Asianet Suvarna News Asianet Suvarna News

ರಾಯಚೂರು: ಪತ್ನಿ ಕೊಲೆ ಮಾಡಿ ಪತಿ ಆತ್ಮಹತ್ಯೆ, ಪಾಲಕರನ್ನು ಕಳೆದುಕೊಂಡ ಇಬ್ಬರು ಮಕ್ಕಳು ಅನಾಥ

ಗಂಡ-ಹೆಂಡತಿ ನಡುವೆ ಜಗಳ ಉಂಟಾಗಿದ್ದು, ಸಿಟ್ಟಿಗೆದ್ದ ಖಾಶಿಮಯ್ಯ ಕಲ್ಲನ್ನು ಪತ್ನಿ ಅಂಬಮ್ಮಳ ತಲೆಗೆ ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಇದರಿಂದ ಭಯಭೀತಿಗೊಂಡ ಖಾಶಿಮಯ್ಯ ನಂತರ ತಾನು ಸಹ ಅರೋಲಿ ಸೀಮಾದ ಹೊಲದಲ್ಲಿರುವ ಬೇವಿನ ಮರಕ್ಕೆ ತನ್ನ ಲುಂಗಿಯಿಂದ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. 

Husband Committed Suicide After wife Killed at Manvi in Raichur grg
Author
First Published Sep 24, 2023, 9:30 PM IST

ಮಾನ್ವಿ(ಸೆ.24): ಪತ್ನಿಯನ್ನು ಕೊಲೆ ಮಾಡಿದ ಪತಿ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ರಾಜೋಳ್ಳಿ ಗ್ರಾಮದಲ್ಲಿ ಶುಕ್ರವಾರ ಜರುಗಿದೆ. ಅಂಬಮ್ಮ (32) ಕೊಲೆಯಾದ ಪತ್ನಿಯಾಗಿದ್ದು, ಪತಿ ಖಾಶಿಮಯ್ಯ ನಾಯಕ (33) ನೇಣಿಗೆ ಶರಣಾಗಿದ್ದಾನೆ. 

ಪ್ರತಿ ದಿನ ಮದ್ಯ ಕುಡಿದು ಮನೆಗೆ ಬರುತ್ತಿದ್ದ ಪತಿ ಖಾಶಿಮಯ್ಯ, ಕುಡಿಯಲು ದುಡ್ಡು ಕೊಡುವಂತೆ ಪತ್ನಿ ಅಂಬಮ್ಮಳೊಂದಿಗೆ ಜಗಳವಾಡುತ್ತಿದ್ದನು. ಅದೇ ರೀತಿ ಶುಕ್ರವಾರ ಬೆಳಗ್ಗೆ ಸಹ ಗಂಡ-ಹೆಂಡತಿ ನಡುವೆ ಜಗಳ ಉಂಟಾಗಿದ್ದು, ಸಿಟ್ಟಿಗೆದ್ದ ಖಾಶಿಮಯ್ಯ ಕಲ್ಲನ್ನು ಪತ್ನಿ ಅಂಬಮ್ಮಳ ತಲೆಗೆ ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಇದರಿಂದ ಭಯಭೀತಿಗೊಂಡ ಖಾಶಿಮಯ್ಯ ನಂತರ ತಾನು ಸಹ ಅರೋಲಿ ಸೀಮಾದ ಹೊಲದಲ್ಲಿರುವ ಬೇವಿನ ಮರಕ್ಕೆ ತನ್ನ ಲುಂಗಿಯಿಂದ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. 

ವರದಕ್ಷಿಣೆ ಕಿರುಕುಳ: ಮದುವೆಯಾಗಿ ನಾಲ್ಕೇ ತಿಂಗಳಿಗೆ ಮಸಣ ಸೇರಿದ ಯುವತಿ!

ಒಂದೇ ದಿನ ಪಾಲಕರನ್ನು ಕಳೆದುಕೊಂಡ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ. ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಭೇಟಿ ನೀಡಿದ ಎಸ್ಪಿ ನಿಖಿಲ್‌.ಬಿ ಪರಿಶೀಲನೆ ನಡೆಸಿದರು. ಮಾನ್ವಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕ್ಕೆ ಅಣಿಯಾಗಿದ್ದಾರೆ.

Follow Us:
Download App:
  • android
  • ios