Asianet Suvarna News Asianet Suvarna News

ಕೋಲಾರ: ಅಕ್ರಮ ಸಂಬಂಧ ಪ್ರಶ್ನಿಸಿದ ಗಂಡನಿಗೆ ಹೆಂಡ್ತಿ ಕಿರುಕುಳ, ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಪತಿ..!

ಬೇರೊಬ್ಬನ‌ ಜೊತೆಗೆ ಅಕ್ರಮ ಸಂಬಂಧ ಇಟ್ಟುಕೊಂಡ ವಿಮಲಾ, ಇದನ್ನು ಪ್ರಶ್ನಿಸಿದ ಗಂಡನಿಗೆ ಹಾಗೂ ಗಂಡನ‌ ಮನೆಯವರ ವಿರುದ್ಧ ವರದಕ್ಷಿಣೆ ಕಿರುಕುಳದ ಸುಳ್ಳು ದೂರು ದಾಖಲಿಸಿ ಮಾನಸಿಕ ಕಿರುಕುಳ ನೀಡಿದ್ದಾರೆ. ಇದರಿಂದ ಬೇಸತ್ತ ಸುಧಾಕರನ್ ಆತ್ಮಹತ್ಯೆಗೆ ಯತ್ನಿಸಿ ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ. 

Husband Attempted to Self Death Due to Wife Harassment in Kolar grg
Author
First Published Apr 2, 2024, 11:40 AM IST

ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ 

ಕೋಲಾರ(ಏ.02): ಪತ್ನಿಯ ಕಿರುಕುಳದಿಂದ ಮನನೊಂದು ಪತಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕೋಲಾರದ ಕೆಜಿಎಫ್ ತಾಲ್ಲೂಕಿನ ಅಂಡ್ರಸನ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಮಾರಿಕುಪ್ಪಮ್ ಸೈನಾಟ್ ಲೈನ್‌ನಲ್ಲಿ ಇಂದು(ಮಂಗಳವಾರ) ನಡೆದಿದೆ.  

ಸುಧಾಕರನ್(32) ಎಂಬುವವರು ಅಂಬೇಡ್ಕರ್ ನಗರದ ನಿವಾಸಿ ವಿಮಲಾ(ಹೆಸರು ಬದಲಾಯಿಸಲಾಗಿದೆ) ಎಂಬುವವರನ್ನು ಎರಡು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿ ಸುಖವಾಗಿದ್ದರು. ಆದರೆ ಸುಧಾಕರನ್‌ರವರು ಸಿಂಗಾಪುರಕ್ಕೆ ಕೆಲಸಕ್ಕೆ ಹೋಗಿ ಆರು‌ ತಿಂಗಳಿಗೊಮ್ಮೆ ಮನೆಗೆ ಬರುತ್ತಿದ್ದರು. ಈ ನಡುವೆ ಬೇರೊಬ್ಬನ‌ ಜೊತೆಗೆ ಅಕ್ರಮ ಸಂಬಂಧ ಇಟ್ಟುಕೊಂಡ ವಿಮಲಾ, ಇದನ್ನು ಪ್ರಶ್ನಿಸಿದ ಗಂಡನಿಗೆ ಹಾಗೂ ಗಂಡನ‌ ಮನೆಯವರ ವಿರುದ್ಧ ವರದಕ್ಷಿಣೆ ಕಿರುಕುಳದ ಸುಳ್ಳು ದೂರು ದಾಖಲಿಸಿ ಮಾನಸಿಕ ಕಿರುಕುಳ ನೀಡಿದ್ದಾರೆ. ಇದರಿಂದ ಬೇಸತ್ತ ಸುಧಾಕರನ್ ಆತ್ಮಹತ್ಯೆಗೆ ಯತ್ನಿಸಿ ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಮನೆಯವರು ವಿಮಲಾ ಹಾಗೂ ಅವಳ ಕುಟುಂಬದ ವಿರುದ್ಧ ದೂರು ದಾಖಲಿಸಿ, ತಮಗೆ ನ್ಯಾಯ ಕೊಡಿಸಬೇಕೆಂದು ಮಾಧ್ಯಮದ ಮುಂದೆ ಕಣ್ಣೀರು ಹಾಕಿದ್ದಾರೆ.

