ವರದಕ್ಷಿಣೆ ಕಿರುಕುಳ: ಮದುವೆಯಾಗಿ ನಾಲ್ಕೇ ತಿಂಗಳಿಗೆ ಮಸಣ ಸೇರಿದ ಯುವತಿ!
ವರದಕ್ಷಿಣೆ ಹಣಕ್ಕೆ ಪೀಡಿಸುತ್ತಿದ್ದ ಮನೆಯವರ ಕಾಟ ತಾಳಲಾರದೇ ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗದಗ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಉಮಾ ಎಮ್ಮಿ (22) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ಗದಗ (ಸೆ.21): ವರದಕ್ಷಿಣೆ ಹಣಕ್ಕೆ ಪೀಡಿಸುತ್ತಿದ್ದ ಮನೆಯವರ ಕಾಟ ತಾಳಲಾರದೇ ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗದಗ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಉಮಾ ಎಮ್ಮಿ (22) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಮಂಗಳವಾರ ಸಂಜೆ ಮನೆಯಲ್ಲಿ ಅತ್ತೆ ಗಂಡ ಇರುವಾಗಲೇ ರೂಮ್ ಸೆರಿಕೊಂಡಿದ್ದ ಉಮಾ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವರದಕ್ಷಿಣೆ ಕಿರುಕುಳದಿಂದಲೇ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತಾ ಉಮಾ ಪೋಷಕರು ಆರೋಪಿಸಿದ್ದಾರೆ.
ನಾಲ್ಕು ತಿಂಗಳ ಹಿಂದೆ ಮುಂಡರಗಿ ತಾಲೂಕಿನ ರಾಮೇನಹಳ್ಳಿ ಗ್ರಾಮದ ಉಮಾಳನ್ನ ಗದಗ ತಾಲೂಕಿನ ತಿಮ್ಮಾಪುರ ಗ್ರಾಮದ ವಿಷ್ಣು ಎಂಬಾತನ ಜೊತೆಗೆ ಅದ್ಧೂರಿಯಾಗಿ, ಮದುವೆ ಮಾಡಿದ್ರು. ಆದ್ರೆ, ಮದುವೆಯಾದ ನಂತ್ರವೂ ಹಣದಾಹಿ ಗಂಡ ವಿಷ್ಣು, ಉಮಾಳಿಗೆ ಕಿರುಕುಳ ನೀಡ್ತಿದ್ನಂತೆ. ಮದುವೆ ಸಮಯದಲ್ಲಿ 40 ಗ್ರಾಂ ಚಿನ್ನ ಹಾಗೂ 4 ಲಕ್ಷ ಹಣವನ್ನು ನೀಡಿ ಮದುವೆ ಮಾಡಲಾಗಿತ್ತು. ಇನ್ನೂ 50 ಸಾವಿರ ರೂಪಾಯಿ ವರದಕ್ಷಣೆ ಹಣ ಕೊಡುವುದು ಬಾಕಿ ಇತ್ತು. ಹೀಗಾಗಿ ಗಂಡ ಹಾಗೂ ಅತ್ತೆ ಕಿರುಕುಳ ನೀಡ್ತಾಯಿದ್ರು.
