Asianet Suvarna News Asianet Suvarna News

ಗೆಳೆಯನ ಕಾರಿನಲ್ಲಿ ಬಂದಿಳಿದ ಹೆಂಡತಿ, ಸಂಬಂಧ ಕಲ್ಪಿಸಿ ಮರಕ್ಕೆ ಕಟ್ಟಿ ಥಳಿಸಿದ ಪತಿ!

ತಾಯಿ ಮನೆಯಿಂದ ಹಿಂತಿರುಗಿ ಬರುವ ವೇಳೆ ಬಸ್‌ಗಾಗಿ ಕಾದು ಕಾದು ಸುಸ್ತಾಗಿದ್ದಾಗಿ ಪತಿಯ ಗೆಳೆಯನ ಕಾರು ಬಂದಿದೆ. ಹತ್ತಿಕೊಂಡು ಬಂದ ಈಕೆ ವಿರುದ್ಧ ಗಂಡ ಕೆರಳಿ ಕೆಂಡವಾಗಿದ್ದಾನೆ. ಪತ್ನಿಯನ್ನು ಮರಕ್ಕೆ ಕಟ್ಟಿ ಹಾಕಿ ಅಮಾನುಷವಾಗಿ ಹಲ್ಲೆ ಮಾಡಿದ್ದಾನೆ. ಇದೀಗ ಪೊಲೀಸರ ಎದುರು ಇದು ನಮ್ಮ ಫ್ಯಾಮಿಲಿ ಮ್ಯಾಟರ್ ಎಂದು ವಾದಿಸಿದ್ದಾನೆ.

Wife came back home with friend car husband tied to a tree and beat her fiercely rajasthan ckm
Author
Bengaluru, First Published Jul 30, 2022, 8:03 PM IST

ರಾಜಸ್ಥಾನ(ಜು.30):  ಮಾನವ ಸಮಾಜವೇ ತಲೆ ತಗ್ಗಿಸುವ ಘಟನೆ ರಾಜಸ್ಥಾನದ ಬನ್ಸವಾರ ಜಿಲ್ಲೆಯಲ್ಲಿ ನಡೆದಿದೆ. ತವರಿಗೆ ಹೋಗಿದ್ದ ಪತ್ನಿ ಮರಳಿ ಬರುವಾಗ ಗೆಳೆಯನ ಕಾರಿನಲ್ಲಿ ಬಂದಿದ್ದಾಳೆ ಅನ್ನೋ ಕಾರಣಕ್ಕೆ ಮರಕ್ಕೆ ಕಟ್ಟಿ ಹಾಕಿ ಥಳಿಸಿದ ಘಟನೆ ನಡೆದಿದೆ. ಪತಿಯ ಥಳಿತದಿಂದ ಪತ್ನಿ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ದಾಖಲಾಗಿದ್ದರೆ, ಇತ್ತ ಪತಿ ಹಾಗೂ ಪತಿಯ ಕುಟುಂಬಸ್ಥರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.   ಪೊಲೀಸರ ಬಳಿ ಇದು ನಮ್ಮ ಕುಟುಂಬದ ವಿಚಾರ, ಇದರಲ್ಲಿ ಯಾರೂ ತಲೆ ಹಾಕಬಾರದು ಎಂದು ವಾದಿಸಿದ್ದಾನೆ.  ಖಮೇರಾ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯಾಗಿರುವ ಚಾಲಕ ದೇವಿಲಾಲ್ ಪತ್ನಿ ತಾಯಿ ಮನೆಗೆ ಹೋಗಿದ್ದಾರೆ. ಒಂದೆರೆಡು ದಿನ ತಾಯಿ ಮನೆಯಲ್ಲಿ ಇದ್ದು ಮರಳಿ ಬಂದಿದ್ದರೆ. ಆದರೆ ಮರಳಿ ಬರುವಾಗ ಬಸ್ ನಿಲ್ದಾಣದಲ್ಲಿ ಹಲವು ಹೊತ್ತು ಕಾದಿದ್ದಾರೆ. ಆದರೆ ಬಸ್ ಬರಲೇ ಇಲ್ಲ. ಇದೇ ವೇಳೆ ಗೆಳೆಯನ ಪತ್ನಿಯನ್ನು ಬಸ್ ನಿಲ್ದಾಣದಲ್ಲಿ ನೋಡಿದ ವ್ಯಕ್ತಿ ಕಾರಿನಲ್ಲಿ ಹತ್ತಿಸಿಕೊಂಡು ಬಂದು ಗೆಳೆಯನ ಮನೆಗೆ ಬಿಟ್ಟಿದ್ದಾನೆ. ಇಷ್ಟೇ ನೋಡಿ. ಪತಿಯ ಮನೆಯಲ್ಲಿ ಭಾರಿ ರಾದ್ದಾಂತವೇ ನಡೆದಿದೆ. 

