್ದರು. 

ತಮ್ಮ ಹಿಂದಿನ ಪತಿಯಿಂದ ಬೇರ್ಪಟ್ಟ ನಂತರ ಮಹಿಳೆ ಮಗ ಮತ್ತು ತಾಯಿಯೊಂದಿಗೆ ನಿರ್ಣಯನಗರ ಪ್ರದೇಶದಲ್ಲಿ ವಾಸಿಸುತ್ತಿದ್ದರು. ದಂಪತಿಗಳು ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಆರೋಪಿಯನ್ನು ಭೇಟಿಯಾದರು, ನಂತರ ಅವರು ಪರಸ್ಪರ ವಿವಾಹವಾಗಿ ಆರೋಪಿ 11 ವರ್ಷದ ಮಗನನ್ನು ಕಾನೂನುಬದ್ಧವಾಗಿ ದತ್ತು ಸಹ ಪಡೆದಿದ್ದರು.

ಗೆಳೆಯನ ಕಾರಿನಲ್ಲಿ ಬಂದಿಳಿದ ಹೆಂಡತಿ, ಸಂಬಂಧ ಕಲ್ಪಿಸಿ ಮರಕ್ಕೆ ಕಟ್ಟಿ ಥಳಿಸಿದ ಪತಿ!

ಆರೋಪಿ ತಮ್ಮ ಮದುವೆಯಾದ ಕೆಲವೇ ದಿನಗಳಲ್ಲಿ ಮಹಿಳೆಯಿಂದ ಹಣಕ್ಕಾಗಿ ಬೇಡಿಕೆಯಿಡಲು ಪ್ರಾರಂಭಿಸಿದರು ಎನ್ನಲಾಗಿದೆ.  ಇದು ದಂಪತಿಗಳ ನಡುವೆ ಹಲವಾರು ವಾದ ವಿವಾದಗಳಿಗೆ ಕಾರಣವಾಯಿತು. ಈ ಸಂಬಂಧ ಮಹಿಳೆ ತಮ್ಮ ಅತ್ತೆಯೊಂದಿಗೆ ಜಗಳವಾಡಿದ್ದು ಅಂತಿಮವಾಗಿ, ದಂಪತಿಗಳು ನರೋಡಾಕ್ಕೆ ಹೋಗಲು ನಿರ್ಧರಿಸಿದರು ಮತ್ತು ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದರು. ಪ್ರತ್ಯೇಕವಾಗಿ ಸ್ಥಳಾಂತರಗೊಂಡ ನಂತರ, ಆರೋಪಿ ಮಹಿಳೆ ಮೇಲೆ ದೈಹಿಕವಾಗಿ ಹಲ್ಲೆ ಮಾಡಲು ಪ್ರಾರಂಭಿಸಿದ್ದ ಎಂದು ಆರೋಪಿಸಲಾಗಿದೆ. 

Follow Us:
Download App:
  • android
  • ios