Asianet Suvarna News Asianet Suvarna News

ತುಮಕೂರು: ಹೆಂಡ್ತಿ ಕಾಟಕ್ಕೆ ತಾಳಲಾರದ ನಮ್ಮ ಮೆಟ್ರೋ ಎಂಜಿನಿಯರ್ ಸಾವಿಗೆ ಶರಣು

ಗಂಡ ಹೆಂಡತಿ ನಡುವೆ ಹೊಂದಾಣಿಕೆ ಇಲ್ಲದೆ ಪದೇ ಪದೇ ಗಲಾಟೆ ಆಗ್ತಿತ್ತು. ಮದುವೆಯಾದ ಬಳಿಕ ಪತಿ ಮಂಜುನಾಥ್‌ಗೆ ಪತ್ನಿ ಪ್ರಿಯಾಂಕಾ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.

Husband Committed Suicide Due to Wife Harassment in Tumakuru grg
Author
First Published Sep 15, 2023, 11:48 AM IST

ತುಮಕೂರು(ಸೆ.15):  ಪತ್ನಿಯ ಕಾಟ ತಾಳಲಾರದೆ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರು ಜಿಲ್ಲೆ ಕೆ.ಬಿ ಕ್ರಾಸ್ ಬಳಿಯ ಕುಂದೂರು ಪಾಳ್ಯದಲ್ಲಿ ನಿನ್ನೆ(ಗುರುವಾರ) ನಡೆದಿದೆ. ಮಂಜುನಾಥ್ (38) ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಮೃತ ದುರ್ದೈವಿ.

ಮೃತ ಮಂಜುನಾಥ್ ಬೆಂಗಳೂರಿನ ಬಿಎಂಆರ್ ಸಿಎಲ್‌ನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಕಳೆದ 10 ವರ್ಷಗಳ ಹಿಂದೆ ತುರುವೇಕೆರೆ ಮೂಲದ ಪ್ರಿಯಾಂಕಳನ್ನ ಮಂಜುನಾಥ್ ಮದುವೆಯಾಗಿದ್ದರು.  ದಂಪತಿ ಬೆಂಗಳೂರಿನಲ್ಲಿ ವಾಸವಿದ್ದರು. ಗಂಡ ಹೆಂಡತಿ ನಡುವೆ ಹೊಂದಾಣಿಕೆ ಇಲ್ಲದೆ ಪದೇ ಪದೇ ಗಲಾಟೆ ಆಗ್ತಿತ್ತು. ಮದುವೆಯಾದ ಬಳಿಕ ಪತಿ ಮಂಜುನಾಥ್‌ಗೆ ಪತ್ನಿ ಪ್ರಿಯಾಂಕಾ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಬೆಂಗಳೂರು: ಪ್ರೀತಿ ನಿರಾಕರಿಸಿದವಳಿಗೆ ಚಾಕು ಇರಿದು ಆತ್ಮಹತ್ಯೆಗೆ ಯತ್ನಿಸಿದ ಪಾಗಲ್‌ ಪ್ರೇಮಿ

ನೀನು ಹಳ್ಳಿ ಗುಗ್ಗು ನಿನ್ನನ್ನ ಮದುವೆಯಾಗಲು ನನಗೆ ಇಷ್ಟ ಇರಲಿಲ್ಲ ಎಂದು ಪ್ರಿಯಾಂಕಾ ಪದೇ ಪದೇ ಕಿಚಾಯಿಸುತ್ತಿದ್ದಳು. ಇದೇ ವಿಚಾರಕ್ಕೆ ಇಬ್ಬರ ನಡುವೆ ಪದೇ ಪದೇ ಗಲಾಟೆ ನಡೆಯುತ್ತಿತ್ತು. ಪತ್ನಿಯ ಕಿರುಕುಳಕ್ಕೆ ಮನನೊಂದ ಮಂಜುನಾಥ್‌ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಆತ್ಮಹತ್ಯೆಯ ಮುನ್ನ ತನ್ನ ಸಹೋದರನಿಗೆ ಮಂಜುನಾಥ್ ಆಡಿಯೋ ಮೇಸೆಜ್ ಕಳುಹಿಸಿದ್ದಾರೆ. ನನಗೆ ಅವಳ ಜೊತೆ ಜೀವನ ಮಾಡೋಕೆ ಆಗ್ತಿಲ್ಲ. ಆ ಮನೆ ಹಾಳಿಯಿಂದ ನಾನು ಸಾಯುತ್ತಿದ್ದೇನೆ. ನನ್ನ ಮಕ್ಕಳನ್ನ ಚೆನ್ನಾಗಿ ನೋಡಿಕೊಳ್ಳಿ ಎಂದು ಆಡಿಯೋ ಮೇಸೆಜ್ ಮಾಡಿದ್ದಾರೆ. ಪತ್ನಿ ಪ್ರಿಯಾಂಕ ವಿರುದ್ಧ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

Follow Us:
Download App:
  • android
  • ios