 ಮಗನ ಗೆಳೆಯನ ಕಾರಿನಲ್ಲಿ ಬಂದಿಳಿದ ಸೊಸೆಯನ್ನು ನೋಡಿದ ಪತಿ ಕುಟುಂಬಸ್ಥರು ಅನುಮಾನಗೊಂಡಿದ್ದಾರೆ. ಸೊಸೆಗೆ ಗೆಳೆಯನ ಜೊತೆಗೆ ಅವಿವಾಹಿಕ ಸಂಬಂಧವಿದೆ ಎಂದು ಭಾವಿಸಿದ್ದಾರೆ. ಇಷ್ಟೇ ಅಲ್ಲ ಈ ವಿಚಾರವನ್ನು ಕೆಲಸಕ್ಕೆ ತೆರಳಿದ್ದ ಮಗನಿಗೆ ಹೇಳಿದ್ದಾರೆ. ಇದರಿಂದ ಕೆರಳಿದ ಪತಿ ತಕ್ಷಣವೇ ಮನೆಗೆ ಹಿಂತಿರುಗಿದ್ದಾನೆ. ಪತಿಯನ್ನು ಹೊರಗಡೆ ಕರೆದು ಮರಕ್ಕೆ ಕಟ್ಟಿ ಹಾಕಿದ್ದಾನೆ. ಬಳಿಕ ಕೋಲಿನಿಂದ ತೀವ್ರವಾಗಿ ಥಳಿಸಿದ್ದಾನೆ. ಅದೆಷ್ಟೇ ಬೇಡಿದರೂ ಪತಿಯ ಮನಸ್ಸು ಕರಗಿಲ್ಲ. ತನ್ನ ಮಾತು ಕೇಳುವಂತೆ ಪರಿಪರಿಯಾಗಿ ಕೇಳಿಕೊಂಡಿದ್ದಾಳೆ. ಆದರೆ ಯಾವುದನ್ನೂ ಕೇಳಿಸಿಕೊಳ್ಳದ ಪತಿ ಥಳಿಸಿದ್ದಾನೆ.

 

ಪತಿ ಗರ್ಲ್ ಫ್ರೆಂಡನ್ನು ಮನೆಗೆ ಕರೆದದ್ದೇ ತಪ್ಪಾಯ್ತು

ಪತಿಯ ಥಳಿತಕ್ಕೆ ಪತ್ನಿ ತೀವ್ರ ಅಸ್ವಸ್ಥಗೊಂಡಿದ್ದಾಳೆ. ಕುಸಿದ ಬಿದ್ದ ಪತ್ನಿಯನ್ನು ಪಕ್ಕದ ಮನೆಯರು ಆಸ್ಪತ್ರೆ ದಾಖಲಿಸಿದ್ದಾಳೆ. ಈ ವೇಳೆ ಆಸ್ಪತ್ರೆಯಲ್ಲಿ ಹತ್ತಿರದ ಮನೆಯವರು ನಡೆದ ವಿಚಾರ ಹೇಳಿದ್ದಾರೆ. ಆಸ್ಪತ್ರೆ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆಸ್ಪತ್ರೆ ಆಗಮಿಸಿ ದೂರು ದಾಖಲಿಸಿಕೊಂು ತನಿಖೆ ಆರಂಭಿಸಿದ್ದಾರೆ. ಸುಖಾಸುಮ್ಮನೆ ಅನುಮಾನಗೊಂಡು ತೀವ್ರವಾಗಿ ಥಳಿಸಿದ ಕಾರಣಕ್ಕೆ ಪತಿ ದೇವಿಲಾಲ್ ಹಾಗೂ ಮನೆಯರ ವಿರುದ್ಧ ದೂರು ದಾಖಲಾಗಿದೆ. ಪತಿ ಸೇರಿದಂತೆ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆದ ಮೊಬೈಲ್ ದೃಶ್ಯವನ್ನೂ ಕಲೆಹಾಕಿದ್ದಾರೆ.

 

ಪತ್ನಿ ಇನ್ನೊಬ್ಬನಿಗೆ ಮುತ್ತಿಟ್ಟರೂ ಪ್ರಶ್ನಿಸದ ಪತಿ

ಪೊಲೀಸ್ ವಿಚಾರಣೆ ವೇಳೆ ಇದು ತಮ್ಮ ಮನೆಯ ವಿಚಾರ. ಪತ್ನಿ ತಪ್ಪು ಮಾಡಿದ್ದಕ್ಕೆ ಹೊಡೆದಿದ್ದೇನೆ. ಪೊಲೀಸರು ಈ ವಿಚಾರ ಇಲ್ಲಿಗೆ ಬಿಡಲು ವಾದಿಸಿದ್ದಾನೆ. ದೇವಿಲಾಲ್ ಮೊಂಡುವಾದಕ್ಕೆ ಪೊಲೀಸರು ತಕ್ಕ ಉತ್ತರ ನೀಡಿದ್ದಾರೆ. ಸತತ 7 ಗಂಟೆ ಪತ್ನಿಯನ್ನು ಕಟ್ಟಿ ಹಾಕಿ ಥಳಿಸಿದ ದೇವಿಲಾಲ್ ಇದೀಗ ಕಂಬಿ ಎಣಿಸುತ್ತಿದ್ದಾನೆ.

Follow Us:
Download App:
  • android
  • ios