ನನ್ನ ಅವಧಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ಕೊಟ್ಟಿದ್ದೆ: ಎಚ್.ಡಿ.ಕುಮಾರಸ್ವಾಮಿ
ಇದ್ರಿಂದ ಬೇಸತ್ತಿದ್ದ ಉಮಾ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅನ್ನೋದು ಪೋಷಕರ ವಾದ. ಸಾವಿನ ಸುದ್ದಿ ತಿಳಿದು ಉಮಾ ಕುಟುಂಬಸ್ಥರು ಗ್ರಾಮಕ್ಕೆ ಬಂದು ಸಾವಿಗೆ ಪತಿ ಹಾಗೂ ಅತ್ತೆಯೇ ಕಾರಣ ಅಂತಾ ಆಕ್ರೋಶ ವ್ಯಕ್ತಪಡಿಸಿದ್ರು. ಅಲ್ದೆ, ನಾಪತ್ತೆಯಾಗಿರೋ ಕಿರಾತಕ ಗಂಡನಿಗೆ ತಕ್ಕ ಶಿಕ್ಷೆ ಯಾಗಬೇಕು ಎಂದು ಒತ್ತಾಯ ಮಾಡಿದ್ದಾರೆ. ಬಿಎಸ್ ಸಿ ಓದಿದ್ದ ಉಮಾ ಒಳ್ಳೆಯ ಸಂಬಂಧ ಅಂತಾ ಎಂಎ ಮುಗಿಸಿದ ವಿಷ್ಣುವಿನ ಜೊತೆಗೆ ಮದುವೆ ಮಾಡಿದ್ರು. ಈ ವಿಷ್ಣು ಬಡ್ಡಿ ವ್ಯವಹಾರ ಮಾಡ್ತಿದ್ದ.. ಹಣದ ಹುಚ್ಚು ಹಿಡಿಸಿಕೊಂಡಿದ್ದ ವಿಷ್ಣುಗೆ ಮೂರುಹೊತ್ತು ಹಣದ್ದೇ ಚಿಂತೆಯಿತ್ತಂತೆ.. ಬಡ್ಡಿ ವ್ಯವಹಾರಸ್ಥನಾಗಿದ್ದ ವಿಷ್ಣು, ಹಿಂಡತಿಗೂ ವರದಕ್ಷಿಣೆ ಹಣದ ವಿಚಾರವಾಗಿ ಕಿರುಕುಳ ಮಾಡ್ತಿದ್ದ.
ಬಿಜೆಪಿ- ಜೆಡಿಎಸ್ ಮೈತ್ರಿಗೆ ಠಕ್ಕರ್ ನೀಡಲು ಸಂಸದ ಡಿಕೆಸು ಮನೆಯಲ್ಲಿ ಸಭೆ
ಉಮಾಳ ಜೊತೆಗೆ ಸರಿಯಾಗಿ ವರ್ತನೆ ಇರಲಿಲ್ಲ. ಶ್ರಾವಣಕ್ಕೆ ಅಂತ ತವರು ಮನೆಗೆ ಹೋಗಿದ್ದ ಉಮಾ ಮೊನ್ನೆ ಸೋಮವಾರ ತವರು ಮನೆಯಿಂದ ಬಂದಿದ್ದಳ್ಳು. ಆದ್ರೆ, ಮಂಗಳವಾರ ಗಂಡನ ಮನೆಯಲ್ಲಿ ಅದೇನ್ ಆಯ್ತೋ ಗೋತ್ತಿಲ್ಲ ಸಂಜೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಗಳು ಆತ್ಮಹತ್ಯೆ ಸುದ್ದಿ ತಿಳಿದು ಊರಿಗೆ ಬಂದ ಉಮಾಳ ತಾಯಿ ಹಾಗೂ ಸಹೋದರ, ನಾಪತ್ತೆಯಾದ ವಿಷ್ಣು ಬಂಧನಕ್ಕೆ ಆಗ್ರಹಿಸಿದ್ದಾರೆ. ಮನೆಗೆ ಮಣ್ಣು ತೂರಿ, ಆ್ಯಂಬುಲೆನ್ಸ್ ಅಡ್ಡಗಟ್ಟಿ ಆಕ್ರೋಶ ಹೊರಹಾಕಿದ್ರು. ಸಾಕಷ್ಟು ವರದಕ್ಷಣೆ ನೀಡಿ ಅದ್ಧೂರಿಯಾಗಿ ಮದುಗೆ ಮಾಡಿದ್ರೂ ಹಣದಾಯಿ ಗಂಡನ ದುರಾಸೆಗೆ ಬಾಳಿ ಬದುಕಬೇಕಿದ್ದ ಮಗಳು ಸಾವಿನ ಮನೆ ಸೇರಿದ್ದಾಳೆ. ನಾಪತ್ತೆಯಾದ ಕಿರಾತಕ ಗಂಡ ವಿಷ್ಣು ಬಂಧಿಸುವಂತೆ ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ. ನೂರಾರು ಕನಸು ಕಂಡು ಮದುವೆಯಾದ ಉಮಾ ನಾಲ್ಕೇ ತಿಂಗಳಲ್ಲಿ ಸಾವಿನ ಮನೆ ಸೇರಿದ್ದು, ದುರಂತವೇ ಸರಿ.