ರಾಜಕೀಯ ನಾಯಕನ ಹೆಂಡತಿಗೆ ಇಬ್ಬಿಬ್ಬರು ಬಾಯ್ ಫ್ರೆಂಡ್ಸ್‌; ಅನೈತಿಕ ಸಂಬಂಧಕ್ಕಾಗಿ ಗಂಡನನ್ನೇ ಕೊಂದುಬಿಟ್ಟಳು!

ಘಟನೆಯ ಸಂಬಂಧ ಮಾತನಾಡಿದ ಸುಧಾಕರ್ ಸಹೋದರ ಸುನೀಲ್ ಕುಮಾರ್ "ನಮ್ಮಣ್ಣ ವಿಮಲಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ ಅವರು ಕೆಲಸದ ನಿಮಿತ್ತ ಸಿಂಗಪುರ್ ಗೆ ಹೋಗಿ ಬರುತ್ತಿದ್ದು, ವಿಮಲಾ ಮತ್ತೊಬ್ಬರ ಜೊತೆಗೆ ಅಕ್ರಮ ಸಂಬಂಧ ಹೊಂದಿರುತ್ತಾರೆ. ಇದನ್ನು ಪ್ರಶ್ನಿಸಿದ ನಮ್ಮಣ್ಣನ ಮೇಲೆಯೇ ಸುಳ್ಳು ಆರೋಪ ಹೊರಿಸಿ ಮಾನಸಿಕ ಕಿರುಕುಳ ನೀಡಿದ್ದಾರೆ. ಇವಳ ಜೊತೆಗೆ ಆಕೆಯ ಮನೆಯವರೂ ಇದರಲ್ಲಿ ಶಾಮೀಲಾಗಿದ್ದು, ಇದರಿಂದ ನಮ್ಮಣ್ಣ ಸೂಸೈಡ್ ಗೆ ಯತ್ನಿಸಿರುತ್ತಾರೆ. ಇದರ ಬಗ್ಗೆ ಈಗಾಗಲೇ ಸಿಎಂ, ಹೋಂ ಮಿನಿಸ್ಟರ್ ಸೇರಿದಂತೆ ಹಲವರಿಗೆ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ" ಎಂದು ಹೇಳಿದ್ದಾರೆ. 

ನಂತರ ತಾಯಿ ವಾಸಗಿ ಮಾತನಾಡಿ, ತಮ್ಮ ಸೊಸೆ ಮನೆಗೆ ಬಂದಾಗೆಲ್ಲಾ ನಮ್ಮ ಜೊತೆಗೆ ಜಗಳವಾಡುತ್ತಾ ನಮ್ಮನ್ನು ಬೈಯ್ಯುತ್ತಿದ್ದಳು. ಇದರಿಂದ ನನ್ನ ಮಗ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದಿದ್ದಾರೆ. ಜೊತೆಗೆ ತಂದೆ  ಮಾತಾಡಿ ತಮ್ಮ ಸೊಸೆಗೆ ಬೆಂಗಳೂರಿನಲ್ಲಿ ಮನೆಯನ್ನು ಲೀಸ್ ಗೆ ಹಾಕಿಕೊಟ್ಟು, ಖರ್ಚಿಗೆ ಕೈತುಂಬ ಹಣ ಕೊಟ್ಟಿರುತ್ತಾನೆ. ಆದರೂ ಸಹ ತಾನೇ ತಪ್ಪು ಮಾಡಿ, ಈಗ ನಮ್ಮ ಮೇಲೆ ಸೊಸೆ ವಿಮಲಾ ಹಾಗೂ ಆಕೆಯ ಮನೆಯವರು ಸುಳ್ಳು ವರದಕ್ಷಿಣೆ ಕೇಸ್ ದಾಖಲಿಸಿ ಬಹಳ ಕಿರುಕುಳ ನೀಡುತ್ತಿದ್ದಾರೆ ಎಂದು ಕಣ್ಣೀರು ಹಾಕಿದ್ದಾರೆ.

Follow Us:
Download App:
  • android
  • ios